Advertisement

ನಿಯಮದಂತೆ ವಿದ್ಯುತ್‌ ನೀಡಿ

01:16 PM Jan 22, 2022 | Team Udayavani |

ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಈ ವರ್ಷ ಉತ್ತಮ ಮಳೆ ಹಾಗೂ ಹೇಮಾವತಿ ನೀರುಹರಿಯುತ್ತಿರುವುದರಿಂದ ನೀರಿಲ್ಲದೆ, ಬತ್ತಿಹೋಗಿದ್ದ ಬಹುತೇಕ ಕೊಳವೆ ಬಾವಿಗಳಲ್ಲಿನೀರು ಬರುತ್ತಿದೆ. ಬೇಸಿಗೆ ಆರಂಭದಲ್ಲಿಯೇ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದತೋಟಗಳಿಗೆ ನೀರು ಹಾಯಿಸುವುದೇ ದೊಡ್ಡ ಸಮಸ್ಯೆಯಾಗಿದೆ.

Advertisement

ತಾಲೂಕಿನಲ್ಲಿ ಅಪಾರ ಮಳೆ ಬಂದಿದ್ದರೂಕಳೆದ ಎರಡು ತಿಂಗಳಿಂದ ಬಿಸಿಲಿನ ತಾಪಮಾನಹೆಚ್ಚಾಗಿ ತೋಟಗಳು ಒಣಗಿಹೋಗಿವೆ. ಅಡಿಕೆಮರಗಳಲ್ಲಿ ಹೊಂಬಾಳೆ ಬರುತ್ತಿದೆ. ತೋಟಗಳಿಗೆನೀರು ಹಾಯಿಸುವುದು ಅವಶ್ಯವಾಗಿದೆ.ಆದರೆ, ಬೇಸಿಗೆ ಆರಂಭದಲ್ಲಿಯೇ ವಿದ್ಯುತ್‌ಸಮಸ್ಯೆ ಹೆಚ್ಚಾಗುತ್ತಿರುವುದು ರೈತರಿಗೆ ತಲೆ ಬಿಸಿಯಾಗುತ್ತಿದೆ.

ನಿಗದಿಯಂತೆ ವಿದ್ಯುತ್‌ ನೀಡುತ್ತಿಲ್ಲ: ತಾಲೂಕಿ ನಲ್ಲಿ ಉಪಸ್ಥಾವರದಿಂದ ವಿದ್ಯುತ್‌ ಸರಬರಾಜುಮಾಡಲು ವೇಳಾಪಟ್ಟಿಯನ್ನು ಪ್ರತಿ ಭಾನುವಾರ ಬೆಸ್ಕಾಂ ಅಧಿಕಾರಿಗಳು ಬಿಡುಗಡೆ ಮಾಡುತ್ತಾರೆ.ಬೆಳಗ್ಗೆ 3 ಗಂಟೆ ಹಾಗೂ ರಾತ್ರಿ 3 ರಿಂದ 4ಸಮಯ ಬೋರ್‌ವೆàಲ್‌ಗ‌ಳಿಗೆ ವಿದ್ಯುತ್‌ ನೀಡುತ್ತಾರೆ. ಆದರೆ, ನಿಗದಿ ಮಾಡಿದ ಸಮಯದಅರ್ಧಗಂಟೆ ತಡವಾಗಿ ಕೊಡುವುದು, ಅರ್ಧಗಂಟೆ ಮುಂಚಿತವಾಗಿ ವಿದ್ಯುತ್‌ ತೆಗೆಯುವುದುಹಾಗೂ ಮಧ್ಯ ಮಧ್ಯ ವಿದ್ಯುತ್‌ ತೆಗೆದು ಹಿಂದೆಯೇ ಕರೆಂಟ್‌ ನೀಡುತ್ತಾರೆ. ಕೊಡುವ ಅಲ್ಪ ಸಮಯದಲ್ಲಿ ಹೀಗೆ ವಿದ್ಯುತ್‌ ತೆಗೆಯುವುದರಿಂದ ಹೇಗೆ ತೋಟಗಳಿಗೆ ನೀರು ಹಾಯಿಸುವುದು ಎಂಬ ಆತಂಕ ರೈತರಲ್ಲಿ ಮೂಡಿದೆ.

ಮಧ್ಯರಾತ್ರಿ ನೀರು ಹಾಯಿಸಲು ಸಾಧ್ಯವೇ:ತಾಲೂಕಿನಲ್ಲಿ ಈ ವಾರದ ಉಪಸ್ಥಾವರದಿಂದವಿದ್ಯುತ್‌ ಸರಬರಾಜು ಪೂರಕಗಳ ವೇಳಾಪಟ್ಟಿಯಲ್ಲಿ ಎಫ್ 17, ಎಫ್ 4 ದುರ್ಗದ ಕೆರೆಬಾವನಹಳ್ಳಿ, ಎಫ್ 8, ಎಫ್ 15 ಮಾರಸಂದ್ರ,ರಾಯಪ್ಪನಪಾಳ್ಯ ಬೆಳಗಿನ ಜಾವ 2 ಗಂಟೆಗೆವಿದ್ಯುತ್‌ ನೀಡಲಾಗುತ್ತಿದೆ. ಹೀಗೆ ಮಧ್ಯರಾತ್ರಿ 11 ಗಂಟೆ, 12 ಗಂಟೆಗೆ ವಿದ್ಯುತ್‌ ನೀಡುತ್ತಿದ್ದಾರೆ.

