ಚತ್ತೋಗ್ರಾಮ್: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ಶುಭ್ಮನ್ ಗಿಲ್ ಮತ್ತು ಚೇತೇಶ್ವರ ಪೂಜಾರ ಶತಕದ ಆಟವಾಡಿ ನೆರವು ನೀಡಿದರು.
ಎರಡನೇ ಇನ್ನಿಂಗ್ ನಲ್ಲಿ ಎರಡು ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿದ ಭಾರತವು ಡಿಕ್ಲೇರ್ ಮಾಡಿಕೊಂಡಿದೆ. ಬಾಂಗ್ಲಾಗೆ 513 ರನ್ ಗಳ ಗೆಲುವಿನ ಗುರಿ ನೀಡಿದೆ.
ಬಾಂಗ್ಲಾ ಆಟಗಾರರು ಬ್ಯಾಟಿಂಗ್ ಮಾಡಲು ಪರದಾಡಿದ ಪಿಚ್ ನಲ್ಲಿ ಗಿಲ್ ಮತ್ತು ಪೂಜಾರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. 152 ಎಸೆತಗಳಲ್ಲಿ 110 ರನ್ ಗಳಿಸಿದ ಶುಭ್ಮನ್ ಗಿಲ್ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ಚೊಚ್ಚಲ ಶತಕ ಬಾರಿಸಿದರು.
ಇವರೊಂದಿಗೆ ತಮ್ಮ ಶೈಲಿಗಿಂತ ವೇಗವಾಗಿಯೇ ಬ್ಯಾಟ್ ಬೀಸಿದ ಚೇತೇಶ್ವರ ಪೂಜಾರ ತಮ್ಮ ಶತಕದ ಬರ ನೀಗಿಸಿದರು. ಮೊದಲ ಇನ್ನಿಂಗ್ ನಲ್ಲೂ 90 ರನ್ ಗಳಿಸಿದ್ದ ಪೂಜಾರ ಶತಕ ವಂಚಿತರಾಗಿದ್ದರು. ಆದರೆ ಎರಡನೇ ಇನ್ನಿಂಗ್ ನಲ್ಲಿ 130 ಎಸೆತಗಳಲ್ಲಿ ಅಜೇಯ 102 ರನ್ ಬಾರಿಸಿದರು. ಈ ಮೂಲಕ 52 ಇನ್ನಿಂಗ್ ಗಳ ಬಳಿಕ ಪೂಜಾರ ಅಂತಾರಾಷ್ಟ್ರೀಯ ಶತಕ ಬಾರಿಸಿದರು.
ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್: 404
ಬಾಂಗ್ಲಾ ಮೊದಲ ಇನ್ನಿಂಗ್ಸ್: 150
ಭಾರತ ಎರಡನೇ ಇನ್ನಿಂಗ್: 258/2 ಡಿಕ್ಲೇರ್