Advertisement

Madhya Pradesh: ಬಾಲಕಿಯರ ಹಾಸ್ಟೆಲ್‌ ನಿಂದ 26 ಬಾಲಕಿಯರು ನಾಪತ್ತೆ; ಪ್ರಕರಣ ದಾಖಲು

03:02 PM Jan 06, 2024 | Team Udayavani |

ಭೋಪಾಲ್:‌ ಗುಜರಾತ್‌, ಜಾರ್ಖಂಡ್‌, ರಾಜಸ್ಥಾನ್‌, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 26 ಬಾಲಕಿಯರು ಕಾನೂನು ಬಾಹಿರ ಹಾಸ್ಟೆಲ್‌ ನಿಂದ ನಾಪತ್ತೆಯಾಗಿರುವ ಘಟನೆ ಭೋಪಾಲ್‌ ನಲ್ಲಿ ಬೆಳಕಿಗೆ ಬಂದಿರುವುದಾಗಿ ವರದಿಯಾಗಿದೆ.

Advertisement

ಇದನ್ನೂ:NEW YEAR: ಹೊಸ ವರ್ಷ ಬಾಗಿಲಲ್ಲಿ ನಂಬಿಕೆ, ಜೀವನೋತ್ಸಾಹ

ಈ ಬಾಲಕಿಯರು ಗುಜರಾತ್‌, ಜಾರ್ಖಂಡ್‌, ರಾಜಸ್ಥಾನ್‌ ಹಾಗೂ ಸೆಹೋರೆ, ರೈಸನ್‌, ಛಿಂದ್ವಾರಾ ಮತ್ತು ಬಾಲಾಘಾಟ್‌ ಗೆ ಸೇರಿದ್ದವರಾಗಿದ್ದಾರೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್‌ ಕುನುಂಗೋ ಅವರು ಭೋಪಾಲ್‌ ನ ಹೊರವಲಯದಲ್ಲಿರುವ ಪರ್ವಾಲಿಯಾ ಪ್ರದೇಶದಲ್ಲಿನ ಅನ್ಚಾಲ್‌ ಬಾಲಕಿಯರ ಹಾಸ್ಟೆಲ್‌ ಗೆ ದಿಢೀರ್‌ ಭೇಟಿ ಕೊಟ್ಟ ಸಂದರ್ಭದಲ್ಲಿ ಈ ನಾಪತ್ತೆ ಪ್ರಕರಣ ಬೆಳಕಿಗೆ ಬಂಧಿದೆ.

ಪ್ರಿಯಾಂಕ್‌ ಅವರು ಹಾಸ್ಟೆಲ್‌ ಗೆ ಭೇಟಿ ಕೊಟ್ಟಾಗ ರಿಜಿಸ್ಟರ್‌ ಪರಿಶೀಲಿಸಿದ್ದರು. ಇ ವೇಳೆ 68 ಯುವತಿಯರ ದಾಖಲಾತಿಯಲ್ಲಿ 26 ಮಂದಿ ಬಾಲಕಿಯರು ನಾಪತ್ತೆಯಾಗಿರುವುದು ತಿಳಿಸಿದರು.

Advertisement

ಬಾಲಕಿಯರ ವಸತಿ ನಿಲಯದ ನಿರ್ದೇಶಕ ಅನಿಲ್‌ ಮ್ಯಾಥ್ಯೂ ಅವರಲ್ಲಿ ನಾಪತ್ತೆಯಾದ ಬಾಲಕಿಯರ ಬಗ್ಗೆ ಪ್ರಶ್ನಿಸಿದ್ದು, ಈ ಸಂದರ್ಭದಲ್ಲಿ ಅವರು ಸಮರ್ಪಕ ಉತ್ತರ ನೀಡಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next