ಈ ಸಮಯದಲ್ಲಿ ತೋಟಗಳಿಗೆ ಒಬ್ಬಂಟಿಗ ರೈತಒಬ್ಬನೇ ಹೋಗಿ ನೀರು ಹಾಯಿಸಲು ಸಾಧ್ಯವೇ.ಮನೆಯಿಂದ ಕಿಲೋ ಮೀಟರ್‌ ಗಟ್ಟಲೇತೋಟವಿರುವ, ತೋಟಗಳಿಗೆ ರೈತ ಹೋಗಲುಸಾಧ್ಯವೇ ಎಂಬ ಸಾಮಾನ್ಯ ಮಾನವೀಯತೆಬೆಸ್ಕಾಂ ಅಧಿಕಾರಿಗಳಿಗೆ ಇಲ್ಲವೇ ಎಂದು ರೈತರು ಪ್ರಶ್ನಿಸಿದ್ದಾರೆ.

Advertisement

ಮೋಟರ್‌ ಸುಟ್ಟರೆ ರೈತ ಸಾಲಗಾರ: ಕೃಷಿಕೋಳವೆ ಬಾವಿಗಳ ಮೋಟರ್‌ ವಿದ್ಯುತ್‌ವ್ಯತ್ಯಯದಿಂದ ಸುಟ್ಟು ಹೋದರೆ ಕನಿಷ್ಠ 5 ರಿಂದ15 ಸಾವಿರ ರೂ. ಬೇಕು. ಕೇಬಲ್‌ ಸುಟ್ಟರೆಮೋಟರ್‌ ಎತ್ತಿ, ಇಳಿಸಲು ಒಂದು ಲೆಂತ್‌ ಪೈಪ್‌ಗೆ ನೂರು ರೂ. ಇದಕ್ಕೆ ಕನಿಷ್ಠ 5 ಸಾವಿರ ಬೇಕು.ರೈತರು ಬದುಕುವುದು ಹೇಗೆ? ಬೆಸ್ಕಾಂ ಅಧಿಕಾರಿಗಳು ಕೊಡುವ ವಿದ್ಯುತ್‌ನಲ್ಲಿ ಪದೇ ಪದೆವಿದ್ಯುತ್‌ ತೆಗೆದರೆ ಹೇಗೆ, ಮೋಟರ್‌, ಕೇಬಲ್‌ಸುಟ್ಟರೇ ವರ್ಷದ ಆದಾಯ ನೋಡುತ್ತಿರುವರೈತ ಮೋಟರ್‌ ರಿಪೇರಿಗೆ ಹಣ ಹೇಗೆ ಹೊಂದಿಸಿಕೊಳ್ಳುತ್ತಾನೆ. ಮೋಟಾರ್‌ ರಿಪೇರಿಗೆಮತ್ತೆ ಸಾಲ ಮಾಡಿ ಬಡ್ಡಿ ಕಟ್ಟಬೇಕಾಗುತ್ತದೆ.ರೈತರ ಕೊಳವೆ ಬಾವಿಗೆ ಏಳು ಗಂಟೆ ವಿದ್ಯುತ್‌ನೀಡಬೇಕು. ರೈತರು ತೋಟಗಳಿಗೆ ಹೋಗಲುಅನುಕೂಲವಾಗುವ ಸಮಯದಲ್ಲಿ ವಿದ್ಯುತ್‌ನೀಡಬೇಕು. ಕೊಡುತ್ತಿರುವ ಸಮಯದಲ್ಲಿವಿದ್ಯುತ್‌ ತೆಗೆಯದೇ ವಿದ್ಯುತ್‌ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಕರೆ ಸ್ವೀಕರಿಸಿಲ್ಲ  :  ಚಿಕ್ಕನಾಯಕನಹಳ್ಳಿಯಲ್ಲಿ ವಿದ್ಯುತ್‌ಸಮಸ್ಯೆಯ ಬಗ್ಗೆ ವಿಚಾರಿಸಲು ಬೆಸ್ಕಾಂ ವ್ಯವಸ್ಥಾಪಕ ಎಂಜಿನೀಯರ್‌ ಅವರನ್ನು ಉದಯವಾಣಿ ದೂರವಾಣಿಯ ಮೂಲಕ ಸಂಪರ್ಕಿಸಲು ಪ್ರಯತ್ನ ಮಾಡಿದ್ದು, ಅವರುಕರೆಯನ್ನು ಸ್ವೀಕರಿಸಿಲ್ಲ.

ಸರ್ಕಾರದ ಜನವಿರೋಧಿ, ರೈತವಿರೋಧಿ ಕಾರ್ಯಕ್ರಮದಿಂದಜನರಿಗೆ ಬೇಸರವಾಗಿದೆ. ಹೆಚ್ಚು ತೆರಿಗೆಸುಲಿಗೆ, ದುಬಾರಿ ಬೆಲೆಯ ಕೃಷಿ,ವಿದ್ಯುತ್‌ ಉಪಕರಣಗಳನ್ನುಕೊಳ್ಳಲಾಗದೇ ರೈತರು ನೋವುಅನುಭವಿಸುತ್ತಿದ್ದಾರೆ. ವಿದ್ಯುತ್‌ಸಮಸ್ಯೆ ಎಂಬ ಮತ್ತೂಂದುಕಾಟಕೊಡಬೇಡಿ, ಸರಿ ಸಮಯಕ್ಕೆವಿದ್ಯುತ್‌ ನೀಡಬೇಕು. -ಷಡಕ್ಷರಿ ಶಂಕರಲಿಂಗಪ್ಪ, ಪ್ರಗತಿಪರ ಕೃಷಿಕ, ತರಬೇನಹಳ್ಳಿ

 

-ಚೇತನ್‌

Advertisement

Udayavani is now on Telegram. Click here to join our channel and stay updated with the latest news.

Next