Advertisement

ಹಜ್‌ ಸಬ್ಸಿಡಿ ಬಾಲಕಿಯರ ಶಿಕ್ಷಣಕ್ಕೆ ನೀಡಿ: ಓವೈಸಿ!

03:45 AM Jan 13, 2017 | Team Udayavani |

ನವದೆಹಲಿ: ಖಡಕ್‌ ಮೂಲಭೂತವಾದಿ ಎನ್ನಿಸಿಕೊಂಡಿರುವ ಎಂಐಎಂ ಪಕ್ಷದ ಸಂಸದ ಅಸಾದುದ್ದೀನ್‌ ಓವೈಸಿ, ಹಜ್‌ ಯಾತ್ರಿಕರಿಗೆ ಸರ್ಕಾರ ನೀಡುವ ಸಬ್ಸಿಡಿಯನ್ನು ಬಾಲಕಿಯರ ಶಿಕ್ಷಣಕ್ಕೆ ಬಳಸುವಂತೆ ಸಲಹೆ ನೀಡಿ ಅಚ್ಚರಿ ಮೂಡಿಸಿದ್ದಾರೆ. 

Advertisement

ಭಾರತದ ಹಜ್‌ ಯಾತ್ರಿಗಳ ಕೋಟಾ ಅನ್ನು 29 ವರ್ಷಗಳ ನಂತರ ಸೌದಿ ಅರೇಬಿಯಾ ವಿಸ್ತರಿಸಿರುವುದನ್ನು ಓವೈಸಿ ಸ್ವಾಗತಿಸಿ ಟ್ವೀಟ್‌ ಮಾಡಿದ್ದು, ಹಜ್‌ ಸಬ್ಸಿಡಿ ಸದ್ಬಳಕೆಗೆ ಸಲಹೆ ನೀಡಿದ್ದಾರೆ. ಹಜ್‌ಗೆ ಸಬ್ಸಿಡಿಯಾಗಿ ನೀಡುವ 690 ಕೋಟಿ ರೂ. ಹಣವನ್ನು ಹೆಣ್ಣು ಮಕ್ಕಳ ಶಿಕ್ಷಣಕ್ಕ ಬಳಸಬೇಕು ಎಂದು ಕರೆ ಕೊಟ್ಟಿದ್ದಾರೆ. 

ಸೌದಿ ಅರೇಬಿಯಾ 2012ರಲ್ಲಿ 1.70 ಲಕ್ಷವಿದ್ದ ಭಾರತದ ಹಜ್‌ ಯಾತ್ರಿಕರ ಕೋಟಾ ಅನ್ನು 1.36ಕ್ಕೆ ಇಳಿಸಿತ್ತು. ಈಗ ಮತ್ತೆ 1.36 ಲಕ್ಷದಿಂದ 1.70 ಲಕ್ಷಕ್ಕೆ ಏರಿಸಿದೆ. ಈ ಬಗ್ಗೆ ಬುಧವಾರವಷ್ಟೇ ಸರ್ಕಾರ ಮಾಹಿತಿ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next