Advertisement

ಚಿಟ್ಟೆ ಬೆನ್ಮೇಲೆ ಇನ್ನೊಂದ್ ಚಿಟ್ಟೆ

03:54 PM May 30, 2019 | sudhir |

ಹೆಣ್ಣು ಮಕ್ಕಳು ಟ್ಯಾಟೂಗಳ ಮೊರೆ ಹೋಗೋದಕ್ಕೆ ಬಹಳಷ್ಟು ಕಾರಣಗಳಿವೆ. ಕಲಾತ್ಮಕ ಸ್ವಾತಂತ್ರ್ಯ, ಸಾಂಸ್ಕೃತಿಕ ಸಂಪ್ರದಾಯಗಳು, ಅಧ್ಯಾತ್ಮ, ವೈಯಕ್ತಿಕ ನಿರೂಪಣೆ, ಬಂಡಾಯ ಮನೋಭಾವ…ಒಟ್ಟಾರೆಯಾಗಿ ಹೇಳ್ಬೇಕಂದ್ರೆ, ಹುಡುಗರು ನೋಡ್ಬೇಕು ಅನ್ನೋದಕ್ಕಿಂತ ಮುಖ್ಯವಾಗಿ, ತನ್ನನ್ನು ತಾನು ವಿಭಿನ್ನವಾಗಿ ಗುರುತಿಸಿಕೊಳ್ಳುವ ಹಂಬಲವಷ್ಟೇ ಆಕೆಯದ್ದು…

Advertisement

ದಿನಕ್ಕೊಂದು ಟ್ರೆಂಡ್‌ ಹಿಂದೆ ಬೀಳ್ಳೋ ಫಾಸ್ಟ್ ಫಾರ್ವರ್ಡ್‌ ಯುಗದಲ್ಲಿ ಸದ್ಯಕ್ಕೆ ಟ್ರೆಂಡಿಂಗ್‌ನಲ್ಲಿರೋದು ಟ್ಯಾಟೂ ಸಂಸ್ಕೃತಿ. ಗಂಡು ಮಕ್ಳು, ಹೆಣ್ಣು ಮಕ್ಳು, ದೊಡ್ಡೋರು, ಚಿಕ್ಕೋರು ಅನ್ನೋ ಭೇದವಿಲ್ಲದೆ ಎಲ್ಲರೂ ಈ ಹಚ್ಚೆಗಳಿಗೆ ಮೆಚ್ಚುಗೆಯ ಅಚ್ಚು ಒತ್ತಿ ಬಿಟ್ಟಿ¨ªಾರೆ. ಹಿಂದೆಲ್ಲ ಇದಕ್ಕೆ, ಹಚ್ಚೆ ಹಾಕಿಸಿಕೊಳ್ಳೋದು, ಹಸಿರು ಹುಯ್ಸಿಕೊಳ್ಳೋದು ಅಂತಿದ್ರಂತೆ. ಹಿಂದಿನ ಕಾಲದಲ್ಲಿ ಹಚ್ಚೆ ಹಾಕೋದಕ್ಕೆ ಅಂತಾನೆ ಅಜ್ಜಿಗಳು ಬರೋರಂತೆ. ಏಳು ಸೂಜಿಗಳನ್ನ ಒಟ್ಟಿಗೆ ಸೇರಿಸಿಕೊಂಡು, ನೋವು ಮರೆಸೋದಕ್ಕೆ ಹಾಡು ಹಾಡುತ್ತಾ, ನೋವು ಗೊತ್ತೇ ಆಗಿªರೋ ಥರ ಕಣ್ಮುಚ್ಚಿ ಕಣ್ಣು ಬಿಡೋದೊÅಳಗೆ ಹಚ್ಚೆ ಹಾಕಿ ಬಿಡ್ತಿದ್ರಂತೆ. ಹಳೆ ಕಾಲದ ಅಜ್ಜಿಯರನ್ನ ಗಮನಿಸಿ, ಅವರು ಸಾಮಾನ್ಯವಾಗಿ ಹಚ್ಚೆ ಹಾಕಿಸ್ಕೊಂಡಿರ್ತಾರೆ. ಆದ್ರೆ, ಹಚ್ಚೆ ಹಾಕಿಸಿರೋ ಅಜ್ಜಂದಿರು ಕಾಣಸಿಗೋದು ತುಂಬಾನೇ ಅಪರೂಪ.

