Advertisement

ಬಾಲಕಿಗೆ ಲಿಕ್ಕರ್‌ ಕುಡಿಸಿ ಲೈಂಗಿಕ ದೌರ್ಜನ್ಯ, ಇಬ್ಬರು ಅರೆಸ್ಟ್‌

03:58 PM Oct 20, 2018 | udayavani editorial |

ಲಖೀಸರಾಯ್‌, ಬಿಹಾರ : ಅಪ್ರಾಪ್ತ ವಯಸ್ಸಿನ ಹುಡುಗಿಗೆ ಬಲವಂತದಿಂದ ಲಿಕ್ಕರ್‌ ಕುಡಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಆಕೆಯ ಓರ್ವ ಸ್ನೇಹಿತ ಮತ್ತು 35ರ ಹರೆಯದ ಇನ್ನೊಬ್ಬ  ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

35ರ ಹರೆಯದ ಬಂಧಿತ ವಿನೋದ್‌ ಕುಮಾರ್‌ ಎಂಬಾತನ ವಿರುದ್ಧ ಪೊಲೀಸರು ಪೋಕ್‌ಸೋ ಕಾಯಿದೆಯಡಿ ಕೇಸು ದಾಖಲಿಸಿಕೊಂಡಿದ್ದಾರೆ. ಹುಡುಗಿಯ ಸ್ನೇಹಿತನ ವಿರುದ್ಧವೂ ಕೇಸು ದಾಖಲಾಗಿದೆ. ಸ್ನೇಹಿತನು ತನ್ನನ್ನು ದೌರ್ಜನ್ಯ ತಾಣಕ್ಕೆ ಕರೆದೊಯ್ದು ತನಗೆ ಬಲವಂತದಿಂದ ಮದ್ಯ ಕುಡಿಸಿದನೆಂದು ಹುಡುಗಿಯು ಹೇಳಿದ್ದಾಳೆ. 

ದುರ್ಗಾ ಪೂಜೋತ್ಸವವನ್ನು ಕಾಣಲು ಹುಡುಗಿಯು ಗುರುವಾರ-ಶುಕ್ರವಾರ ರಾತ್ರಿ ಹೋಗಿದ್ದಾಗ ಈ ಘಟನೆ ನಡೆದಿದೆ. ಬಿಹಾರದಲ್ಲಿ ಮದ್ಯ ಸೇವನೆ ಮತ್ತು ಮಾರಾಟ ಎರಡನ್ನೂ 2016ರ ಎಪ್ರಿಲ್‌ನಿಂದ ಸಿಎಂ ನಿತೀಶ್‌ ಕುಮಾರ್‌ ಸರಕಾರ ಸಂಪೂರ್ಣವಾಗಿ ನಿಷೇಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next