Advertisement

ಶಾಸಕ ಜೆ.ಟಿ.ಪಾಟೀಲಗೆ ತಕ್ಕ ಉತ್ತರ ನೀಡಿ: ಮುರುಗೇಶ

04:58 PM May 05, 2018 | |

ಬೀಳಗಿ: ಬಡವರು ಆಶ್ರಯ ಮನೆ ಕಟ್ಟಿಕೊಳ್ಳಬೇಕೆಂದರೂ ಒಂದು ಹಿಡಿ ಮರುಳು ಕೂಡ ಸಿಗದಂತೆ ಮಾಡಿದ ಸ್ಥಳೀಯ
ಶಾಸಕ ಜೆ.ಟಿ.ಪಾಟೀಲರಿಗೆ ಮೇ 12ರಂದು ಚುನಾವಣೆಯಲ್ಲಿ ಮತದಾರ ಪ್ರಭುಗಳು ತಕ್ಕ ಉತ್ತರ ನೀಡಬೇಕು. ಬಿಜೆಪಿಗೆ ನಿಮ್ಮ ಅಮೂಲ್ಯ ಮತಗಳನ್ನು ನೀಡುವುದರೊಂದಿಗೆ ನನ್ನನ್ನು ವಿಧಾನಸಭೆಗೆ ಕಳುಹಿಸಬೇಕೆಂದು ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಮುರುಗೇಶ ನಿರಾಣಿ ಮತದಾರರಲ್ಲಿ ಮನವಿ ಮಾಡಿದರು.

Advertisement

ತಾಲೂಕಿನ ಮನ್ನಿಕೇರಿ ಯತ್ನಟ್ಟಿ-ಬಾದರದಿನ್ನಿ, ಹೊನ್ನಿಹಾಳ ಗ್ರಾಮದಲ್ಲಿ ತಮ್ಮ ಪರ ಶುಕ್ರವಾರ ಮತಯಾಚಿಸಿ ಅವರು ಮಾತನಾಡಿದರು. ಸ್ಥಳೀಯ ಶಾಸಕರು ತಮ್ಮ 5 ವರ್ಷದ ಅವಧಿಯಲ್ಲಿ ಯಾವ ಕೆಲಸ ಮಾಡಿದ್ದಾರೆ ಎನ್ನುವ ಸಂಗತಿ ಕ್ಷೇತ್ರದ ಜನತೆಗೆ ಗೊತ್ತಿದೆ. ಬಿಜೆಪಿ ಅಧಿಕಾರದ ನನ್ನ ಅವಧಿಯಲ್ಲಿ ಮನ್ನಿಕೇರಿ ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಗೆ ಒಳಪಡಿಸಿದ್ದೇನೆ. ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿ, ಹೈಸ್ಕೂಲ್‌ ನಿರ್ಮಾಣ ಇನ್ನೂ ಅನೇಕ ಸೌಲಭ್ಯಗಳನ್ನು ದೊರಕಿಸಲಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ರೈತರ ಸಾಲಮನ್ನಾ ಮಾಡುವ ಸಂಕಲ್ಪವನ್ನು ಯಡಿಯೂರಪ್ಪನವರು ಮಾಡಿದ್ದಾರೆ. ಮುಳುಗಡೆ ಭೂಮಿಗೆ ವೈಜ್ಞಾನಿಕವಾಗಿ ಸೂಕ್ತ ಪರಿಹಾರ. ಎಲ್ಲರಿಗೂ ಅತೀ ಅವಶ್ಯವಾಗಿರುವ ಸಮರ್ಪಕ ಮರಳು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ಸಮಗ್ರ ಅಭಿವೃದ್ಧಿಗೆ ಯಡಿಯೂರಪ್ಪನವರನ್ನು ಮತ್ತೆ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಬಿಜೆಪಿಗೆ ಮತಗಳನ್ನು ನೀಡುವ ಮೂಲಕ ನನ್ನನ್ನು ನಿಮ್ಮ ಮನೆಯ ಮಗನೆಂದು ತಿಳಿದು ಆಶೀರ್ವದಿಸಬೇಕು ಎಂದು ವಿನಂತಿಸಿದರು.

ಇದಕ್ಕೂ ಮೊದಲು ಮನ್ನಿಕೇರಿ ಗ್ರಾಮದಲ್ಲಿ ಪ್ರಮುಖ ಬೀದಿಯಲ್ಲಿ ನೂರಾರು ಕಾರ್ಯಕರ್ತರ ಹರ್ಷೋದ್ಘಾರಗಳ ಮಧ್ಯೆ ತೆರೆದ ವಾಹನದಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿಯವರ ಮೆರವಣೆಗೆ ಮಾಡಲಾಯಿತು. ಸಂತೋಷ ಏಳೆಮ್ಮಿ, ಪಿಎಲ್‌ಡಿ ಬ್ಯಾಂಕ್‌ ಸದಸ್ಯ ನಾಗಪ್ಪ ಮೇಟಿ, ಮಲಕಾಜಪ್ಪ ಕೊಟಗಿ, ಶ್ರೀಶೈಲ ಕೋರಿಶೆಟ್ಟಿ, ಶ್ರೀಶೈಲ ಹೊಸಮನಿ, ಪರಸಪ್ಪ ಕರಿಗೊಂಡ, ಸಂಗಪ್ಪ ವಾಲೀಕಾರ, ಮಲ್ಲಪ್ಪ ಕಿರಶ್ಯಾಳ, ಹನುಮಂತ ಮೇತ್ರಿ, ಯಲ್ಲಪ್ಪ ಹಳ್ಳೂರ, ವಿಟ್ಠಲ ಬಾರಕೇರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next