Advertisement

ಗುಲಾಬಿ ಹೂವು ನೀಡಿ ಗಾಂಧೀ ಗಿರಿಯೊಂದಿಗೆ ವಾಹನ ಸವಾರರಿಗೆ ಎಚ್ಚರಿಕೆ

01:00 AM Feb 19, 2019 | Harsha Rao |

ಪಡುಬಿದ್ರಿ: ರಸ್ತೆ ನಿಯಮ ಉಲ್ಲಂಘಿಸಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ಗುರುತಿಸಿ ಅವರಿಗೆ ಗುಲಾಬಿ ಹೂವನ್ನು ನೀಡುವ ಮೂಲಕ ಗಾಂಧೀ ಗಿರಿಯೊಂದಿಗೆ ವಾಹನ ಸವಾರರನ್ನು ಸೋಮವಾರದಂದು ಪಡುಬಿದ್ರಿ ಪೇಟೆಯಲ್ಲಿ ಎಚ್ಚರಿಸ ಲಾಯಿತು. ಇನ್ನು ಮುಂದೆ ಸಂಚಾರ ನಿಯಮ ಉಲ್ಲಂಘಿಸದೆ ಪ್ರಯಾಣಿ ಸುವಂತೆ ಹಿತವಚನವನ್ನೂ ಈ ಸಂದರ್ಭದಲ್ಲಿ ನೀಡಲಾಯಿತು. 

Advertisement

ಪಡುಬಿದ್ರಿ ಪೊಲೀಸರು, ಕರವೇ (ಪ್ರವೀಣ್‌ ಶೆಟ್ಟಿ ಬಣ) ಮತ್ತು ಸಾರ್ವಜನಿಕರು ಬೆಳಿಗ್ಗೆ ಪಡುಬಿದ್ರಿ – ಕಾರ್ಕಳ ಕೂಡು ರಸ್ತೆಯಲ್ಲಿ ನಿಂತು ಹೆಲ್ಮೆಟ್‌ ಧರಿಸದ ದ್ವಿಚಕ್ರ ವಾಹನ, ಸೀಟ್‌ ಬೆಲ್ಟ್ ಧರಿಸದ ಕಾರು ಚಾಲಕರು ಹಾಗೂ ಇತರ ಸಂಚಾರ ನಿಯಮ ಉಲ್ಲಂಘಿಸಿ ಸಂಚರಿಸುವ ವಾಹನಗಳನ್ನು ಗುರುತಿಸಿ ಗುಲಾಬಿ ಹೂವನ್ನು ನೀಡಲಾಯಿತು. ಇನ್ನು ಮುಂದೆ ಸಂಚಾರ ನಿಯಮ ಯಲ್ಲಂಘಿಸದಂತೆ ಕರವೇ ಕಾರ್ಯ ಕರ್ತರು ಮನವಿ ಮಾಡಿದರು. ನಿರಂತರ ಅಪಘಾತಗಳು ಸಂಭವಿಸುವ ಬಗ್ಗೆ ಮಾಹಿತಿ ನೀಡಿ ಸುಗಮ ಸಂಚಾರಕ್ಕೆ ಸಹಕರಿಸುವಂತೆ ವಿನಂತಿಸಲಾಯಿತು.

ಈ ಸಂದರ್ಭ ಪಡುಬಿದ್ರಿ ಠಾಣಾ ಎಎಸ್‌ಐ ಜಯ ಕೆ., ಎಚ್‌ಸಿಗಳಾದ ರುದ್ರೇಶ್‌ ಮತ್ತು ಯೋಗೀಶ್‌, ಕರವೇ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್‌ ಅಹಮ್ಮದ್‌, ಕಾಪು ತಾಲೂಕು ಉಪಾಧ್ಯಕ್ಷ ಆಸಿಫ್‌ ಆಪತ್ಭಾಂಧವ, ಪಡುಬಿದ್ರಿ ಗ್ರಾ. ಪಂ. ಸದಸ್ಯ ಹಸನ್‌ ಬಾವ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next