Advertisement

PSI Parshuram ಕುಟುಂಬಕ್ಕೆ ಪರಿಹಾರ ಕೊಡಿ: ಛಲವಾದಿ ಆಗ್ರಹ

08:02 PM Sep 22, 2024 | Team Udayavani |

ಬೆಂಗಳೂರು: ಯಾದಗಿರಿ ಪಿಎಸ್‌ಐ ಪರಶುರಾಮ್ ಸಾವಿಗೆ ನ್ಯಾಯ ಒದಗಿಸಬೇಕು. ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ಮತ್ತು ಅವರ ಮಗ ಪಂಪನಗೌಡ ಅವರನ್ನು ಬಂಧಿಸಬೇಕು. ಸರ್ಕಾರ ಈ ಹಿಂದೆ ಕೊಟ್ಟಿದ್ದ ಆಶ್ವಾಸನೆಯಂತೆ 50 ಲಕ್ಷ ರೂ. ಪರಿಹಾರ ಒದಗಿಸುವ ಕುರಿತು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

Advertisement

ಯಾದಗಿರಿ ನಗರ ಪೊಲೀಸ್‌ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮೃತ ಪಿಎಸ್‌ಐ ಪಿಎಸ್‌ಐ ಪರಶುರಾಮ್ ಅವರ ಸ್ವಗ್ರಾಮಕ್ಕೆ ಆ.8ರಂದು ಗೃಹ ಸಚಿವರು ಭೇಟಿ ನೀಡಿ ಸಾಂತ್ವನ ಹೇಳುವ ಸಂದರ್ಭದಲ್ಲಿ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಹಾಗೂ ಅವರ ಪತ್ನಿ ಶ್ವೇತಾಗೆ ಸೂಕ್ತ ಸರ್ಕಾರಿ ಕೆಲಸ ನೀಡುವುದಾಗಿ ಆಶ್ವಾಸನೆ ನೀಡಿರುವುದು ಗಮನಿಸಿದ್ದೇನೆ. ಆದರೆ ಆಶ್ವಾಸನೆಯನ್ನು ನೀಡಿ 45 ದಿನಗಳು ಕಳೆದರೂ ಕೂಡ ಅವರಿಗೆ ಯಾವುದೇ ರೀತಿಯ ಪರಿಹಾರ ನೀಡಿದೇ ಇರುವುದು ಮತ್ತು ಪರಿಹಾರ ಪ್ರಕ್ರಿಯೆಯನ್ನು ಪ್ರಾರಂಭ ಮಾಡದೇ ಇರುವುದೇ ಖೇದಕರ ವಿಷಯ ಎಂದು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next