ಆಗೆಲ್ಲ ಹಚ್ಚೆಗಳು ಅಂದ್ರೆ ಮುಂಗೈ ಮೇಲೆ ಮೂರು ಚುಕ್ಕಿ, ಹಣೆಯ ಮೇಲೊಂದು ಬೊಟ್ಟು, ಸಣ್ಣ ರಂಗವಲ್ಲಿಯ ಚಿತ್ತಾರ, ಆತ್ಮೀಯರ ಹೆಸರು… ಇಷ್ಟಕ್ಕೇ ಸೀಮಿತವಾಗಿತ್ತು. ಅದೇ ಹಚ್ಚೆ, ಈಗ ಟ್ಯಾಟೂ ರೂಪ ಪಡೆದು ಸ್ಟೈಲಿಶ್‌ ಆಗಿ ಎಂಟ್ರಿ ಕೊಟ್ಟಿದೆ. ವಿವಿಧ ಬಣ್ಣ ಹಾಗೂ ಡಿಸೈನ್‌ಗಳಲ್ಲಿ, ತುಂಡೈಕ್ಳ ಕೈಯಲ್ಲಿ, ತೋಳಲ್ಲಿ, ಕತ್ತಲ್ಲಿ, ಸೊಂಟದಲ್ಲಿ, ಹೀಗೆ ಟ್ಯಾಟೂ ರಾರಾಜಿಸದ ಭಾಗವೇ ಇಲ್ಲವೇನೋ!

ಹೆಣ್ಮಕ್ಕಳೇ ಮುಂದು…
ಯಾಕೋ ಗೊತ್ತಿಲ್ಲ, ಈ ಟ್ಯಾಟೂಗಳಿಗೂ, ಹೆಣ್ಣುಮಕಿÛಗೂ ಏನೋ ಸ್ಪೆಷಲ್‌ ಕನೆಕ್ಷನ್‌ ಇದೆ ಅನ್ನಿಸುತ್ತೆ. ಇತ್ತೀಚಿಗೆ ನಡೆಸಿರೋ ಒಂದು ಸಮೀಕ್ಷೆ ಪ್ರಕಾರ, ವಿಶ್ವಾದ್ಯಂತ ಹಚ್ಚೆ ಹಾಕಿಸ್ಕೊಳ್ಳೋರ ಸರಾಸರಿ ಸಂಖ್ಯೆಯಲ್ಲಿ ಹೆಣ್ಣುಮಕ್ಕಳೇ ಮುಂದಿದ್ದಾರಂತೆ. ಒಂದು ಕಾಲದಲ್ಲಿ ಇಂಜೆಕ್ಷನ್‌ ಚುಚ್ಚಿಸಿಕೊಳ್ಳೋಕೂ ಹೆದರಿಕೊಂಡು ಕೂರ್ತಿದ್ದ ನಮ್ಮ ಹುಡ್ಗಿàರು, ಈಗ ಆದ¨ªಾಗಲಿ ಅಂತ ಟ್ಯಾಟೂ ಶಾಪ್‌ ಬಾಗಿಲು ಬಡೀತಿದಾರೆ. ಮದರಂಗಿ ಹಚೊRಂಡು ಖುಷಿಯಾಗಿದ್ದವರೆಲ್ಲ, ಈ ಪರ್ಮನೆಂಟ್‌ ಮೆಹಂದಿಯ ಹಿಂದೆ ಬಿದ್ದಿದಾರೆ.

