Advertisement

Kundgol: ಗೋಡೆ ಕುಸಿದು ಬಾಲಕಿ ಸಾವು

06:07 PM Aug 09, 2024 | Team Udayavani |

ಕುಂದಗೋಳ: ಪಟ್ಟಣದ ಸಾದಗೇರಿ ಓಣಿಯಲ್ಲಿನ ಮನೆಯೊಂದು‌ ಕುಸಿದ ಪರಿಣಾಮ ಆಟವಾಡಲು ತೆರಳಿದ್ದ ಬಾಲಕಿಯೊಬ್ಬಳು‌ ಮೃತಪಟ್ಟ ಘಟನೆ‌ ಶುಕ್ರವಾರ(ಆ.9) ಮಧ್ಯಾಹ್ನ ಸಂಭವಿಸಿದೆ.

Advertisement

ಅಮೃತಾ ಗದಿಗೆಪ್ಪ ಮೆಣಸಗೊಂಡ (5) ಮೃತಪಟ್ಟ ಬಾಲಕಿಯಾಗಿದ್ದಾಳೆ. ನಾಗರ ಪಂಚಮಿಯಂದು ಆಟವಾಡುವ ಸಲುವಾಗಿ ಬಾಲಕಿಯು ಪಕ್ಕದ‌ ರಾಮಣ್ಣ ಕಾಳಪ್ಪ ಅರ್ಕಸಾಲಿ ಎಂಬುವವರ ಮನೆಗೆ ತೆರಳಿದ್ದಳು.  ಇದೇ ಸಮಯ ಮಣ್ಣಿನ‌ ಮೇಲ್ಚಾವಣಿ ಕುಸಿದ ಪರಿಣಾಮ ಬಾಲಕಿ ಅವಶೇಷಗಳಡಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಈ ವೇಳೆ ಮಣ್ಣು ತೆಗೆದು ರಕ್ಷಿಸುವಷ್ಟರಲ್ಲಿ ಬಾಲಕಿಯ ಪ್ರಾಣಪಕ್ಷಿ ಹಾರಿ ಹೋಗಿದೆ. ಜೊತೆಗಿದ್ದ ನಿಹಾರಿಕಾ ಕಮ್ಮಾರ (2) ಬಾಲಕಿಗೆ ಸಣ್ಣ,ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಘಟನೆಯ ಕುರಿತು ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬೇಟಿ‌ ನೀಡಿದ ಕಂದಾಯ ನಿರೀಕ್ಷಕ‌ ಅಶೋಕ ಮಲ್ಲೂರ ಪರಿಶೀಲಿಸಿ ತಕ್ಷಣ ಜಿಲ್ಲಾಡಳಿತಕ್ಕೆ ವರದಿ‌ ನೀಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next