Advertisement

ಗರ್ಲ್ಸ್‌ ಗೈಡ್‌ ಹುಡ್ಗೀರಲ್ಲಿ ಹುಡ್ಗರಿಗೆ ಏನಿಷ್ಟ?

03:45 AM Jan 03, 2017 | |

ಹುಡುಗರು ಹುಡುಗಿಯರಿಗೆ ಬೀಳ್ಳೋದು ಯಾವಾಗ? ಅವಳು ಹ್ಯಾಗಿದ್ದರೆ ಹುಡುಗರಿಗೆ ಇಷ್ಟವಾಗುತ್ತದೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಒಂದು ಪುಟ್ಟ ಸಮೀಕ್ಷೆ ನಡೆಸಿದೆ. ಆ ಸಮೀಕ್ಷೆಯಲ್ಲಿ ಸಿಕ್ಕ ಉತ್ತರಗಳು ಇಲ್ಲಿವೆ. ಹೌದು ಅನ್ನಿಸಿದರೆ ಶೇರ್‌ ಮಾಡಿ. ಡಬ್ಟಾ ಐಡಿಯಾಗಳು ಅಂತ ಅನ್ನಿಸಿದರೆ ಡಿಸ್‌ಲೈಕ್‌ ಒತ್ತಿಬಿಡಿ. ಓದುಗರ ತೀರ್ಮಾನವೇ ಅಂತಿಮ.

Advertisement

#1 ಇನ್ನೊಸೆಂಟಾಗಿ ಪ್ರಶ್ನೆ ಕೇಳಬೇಕು
ನೀವು ಕೇಳುವ ಪ್ರಶ್ನೆ ಸರಳವಾಗಿರಬೇಕು. ಉದಾಹರಣೆಗೆ ನಿಮಗೆ ಬ್ಯಾಂಕ್‌ನಲ್ಲಿ ಹಣ ಡ್ರಾ ಹೇಗೆ ಮಾಡಿಕೊಳ್ಳುವುದೆಂದು ತಿಳಿದಿಲ್ಲ ಅಂತಿಟ್ಟುಕೊಳ್ಳಿ. ತಿಳಿದಿದ್ದರೂ ಪರವಾಗಿಲ್ಲ. ಫೋನಾಯಿಸಿ ಕೇಳಿದರೆ ನನಗೂ ಜ್ಞಾನವಿದೆ ಎಂದಾಗ ಅದನ್ನು ತಿಳಿಯಲು ನಿಮ್ಮ ಮುಗ್ಧತೆ ಕಾರಣವಾಗಿ ನಿಮ್ಮ ಮೇಲೆ ಆಸಕ್ತಿ ಬೆಳೆಯುತ್ತದೆ. 

#2 ಚೈಲ್ಡಿಶ್‌ ಮುಖಭಾವ
ಇಷ್ಟದ ಹುಡುಗನ ಜೊತೆಯಲ್ಲಿ ಮಾತನಾಡುವ ಸಂದರ್ಭಗಳಲ್ಲಿ ಮಗುವಿನ ನಲಿವನ್ನು, ಲವಲವಿಕೆಯನ್ನು ಹೊಂದಿದ್ದರೆ ಹುಡುಗರಿಗೆ ಜಾಸ್ತಿ ಇಷ್ಟವಾಗುತ್ತದೆ. ಮುಗ್ಧತೆ ಯಾರನ್ನಾದರೂ ಸೆಳೆಯುತ್ತದೆ ಅಂತ ನೀವು ಅಂದೊRàಬಹುದು. ಆದರೆ ಹುಡುಗರಿಗೆ ಹುಡುಗಿಯರ ಮುಗ್ಧತೆ ಸಿಕ್ಕಾಪಟ್ಟೆ ಇಷ್ಟ ಆಗುತ್ತದೆ.

#3 ಲೂಸ್‌ ಹೇರ್‌ ಸ್ಟೈಲ್‌
ತುರುಬನ್ನು ಪೂರ್ತಿ ಬಿಟ್ಟು ಆಗಾಗ ಬೆರಳುಗಳಿಂದ ಹಿಂದಕ್ಕೆ ತೆಗೆದುಕೊಂಡರೆ, ಏನೋ ಮಾಡುತ್ತಿರುವಿರಲ್ಲ ಎಂದು ನಿಮ್ಮೆಡೆಗೆ ನೋಡಲು ಶುರು ಮಾಡುತ್ತಾರೆ. ಮುಂಗುರುಳು ಬಿಟ್ಟು, ಕಿವಿ ಹಿಂದೆ ಸರಿಸುತ್ತಿದ್ದರೆ ಇನ್ನೂ ಅಟ್ರಾಕ್ಷನ್‌ ಹೆಚ್ಚುತ್ತದೆ. ಬಿಲ್ಡಪ್‌ ಸಿಗುತ್ತದೆ.