ಎಲ್ಲರ ಕಣ್ಣೂ ಇದರ ಮೇಲೆ
“ಮಗಾ, ಚಿಟ್ಟೆ ಬೆನ್ಮೆಲೆ ಇನ್ನೊಂದು ಚಿಟ್ಟೆ ನೋಡೋ…’ ಪಾರ್ಕ್‌ ನಲ್ಲಿ ಸಂಜೆ ಸುತ್ತಾಡೋವಾಗ ತರಲೆ‌ ಹುಡುಗರ ಬಾಯಿಗೆ ಸಿಕ್ಕಿ ಬಿದ್ದಿದ್ದು, ತೆಳ್ಳಗಿನ ಹುಡುಗಿಯೊಬ್ಬಳ ಬೆನ್ನಲ್ಲಿ ಕೂತಿದ್ದ ಹಸಿರು ಚಿಟ್ಟೆ. ಥರ ಥರದ ಬಣ್ಣವಿಲ್ಲದೆ, ಹಸಿರಾಗಿ ಜೀವ ತಳೆದು, ಚರ್ಮದ ಒಳಗೆ ತೂರಿಕೊಂಡು, ಚೆಂದಗಿನ ಹಚ್ಚೆಯಾಗಿ ಕೂತು ಬಿಟ್ಟಿತ್ತು. ಆ ಹುಡುಗಿ, ಮುಜುಗರ ಹಾಗೂ ಕೋಪದಿಂದ ಆ ತರ್ಲೆ ಹುಡುಗರನ್ನು ಗುರಾಯಿಸಿದಳು. ಹುಡುಗರೇನೋ ಸುಮ್ಮನಾದ್ರು, ನಾನು ಮಾತ್ರ ಆ ಚಿಟ್ಟೆಯನ್ನೇ ನೋಡುತ್ತಾ ಕೂತಿ¨ªೆ. ಕಣ್ಣುಗಳು ಮತ್ತೆ ಮತ್ತೆ ಅತ್ತ ಕಡೆಗೇ ವಾಲುತ್ತಿದ್ದವು. ನೀವು ಏನೇ ಹೇಳಿ, ಈ ಟ್ಯಾಟೂಗಳು ಸಿಕ್ಕಾಪಟ್ಟೆ ಅಟ್ರ್ಯಾಕ್ಟಿವ್‌. ನೋಡಿ ಅದ್ಯಾವ ಘಳಿಗೆಯಲ್ಲಿ ಆ ಚಿಟ್ಟೆಯನ್ನ ನೋಡಿದೊ°à, ನನ್ನ ಬೆನ್ನಿಗೂ ಅಂಥದ್ದೇ ಒಂದು ಚಿಟ್ಟೆಯ ಚಿತ್ತಾರ ಬೇಕು ಅನ್ನಿಸತೊಡಗಿದೆ. ಆದ್ರೆ ಯಾಕೋ ಗೊತ್ತಿಲ್ಲ ನನ್ನೊಳಗಿರೋ ನಾನು ಮಾತ್ರ, “ಬೇಡ್ವೇ ಹುಡುಗಿ’ ಅಂತ ಅಡ್ಡಗಾಲು ಹಾಕ್ತಾನೇ ಇದಾಳೆ …

Advertisement

ಸ್ವಾತಂತ್ರ್ಯದ ಸಂಕೇತ
ಇಲ್ಲಿ ಟ್ಯಾಟೂ ಅನ್ನೋದು ನೆಪ ಅಷ್ಟೇ. ನಾನು ಹೇಳ್ಳೋದಕ್ಕೆ ಹೊರಟಿರೋದು ಏನಂದ್ರೆ, ಇಲ್ಲಿ ಪುರುಷರು, ಮಹಿಳೆಯರು ಅನ್ನೋದು ನಂತರದ ಪ್ರಶ್ನೆ. ಮೊದಲು ನಾವೆಲ್ಲರೂ ಮನುಷ್ಯರು. ನಮ್ಮ ದೇಹವನ್ನು ನಮ್ಮಿಷ್ಟದ ಹಾಗೆ ಅಲಂಕರಿಸಿಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಪ್ರತಿಯೊಬ್ಬರೂ ಅದನ್ನ ಗೌರವಿಸಬೇಕು. ಹುಡ್ಗಿàರು ಟ್ಯಾಟೂ ಹಾಕಿಸಿಕೊಳ್ಳೋದು, ಬಯಸಿ ಬಯಸಿ ಮೆಹಂದಿ ಬಿಡಿಸ್ಕೊಳ್ಳೋವಷ್ಟೇ ಸಹಜ. ಅದು ತಾತ್ಕಾಲಿಕ, ಇದು ಶಾಶ್ವತ, ಅಷ್ಟೇ ವ್ಯತ್ಯಾಸ.

