Advertisement

ತಾಲೂಕು ರೈತರಿಗೆ ವರದಾನವಾದ ಶುಂಠಿ ಬೆಳೆ

05:36 PM Apr 24, 2021 | Team Udayavani |

ಆಲೂರು: ಆಲೂಗಡ್ಡೆ ಬೆಳೆ ರೋಗಕ್ಕೀಡಾದ ನಂತರ, ಕಳೆದ ಹತ್ತಾರು ವರ್ಷಗಳಿಂದರೈತರಿಗೆ ಆರ್ಥಿಕ ಸಬಲವಾಗಿರುವ ಶುಂಠಿ ಬೆಳೆ ವರದಾನವಾಗಿದೆ.

Advertisement

ಪ್ರಾರಂಭದ ವರ್ಷಗಳಲ್ಲಿ ಕೇರಳ ರಾಜ್ಯದಿಂದ ವಲಸೆ ಬಂದವರು,ಸ್ಥಳೀಯವಾಗಿ ಬಾಡಿಗೆ ಆಧಾರದಲ್ಲಿ ರೈತರಜಮೀನಿನಲ್ಲಿ ಶುಂಠಿ ಬೆಳೆದು ಸಬಲರಾದರು.ಇದನ್ನು ಮನಗಂಡ ಸ್ಥಳೀಯ ರೈತರು ಶುಂಠಿ ಬೆಳೆಯಲು ಪ್ರಾರಂಭಿಸಿ ಆರ್ಥಿಕವಾಗಿ ಉತ್ತಮ ಸ್ಥಿತಿ ತಲುಪಿದರು.

ವರ್ಷದಿಂದ ವರ್ಷಕ್ಕೆ ಶುಂಠಿ ಬೆಳೆಯನ್ನು ಅಧಿಕವಾಗಿ ಬೆಳೆಯಲಾರಂಭಿಸಿದರು. ಕೆಲರೈತರು ಜಮೀನು ಬಾಡಿಗೆಗೆ ಪಡೆದು ನೂರಾರು ಚೀಲ ಬೆಳೆಯಲು ಪ್ರಾರಂಭಿಸಿದರು. ಒಂದು ಚೀಲಕ್ಕೆ ಕನಿಷ್ಠ8-10 ಮೂಟೆ ಇಳುವರಿ ಬಂದಿತಾದರೂ, ಬೆಲೆ ಪ್ರಮಾಣ ಗಣನೀಯವಾಗಿಕಡಿಮೆಯಾದರೂ, ಕೆಲವರು ಉತ್ತಮ ಬೆಲೆ ಸಿಗದೆ ಕೈ ಸುಟ್ಟುಕೊಂಡರು.

ದೂರದಿಂದ ನೀರು ಸರಬರಾಜು: ಪ್ರಸಕ್ತ ಸಾಲಿನಲ್ಲಿ ಮಳೆ ಬಾರದಿದ್ದರೂ, ಸುಮಾರುಒಂದು ತಿಂಗಳಿನಿಂದ ಶುಂಠಿ ನಾಟಿ ಬೇಸಾಯ ಪ್ರಾರಂಭಿಸಲಾಗಿದೆ. ಕೊಳವೆ ಬಾವಿ ಹೊಂದಿರುವ ರೈತರು ಸ್ಪ್ರಿಂಕ್ಲರ್‌ ಮೂಲಕ ನೀರು ಸಿಂಪರಣೆ ಮಾಡುತ್ತಿದ್ದಾರೆ. ಕೆಲ ರೈತರು ಕಿ.ಮೀ. ದೂರದಿಂದ ಪೈಪು ಮೂಲಕ ನೀರು ಸರಬರಾಜು ಮಾಡಿಕೊಂಡು ಸ್ಪ್ರಿಂಕ್ಲರ್‌ ಮಾಡುತ್ತಿದ್ದಾರೆ.

ರಾತ್ರಿ ವೇಳೆ 3 ಫೇಸ್‌ ವಿದ್ಯುತ್‌ ನೀಡುತ್ತಿರುವುದರಿಂದ, ರೈತರು ಇಡೀ ರಾತ್ರಿ ನಿದ್ರೆಗೆಟ್ಟು ನೀರು ಹಾಯಿಸುತ್ತಿದ್ದಾರೆ.ಬುಧವಾರ ರಾತ್ರಿ ಹದ ಮಳೆಯಾಗಿದೆ. ಮಳೆಗಾಗಿ ಕಾಯುತ್ತಿದ್ದವರು ಬುಧವಾರ ಮತ್ತು ಗುರುವಾರ ಶುಂಠಿ ಬೇಸಾಯಆರಂಭಿಸಿದ್ದಾರೆ. ವಾರಕ್ಕೊಮ್ಮೆಯಾದರೂ ಮಳೆಯಾಗದಿದ್ದರೆ ಬೆಳೆಗಾರರ ಸ್ಥಿತಿ ಚಿಂತಾಜನಕವಾಗುತ್ತದೆ.

Advertisement

ಒಂದು ಚೀಲ (60 ಕೆ.ಜಿ.) ಶುಂಠಿ ನಾಟಿ ಮಾಡಿ,ಬೆಳೆ ಕೈಗೆ ಸಿಗುವ ವೇಳೆಗೆ ಸುಮಾರು ಹತ್ತು ಸಾವಿರ ರೂ. ವೆಚ್ಚವಾಗುತ್ತದೆ. ಸರಿಯಾಗಿ ವಿದ್ಯುತ್‌ಇರುವುದಿಲ್ಲ. ಕಷ್ಟಪಟ್ಟು ನೀರು ಸಿಂಪಡಿಸಿಬೆಳೆಯುತ್ತಿದ್ದೇವೆ. ಉತ್ತಮ ಬೆಳೆ ಬಂದು ಬೆಲೆ ಸಿಕ್ಕಿದರೆನಮ್ಮಂತಹವರ ಬದುಕು ಹಸನಾಗುತ್ತದೆ. ಕೃಷ್ಣೇಗೌಡ, ರೈತ, ಮರಸು ಹೊಸಳ್ಳಿ.

ತಾಲೂಕಾದ್ಯಂತ ಸುಮಾರು 350 ಹೆಕ್ಟೇರ್‌ ಪ್ರದೇಶದಲ್ಲಿ ಶುಂಠಿಯನ್ನು ಬೆಳೆಯುತ್ತಿದ್ದಾರೆ. ಸಸಿ ಮಡಿಯಲ್ಲಿ ನೀರು ನಿಲ್ಲದಂತೆ, ಕಾಲಕ್ಕೆ ತಕ್ಕಂತೆ ಮುಂಜಾಗ್ರತೆಯಿಂದ ಕ್ರಿಮಿನಾಶಕ ಬಳಸಿದರೆ ರೋಗಮುಕ್ತವಾಗಿ ಬೆಳೆಯಬಹುದು. ನೀರು ನಿಂತರೆ ಕೊಳೆ ರೋಗ ಬರಲಿದೆ. ನೀರು ನಿಲ್ಲದಂತೆ ರೈತರು ಜಾಗ್ರತೆ ವಹಿಸಬೇಕು. ಕೇಶವ್‌, ಸಹಾಯಕ ನಿರ್ದೇಶಕರು,ತೋಟಗಾರಿಕೆ ಇಲಾಖೆ, ಆಲೂರು.

 

ಟಿ.ಕೆ.ಕುಮಾರಸ್ವಾಮಿ ಆಲೂರು

Advertisement

Udayavani is now on Telegram. Click here to join our channel and stay updated with the latest news.

Next