ಕುಣಿಗಲ್ : ಜಮೀನಿನ ತೋಟದಲ್ಲಿ ಕಳೆ ಕೀಳುತ್ತಿದ್ದ ವೇಳೆ ಬಾಲಕಿಗೆ ಹುಟ್ಟು ಹಬ್ಬದ ದಿನದಂದೇ ಹಾವು ಕಚ್ಚಿ ಸಾವನಪ್ಪಿರುವ ಘಟನೆ ತಾಲೂಕಿನ ಸಂತೆಮಾವತ್ತೂರು ಸಮೀಪದ ಪಂಚವಟಿ ತಾಂಡ್ಯದಲ್ಲಿ ಶನಿವಾರ ನಡೆದಿದೆ.
ಗ್ರಾಮದ ಶಂಕರ್ ನಾಯ್ಕ್ ಹಾಗೂ ಸವಿತಾ ಭಾಯಿ ಅವರ ಪುತ್ರಿ ಚೈತನ್ಯಭಾಯಿ(9) ಹುಟ್ಟು ಹಬ್ಬದ ದಿನದಂದೇ ಸಾವನಪ್ಪಿರುವ ನತದೃಷ್ಟ ಬಾಲಕಿ.
ಘಟನೆ ವಿವರ : ಶನಿವಾರ ಬೆಳಗ್ಗೆ6.30 ರ ಸಮಯದಲ್ಲಿ ಶಂಕರನಾಯ್ಕ್ ತನ್ನ ಮಗಳು ಚೈತನ್ಯಭಾಯಿ ಅವಳನ್ನು ತನ್ನ ಜಮೀನಿಗೆ ಕರೆದುಕೊಂಡು ಹೋಗಿ ಬಾಳೇ ತೋಟದಲ್ಲಿ ಕಳೆ ಕೀಳುತ್ತಿದ್ದ ವೇಳೆಯಲ್ಲಿ ನಾಗರ ಹಾವು ಚೈತನ್ಯಭಾಯಿಯ ಎಡಗಾಲಿಗೆ ಕಚ್ಚಿದೆ, ಚೈತನ್ಯಭಾಯಿ ಕಿರಿಚಿಕೊಂಡಿದ್ದಾಳೆ ಇದನ್ನು ಗಮನಿಸಿದ ತಂದೆ ಹಾವನ್ನು ಅಲ್ಲಿಯೇ ಹೊಡೆದು ಹಾಕಿ, ಮಗಳನ್ನು ಕರೆದುಕೊಂಡು ಬಂದು ಗ್ರಾಮಸ್ಥರಿಗೆ ಮಾಹಿತಿ ತಿಳಿಸಿ ಬಳಿಕ ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದ್ಯೋಯುವ ಮಾರ್ಗಮಧ್ಯ ಗವಿಮಠದ ಬಳಿ ಚೈತನ್ಯಭಾಯಿ ಹಸು ನೀಗಿದ್ದಾಳೆ.
ಮೃತ ಬಾಲಕಿ ಕೈಯಲ್ಲಿ ಕೇಕ್ ಕತ್ತರಿಸಿ ಆಕ್ರಂದನ : ಶನಿವಾರ ಚೈತನ್ಯಭಾಯಿಯ ಹುಟ್ಟು ಇದ್ದಿತು ಹುಟ್ಟು ಹಬ್ಬ ಆಚರಣೆ ಮಾಡಲೆಂದು ಮನೆಯವರು ಸಿದ್ದತೆ ಮಾಡಿಕೊಂಡಿದ್ದರು ಆದರೆ ವಿಧಿ ಆಟವೇ ಬೇರೆಯಾಗಿತ್ತು, ಹಾವು ಕಚ್ಚಿ ಮೃತಪಟ್ಟಳು. ಇದರಿಂದ ಬಹಳ ನೊಂದ ಪೋಷಕರು ಬಾಲಕಿಯ ಶವದ ಕೈಯಿಂದಲ್ಲೇ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿ ತೀವ್ರ ಆಕ್ರಂದನ ವ್ಯಕ್ತಪಡಿಸಿದ್ದು, ನೆರೆದಿದ್ದ ಜನರು ಕಣ್ಣು ತ್ಯಾವ ಮಾಡಿತ್ತು.
ಶಾಸಕರ ಸಾಂತ್ವನ : ಮೃತ ಚೈತನ್ಯಭಾಯಿ ಅವಳ ಮನೆಗೆ ಭೇಟಿ ನೀಡಿದ ಶಾಸಕ ಡಾ.ಹೆಚ್.ಡಿ.ರಂಗನಾಥ್ ಬಾಲಕೀಯ ಕುಟುಂಬಕ್ಕೆ ಸಾಂತ್ವಾನ ಹೇಳಿ ಸರಕಾರದಿಂದ ಪರಿಹಾರದ ನೆರವು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಈ ಸಂಬಂಧ ಹುಲಿಯೂರುದುರ್ಗ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.