ಹೆಣ್ಣು ಮಕ್ಕಳು ಟ್ಯಾಟೂಗಳ ಮೊರೆ ಹೋಗೋದಕ್ಕೆ ಬಹಳಷ್ಟು ಕಾರಣಗಳಿವೆ. ಕಲಾತ್ಮಕ ಸ್ವಾತಂತ್ರÂ, ಸಾಂಸ್ಕೃತಿಕ ಸಂಪ್ರದಾಯಗಳು, ಅಧ್ಯಾತ್ಮ, ವೈಯಕ್ತಿಕ ನಿರೂಪಣೆ, ಬಂಡಾಯ ಮನೋಭಾವ…ಒಟ್ಟಾರೆಯಾಗಿ ಹೇಳ್ಬೇಕಂದ್ರೆ, ಹುಡುಗರು ನೋಡ್ಬೇಕು ಅನ್ನೋದಕ್ಕಿಂತ ಮುಖ್ಯವಾಗಿ, ತನ್ನನ್ನು ತಾನು ವಿಭಿನ್ನವಾಗಿ ಗುರುತಿಸಿಕೊಳ್ಳುವ ಹಂಬಲವಷ್ಟೇ ಆಕೆಯದ್ದು. ಅದಕ್ಕೆ ಒತ್ತು
ಕೊಡುವಂತೆ ಬಣ್ಣ ಬಣ್ಣದ ಈ ಟ್ಯಾಟೂಗಳು, ಸ್ವಾಭಾವಿಕ ವಾಗಿಯೇ ಒಳ್ಳೆಯ ಆಯ್ಕೆ ಅನ್ನಿಸಿಬಿಡುತ್ತವೆ.

ಡ್ರೆಸ್‌ ನೋಡಿ ತೀರ್ಪು ಕೊಡಬೇಡಿ…
ಒಂದು ಹುಡುಗಿಯ ವ್ಯಕ್ತಿತ್ವವನ್ನು ಅವಳು ತೊಡುವ ಬಟ್ಟೆ, ಸೌಂದರ್ಯ, ಬಾಹ್ಯ ರೂಪವನ್ನು ನೋಡಿ ಜಡ್ಜ್ ಮಾಡೋದನ್ನು ನಿಲ್ಲಿಸಿ. ಸ್ವತಂತ್ರವಾಗಿ ಬದುಕುವ ಹಕ್ಕು ಎಲ್ಲರಿಗೂ ಇದೆ. ಇಷ್ಟೆಲ್ಲಾ ಮುಂದುವರೆದಿರೋ ನಾಗರಿಕ ಸಮಾಜದಲ್ಲಿ ಒಂದು ಸಣ್ಣ ಟ್ಯಾಟೂವನ್ನು ಮಹಿಳೆಯ ವ್ಯಕ್ತಿತ್ವವನ್ನು ಅಳೆಯೋ ಮಾನದಂಡ ಮಾಡಿಕೊಂಡಿರೋದು ಎಷ್ಟು ಸರಿ? ಇದನ್ನು ಓದಿ ಒಂದಿಬ್ಬರ ಮನಸ್ಥಿತಿಯಲ್ಲಿ ಬದಲಾವಣೆ ಕಂಡರೂ, ನನ್ನ ಉದ್ದೇಶಕ್ಕೆ ಸಾರ್ಥಕ್ಯ ದೊರಕಿದಂತೆ. ಯಾಕಂದ್ರೆ, ಎಷ್ಟೋ ವರ್ಷಗಳಿಂದ ಬದಲಾಗದ ಯೋಚನಾ ಲಹರಿಯನ್ನು ಬದಲಿಸು ­ತ್ತೇನೆ ಅನ್ನೋ ಭ್ರಮೆ ಖಂಡಿತಾ ನಂಗಿಲ್ಲ.

