Advertisement
ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅಭಿನಂದನ ಸಮಿತಿ ಸುಳ್ಯ ಮತ್ತು ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಮಂಗಳವಾರ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ಜರಗಿದ ನಾಗರಿಕ ಸಮ್ಮಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಡಾ. ಚಿದಾನಂದ ಕೆ.ವಿ., ಗಿರೀಶ್ ಅವರು ಉತ್ತಮ ಸಾಧಕ. ಕ್ರಿಕೆಟ್ ತಾರೆಗಳ ವಿಚಾರಗಳನ್ನು ಬರೆಯುವ ಬದಲಾಗಿ ಸರಕಾರ ಗಿರೀಶ್ ಅವರ ವಿಚಾರಧಾರೆಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು. ಅವರ ತೂಗು ಸೇತುವೆಯ ತಾಂತ್ರಿಕತೆ ಮತ್ತಷ್ಟು ಆಧುನಿಕತೆ ಯೊಂದಿಗೆ ಸಾಗಲಿ ಎಂದು ಶುಭಹಾರೈಸಿದರು.
Related Articles
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್. ಅಂಗಾರ ಮಾತನಾಡಿ, ದೇಶದ ಅತ್ಯುನ್ನತ ಪ್ರಶಸ್ತಿ ಪಡೆದ ಸಾಧನೆ ಓರ್ವನಾದರೂ ಅದರ ಕೀರ್ತಿ ತಾಲೂಕಿಗೆ ದೊರೆತಿದೆ. ಇಂದು ವ್ಯಕ್ತಿಯ ಗುಣಗಳಿಗೆ ಮಾನ್ಯತೆ ನೀಡುವ ಕಾರ್ಯವಾಗಬೇಕು. ಪ್ರತಿಯೊಬ್ಬರಲ್ಲೂ ಕಾರ್ಯನಿಷ್ಠೆ ಇದ್ದಾಗ ಯಶಸ್ಸು ಖಂಡಿತ ಎಂದರು.
Advertisement
ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ. ಅಧ್ಯಕ್ಷೆ ಶೀಲಾ ಮಾಧವ ಉಪಸ್ಥಿತರಿದ್ದರು. ಅಭಿನಂದನ ಸಮಿತಿ ಕೋಶಾಧಿಕಾರಿ ಎಂ.ಬಿ. ಸದಾಶಿವ ಸ್ವಾಗತಿಸಿದರು. ಕೃಷ್ಣಪ್ರಸಾದ್ ಮಡ್ತಿಲ ಸಮ್ಮಾನ ಪತ್ರ ವಾಚಿಸಿದರು. ಸುಜನ್ ಕಿಲಂಗೋಡಿ ವಂದೇ ಮಾತರಂ ಹಾಡಿದರು. ಬೇಬಿ ವಿದ್ಯಾ ಹಾಗೂ ಭವ್ಯಾ ರಜತ್ ಕಾರ್ಯಕ್ರಮ ನಿರೂಪಿಸಿದರು. ಎ.ಟಿ. ಕುಸುಮಾಧರ ವಂದಿಸಿದರು.
ವಿವಿಧ ಸಂಘ-ಸಂಸ್ಥೆಗಳಿಂದ ಪ್ರಮುಖರು ಹಾರಾರ್ಪಣೆ ಮಾಡಿದರು. ದುರ್ಗಾಕುಮಾರ್ ಮತ್ತು ತಂಡದವರಿಂದ ಸಂಪಾದಿತ ಸಾಕ್ಷ್ಯಚಿತ್ರ ವನ್ನು ಬಿಡುಗಡೆಗೊಳಿಸಲಾಯಿತು.
ಸಾರೋಟಿನಲ್ಲಿ ಮೆರವಣಿಗೆಉಷಾ – ಗಿರೀಶ್ ಭಾರದ್ವಾಜ ದಂಪತಿಯನ್ನು ಕಾರ್ಯಕ್ರಮಕ್ಕೆ ಮೊದಲು ಜ್ಯೋತಿ ವೃತ್ತದಿಂದ ಸಭಾವೇದಿಕೆವರೆಗೆ ಸಾರೋಟಿನಲ್ಲಿ ಕುಳ್ಳಿರಿಸಿ ಭವ್ಯವಾದ ಮೆರವಣಿಗೆ ಮೂಲಕ ಕರೆತರಲಾ ಯಿತು. ವಿವಿಧ ಸಂಘ-ಸಂಸ್ಥೆಗಳವರು ಸಾರ್ವಜನಿ ಕರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಹೃದಯಗಳನ್ನು ಬೆಸೆಯುವ ಕಾರ್ಯ
ಅಭಿನಂದನೆ ಸ್ವೀಕರಿಸಿದ ಗಿರೀಶ್ ಭಾರದ್ವಾಜ್ ಅವರು ಮಾತನಾಡಿ, ಪ್ರತಿಯೊಂದು ವೃತ್ತಿ ಮನುಕುಲದ ಸೇವೆಗಿರುವ ಅವಕಾಶ. ಹಾಗೆ ಅರಿತುಕೊಂಡರೆ ಸಾಕಷ್ಟು ಅನುಭವಗಳಾಗುತ್ತವೆ. ನಮ್ಮ ನದಿ-ದಡಗಳನ್ನು ಸಂಪರ್ಕಿಸುವ ಸೇತುವೆ ಕಾರ್ಯದಲ್ಲಿ ಜನರ ಪ್ರೇಮದ ಸಾûಾತ್ಕಾರವಾಗುತ್ತಿತ್ತು ಎಂದು ತಮ್ಮ ಅನುಭವಗಳನ್ನು ತಿಳಿಸಿದರು. ಕೇವಲ ನದಿಗಳ ದಡವನ್ನು ತಲುಪುವ ಮಾತ್ರವಲ್ಲ. ಹಳ್ಳಿ – ಹಳ್ಳಿಗಳ, ಹಳ್ಳಿ- ನಗರಗಳ ಸಂಪರ್ಕಿಸುವ ಸೇವೆಗಳೊಂದಿಗೆ ಹಳ್ಳಿಗರ ಕನಸು ನಗರಕ್ಕೆ ಜೋಡಿಸುವುದರೊಂದಿಗೆ ಹೃದಯ ಹೃದಯಗಳ ಬೆಸೆಯುವ ಕಾರ್ಯದಲ್ಲಿ ನಮ್ಮ ತಂಡ ಕೈಜೋಡಿಸಿದೆ. ಇದೇ ರೀತಿ ಜನರ ಹೃದಯ – ಹೃದಯಗಳನ್ನು ಬೆಸೆಯುವ ಕಾರ್ಯವಾಗಬೇಕು. ರಾಜಕೀಯ ಪಕ್ಷ ಗಳಿಂದಾಗಿ ಜನರ ನಡುವೆ ಕಂದಕ, ಗೋಡೆಗಳು ನಿರ್ಮಾಣವಾಗಿವೆ. ಇವುಗಳನ್ನು ನಿವಾರಿಸುವ ಕಾರ್ಯವಾಗಬೇಕು ಎಂದರು.