#4 ಐ ಬ್ರೌಸ್‌, ಐ ಲಿಡ್‌ ಆ್ಯಕ್ಷನ್‌ 
ಮಾತನಾಡುವಾಗ ಬಾರ್ಬಿ ತರ ಕಣ್ಣಿಗೆ ಕಾಡಿಗೆ ಹಚ್ಚಿ ಪದೇ ಪದೇ ಮುಗ್ಧವಾಗಿ ಕಣ್ಣು ಮಿಟುಕಿಸುತ್ತಿದ್ದರೆ, ಹುಬ್ಬನ್ನು ಆಡಿಸುತ್ತಿದ್ದರೆ ಸುಂದರವೆನಿಸಿ ಆಸಕ್ತಿ ಹುಟ್ಟಿಸುತ್ತದೆ.

Advertisement

#5 ಐ ಡ್ರೆಸ್‌ ಸೆನ್ಸ್‌
ನೀವು ಹಾಕುವ ಡ್ರೆಸ್‌ ಕೋಡ್‌, ಹೇರ್‌ಸ್ಟೈಲ್‌ ನಿಮ್ಮ ದೇಹ ಭಾಷೆಗೆ ತಕ್ಕುದಾಗಿರಬೇಕು. ಲೆಹೆಂಗಾ ಧರಿಸಿ ಕ್ಲಾಸಿಕ್‌ ಬನ್‌ ತುರುಬು ಹಾಕಿದರೆ ಕೆಟ್ಟದಾಗಿರುತ್ತದೆ. ತಿಳಿ ಬಣ್ಣದ ಡ್ರೆಸ್‌ ಧರಿಸಿ ಗಾಢವಾಗಿ ಮೇಕಪ್‌ ಮಡಿಕೊಂಡರೆ ಡಿಗ್ಲಾಮರ್‌ ಆಗಿ ಕಾಣಿಸುತ್ತದೆ. ಹಾಗಾಗಿ ನಿಮ್ಮ ದೇಹಶೈಲಿಗೊಪ್ಪುವಂತೆ ಡ್ರೆಸ್ಸಾದರೆ ಒಳ್ಳೆಯ ಅಭಿರುಚಿ ಇದೆಯೆನಿಸಿ ಗಮನಿಸುತ್ತಾರೆ. 

#6 ಸ್ವಲ್ಪ ಕಾಮನ್‌ಸೆನ್ಸು 
ನೀವು ಚೈಲ್ಡಿಶ್‌ ನೇಚರ್‌ ಹೊಂದಿದ್ದರೂ ನಿಮಗೂ ಜ್ಞಾನದ ಅರಿವಿದೆ ಎಂದು ತಿಳಿಯಬೇಕು. ಉದಾಹರಣೆಗೆ ಗಂಭೀರ ಸಮಸ್ಯೆ ಬಂದಾಗ ಬುದ್ಧಿವಂತಿಕೆಯಿಂದ ಅವರು ಯೋಚಿಸಲಾಗದ ರೀತಿಯಲ್ಲಿ ಯೋಚಿಸಿ ಸಲಹೆ ನೀಡಿದರೆ ಕ್ಲೀನ್‌ ಬೋಲ್ಡ್‌ ಆಗುತ್ತಾರೆ. ಗಣಿತದ ತರ್ಕದ ಪ್ರಶ್ನೆಗಳಿಗೆ ಉತ್ತರಿಸಿದರೆ ಹುಡುಗಿಯರು ಬರೀ ಪಾಠವನ್ನು ಉರು ಹೊಡೆದು ಮಾರ್ಕ್ಸ್ ತೆಗೆಯುತ್ತಾರೆಂಬ ಆರೋಪ ನಿಮ್ಮಲ್ಲಿ ಇಲ್ಲವಾಗಿ ನಿಮ್ಮ ನಾಲೆಜ್‌ಗೆ ಇಷ್ಟಪಡುತ್ತಾರೆ 

#7 ಲಿಮಿಟ್‌ ಇರಲಿ ಎಲ್ಲಕ್ಕೂ 
ಬಡ ಬಡ ಎಂದು ಮಾತನಾಡಿದರೂ ಅದು ಹಾಸ್ಯವಾಗಿರಲಿ. ನಿಮ್ಮ ವೈಯುಕ್ತಿಕ ವಿಚಾರಗಳನ್ನಂತು ಯಾವುದೇ ಕಾರಣಕ್ಕೂ ತೆರೆದಿಡಬೇಡಿ. ಕೇಳಿದರೂ ದಿನ ಮುಂದೂಡಿ, ಚಾಟ್‌, ಟಾಕ್‌ ಮಿತವಾಗಿದ್ದಷ್ಟು ನಿಮ್ಮ ಬಗೆಗೆ ಒಂದು ಕ್ಯೂರಿಯಾಸಿಟಿ ಹುಟ್ಟುತ್ತದೆ. ಆ ಕ್ಯೂರಿಯಾಸಿಟಿ ಎನ್ನುವುದು ನಿಮ್ಮನ್ನು ಇಷ್ಟವಾಗುವಂತೆ ಮಾಡುತ್ತದೆ.

– ಪಲ್ಲವಿ ಬಿ.ಎನ್‌.

Advertisement

Udayavani is now on Telegram. Click here to join our channel and stay updated with the latest news.

Next