ಟೀಕೆ ಎದುರಿಸಲು ರೆಡಿಯಾಗಿರಿ
ಮಲೈಕಾ ಅರೋರಾಳ ಸೊಂಟದ ಮೇಲೆ ಅಥವಾ ಆಲಿಯಾಳ ಕುತ್ತಿಗೆಯ ಮೇಲಿರೋ ಟ್ಯಾಟೂ, ನಮ್ಮ ಹುಡ್ಗಿàರನ್ನು ಸೆಳೆಯದಿದ್ದರೆ ಕೇಳಿ. ಸ್ವಲ್ಪ ಬಿಂದಾಸ್‌ ಹುಡುಗೀರಾದ್ರೆ ಮನಸಿಗಿಷ್ಟವಾದ ಟ್ಯಾಟೂ ಹಾಕಿಸಿಕೊಂಡು ಖುಷಿಯಾಗಿ ಓಡಾಡ್ತಾರೆ. ಉಳಿದವರು, ಸಮಾಜದ ಬಾಯಿಗೆ ಹೆದರಿ ಸುಮ್ಮನಾಗ್ತಾರೆ. ಯಾಕಂದ್ರೆ, ಸೊಂಟ, ಕುತ್ತಿಗೆ, ಬೆನ್ನಿನ ಮೇಲೆ ಟ್ಯಾಟೂ ಇರುವ ಹುಡುಗೀರನ್ನು ಪ್ರಪಂಚ ಬೇರೆಯ ದೃಷ್ಟಿಯಲ್ಲಿ ನೋಡುತ್ತೆ. ಏನೇ ಆದ್ರೂ ಸರಿ, ಟ್ಯಾಟೂ ಹಾಕಿಸಿಕೊಳ್ತೀನಿ ಅಂತೀರ? ಹಾಗಾದ್ರೆ, “ಒಳ್ಳೆ ಗಂಡುಬೀರಿಯ ಥರ ಎÇÉೆಂದ್ರಲ್ಲಿ ಟ್ಯಾಟೂ ಹಾಕೊಂಡು ಓಡಾಡ್ತಾರಪ್ಪ, ಈಗಿನ ಹೆಣ್ಣುಮಕ್ಕಳಿಗೆ ಗಾಂಭೀರ್ಯ ಅನ್ನೋದೇ ಇಲ್ಲ…’, “ಈ ಹುಡ್ಗಿàರು ಹುಡುಗರನ್ನ ಸೆಳೆಯೋದಕ್ಕೆ ಅಂತಾನೇ, ಏನೇನೋ ಅವತಾರ ಮಾಡ್ಕೊಂಡು ಬರ್ತಾರೆ. ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಗಂಡುಮಕ್ಕಳ ಮೇಲೇನೆ ಗೂಬೆ ಕೂರಿಸಿಬಿಡ್ತಾರೆ…’ ಇಂಥ ಮಾತುಗಳನ್ನು ಕೇಳಿಸಿಕೊಳ್ಳೋಕೆ ತಯಾರಾಗಿರಿ. ಗಂಡು ಮಕ್ಕಳು ಟ್ಯಾಟೂ ಹಾಕಿಸಿಕೊಂಡಾಗ, ಇವರ್ಯಾರೂ ಏನೂ ಹೇಳುವುದಿಲ್ಲ.

ಹುಡುಗೀರೇ ಇಲ್ಕೇಳಿ…
ಟ್ಯಾಟೂ ಹಾಕಿಸ್ಕೋಬೇಕು ಅಂತ ಇಷ್ಟ ಇದ್ರೂ, ಯಾರು ಏನಂದೊRàತಾರೋ ಅಂತ ಹಿಂಜರಿಯುತ್ತಿರೋ ಹುಡ್ಗಿàರೆ, ಇಲ್ಲಿ ಕೇಳಿ… ಒಂದೇ ಜೀವನ ಇರೋದು. ನೀವು ಊರವರನ್ನೆಲ್ಲಾ ಮೆಚ್ಚಿಸುತ್ತಾ ಬದುಕಿದ್ರೂ, ಒಂದಲ್ಲ ಒಂದಿನ ಎಲ್ಲಾ ಬಿಟ್ಟು ಹೋಗ್ಲೆಬೇಕು. ನಿಮ್ಮ ವ್ಯಕ್ತಿತ್ವದ ಬಗ್ಗೆ ನಿಮಗೆ ಗೌರವ ಇರಬೇಕು. ಅದಕ್ಕೆ ಧಕ್ಕೆ ಬರದೇ ಇರೋ ಥರ ನಡ್ಕೊಬೇಕು. ಹಾಗಂತ ಅವರಿವರಿಗೆ ಹೆದರುತ್ತಾ ನಿಮ್ಮ ಆಸೆಗಳನ್ನೆಲ್ಲಾ ಬಚ್ಚಿಟ್ಕೊಳ್ಳೋದ್ರಲ್ಲಿ ಅರ್ಥ ಇಲ್ಲ.

ನಾನಂತೂ ಹೊರಟೆ, ಟ್ಯಾಟೂ ಶಾಪ್‌ನಲ್ಲಿ ಅಪಾಯಿಂಟ್‌ಮೆಂಟ್‌ ಬುಕ್‌ ಮಾಡಿಸೋದಷ್ಟೇ ಬಾಕಿ. ನೀವೂ ಅಷ್ಟೇ, ಸಲ್ಲದ ಯೋಚನೆಗಳಿಗೆ ಬ್ರೇಕ್‌ ಹಾಕಿ, ಸುಂದರ ಹಚ್ಚೆಯ ಒಡತಿಯರಾಗಿ.

– ಮೀರಾ

Advertisement

Udayavani is now on Telegram. Click here to join our channel and stay updated with the latest news.

Next