Advertisement

Gujarat; 350 ಕೋಟಿ ರೂ.ಮೌಲ್ಯದ ಹೆರಾಯಿನ್ ವಶ: 9 ಮಂದಿ ಬಂಧನ

05:58 PM Feb 23, 2024 | Team Udayavani |

ಸೋಮನಾಥ್ : ವೆರಾವಲ್‌ನಿಂದ ಸಮುದ್ರ ಮಾರ್ಗವಾಗಿ ಸಾಗಾಟ ಮಾಡುತ್ತಿದ್ದ 350 ಕೋಟಿ ರೂ. ಮೌಲ್ಯದ 50 ಕೆಜಿ ಹೆರಾಯಿನ್ ಮಾದಕ ದ್ರವ್ಯವನ್ನು ಗಿರ್ ಸೋಮನಾಥ್ ಪೊಲೀಸರು ಜಪ್ತಿ ಮಾಡಿದ್ದು, ಮೂವರು ಪ್ರಮುಖ ಆರೋಪಿಗಳು ಸೇರಿದಂತೆ ಒಂಬತ್ತು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಸುಳಿವಿನ ಆಧಾರದ ಮೇಲೆ ವೆರಾವಲ್ ಬಂದರಿನ ಬಳಿ ಗುರುವಾರ ತಡರಾತ್ರಿ ನಡೆದ ದಾಳಿಯಲ್ಲಿ ಮೀನುಗಾರಿಕಾ ದೋಣಿಯಿಂದ ಸೈಕೋಟ್ರೋಪಿಕ್ ಡ್ರಗ್ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದು, ದೋಣಿಯಲ್ಲಿದ್ದ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

“ನಮ್ಮ ತಂಡ ವೆರಾವಲ್ ಬಂದರಿನ ಬಳಿ ಮೀನುಗಾರಿಕೆ ದೋಣಿ ಮೇಲೆ ದಾಳಿ ನಡೆಸಿ 50 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಅದರ ಮೂಲವನ್ನು ತನಿಖೆ ಮಾಡಲಾಗುತ್ತಿದೆ. ವೆರಾವಲ್-ನೋಂದಾಯಿತ ದೋಣಿಯಲ್ಲಿದ್ದ ಒಂಬತ್ತು ಸಿಬಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮನೋಹರ ಸಿನ್ಹಾ ಜಡೇಜ ತಿಳಿಸಿದ್ದಾರೆ.

ಗುಜರಾತ್ ಗೃಹ ಸಚಿವ ಹರ್ಷ್ ಸಾಂಘ್ವಿ ಪ್ರತಿಕ್ರಿಯಿಸಿ “ಇಂದು ಗುಜರಾತ್ ಪೊಲೀಸರು ಡ್ರಗ್ಸ್ ದಂಧೆಯನ್ನು ಭೇದಿಸುವಲ್ಲಿ ಭಾರಿ ಯಶಸ್ಸನ್ನು ಕಂಡಿದ್ದಾರೆ. ಈ ವಿಚಾರದ ಬಗ್ಗೆ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಮತ್ತು ಈ ಯಶಸ್ಸಿಗೆ ನಾನು ಗಿರ್ ಸೋಮನಾಥ್ ಪೊಲೀಸರನ್ನು ಅಭಿನಂದಿಸುತ್ತೇನೆ” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next