Advertisement

ಗಿಳಿಯಾರು: ಬೆಂಕಿ ಅವಘಡ;  ಕಲ್ಲಂಗಡಿ ಕೃಷಿಗೆ ಹಾನಿ

03:54 PM Mar 25, 2017 | |

ಕೋಟ: ಕೋಟ ಗ್ರಾ.ಪಂ. ವ್ಯಾಪ್ತಿಯ ಮೂಡುಗಿಳಿಯಾರಿನ ಕೃಷಿಭೂಮಿಯಲ್ಲಿ ಮಾ.23ರಂದು ಬೆಂಕಿ ಅವಘಡ‌ ಸಂಭವಿಸಿದ್ದು, ಬೆಂಕಿಯ ತೀವ್ರತೆ ನೂರಾರು ಎಕ್ರೆ  ಕೃಷಿಭೂಮಿಗೆ ವ್ಯಾಪಿಸಿತು ಹಾಗೂ ಹೇರಳವಾಗಿ  ಬೆಳೆದಿದ್ದ ಕಲ್ಲಂಗಡಿ  ಬೆಳೆಗೆ ಹಾನಿಯಾಯಿತು.  ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬಂದಿಗಳ  ಜಂಟಿ  ಕಾರ್ಯಾಚರಣೆಯಿಂದ ಸಂಭಾವ್ಯ ಭಾರೀ  ಅನಾಹುತ ತಪ್ಪಿದೆ. 

Advertisement

ಅಗ್ನಿಶಾಮಕದಳ ವಾಹನದ ಅವಸ್ಥೆ  ಕುಂದಾಪುರ ಅಗ್ನಿಶಾಮಕ ಠಾಣೆಯಲ್ಲಿ ಕಾರ್ಯನಿರ್ವಹಿಸುವ ವಾಹನವು ಸುಮಾರು ಇಪ್ಪತ್ತು ವರ್ಷಗಳಿಗಿಂತ ಹಳೆಯದಾಗಿದ್ದು ತುರ್ತು ಸಂದರ್ಭಗಳಲ್ಲಿ  ಕಾರ್ಯಾಚರಣೆ  ನಡೆಸಲು ಇದರಿಂದ ಸಾಧ್ಯವಾಗುತ್ತಿಲ್ಲ. ಗುರುವಾರ ಗಿಳಿಯಾರಿನಲ್ಲಿ  ಅಗ್ನಿ ಅವಘಡ ಸಂಭವಿಸಿದಾಗ  ಸ್ಥಳಕ್ಕಾಗಮಿಸಿದ ವಾಹನ ತುರ್ತು  ಕಾರ್ಯಾಚರಿಸುವಲ್ಲಿ ವಿಫಲವಾಯಿತು. ಈ ಕುರಿತು  ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿ ಜಿ.ಪಂ.ಸದಸ್ಯ  ರಾಘವೇಂದ್ರ ಕಾಂಚನ್‌  ಅವರ  ಗಮನಕ್ಕೆ ತಂದರು. ಅನಂತರ ಜಿ.ಪಂ. ಸದಸ್ಯರು ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ  ಗಮನಕ್ಕೆ ತಂದು ಕ್ರಮಕೈಗೊಳ್ಳುವಂತೆ ವಿನಂತಿಸಿದ್ದಾಗಿ ಪತ್ರಿಕೆಗೆ ತಿಳಿಸಿದ್ದಾರೆ.

ಸ್ಥಳಕ್ಕೆ   ಜಿ.ಪಂ. ಸದಸ್ಯ ರಾಘವೇಂದ್ರ  ಕಾಂಚನ್‌, ಕೋಟ ಸಿ.ಎ.ಬ್ಯಾಂಕ್‌  ಅಧ್ಯಕ್ಷ ತಿಮ್ಮ ಪೂಜಾರಿ, ತಾ.ಪಂ.ಮಾಜಿ ಸದಸ್ಯ  ಭರತ್‌ ಶೆಟ್ಟಿ, ಗ್ರಾ.ಪಂ.ಸದಸ್ಯೆ ಜ್ಯೋತಿ  ಬಿ.ಶೆಟ್ಟಿ  ಭೇಟಿ  ನೀಡಿದ್ದಾರೆ  ಹಾಗೂ ಅಗ್ನಿಶಾಮಕದಳದ ಸಿಬಂದಿಗಳಾದ ನವೀನ್‌, ಚೆನ್ನಯ ಪೂಜಾರಿ , ಸಂತೋಷ್‌ ಶೆಟ್ಟಿ, ವಿಷ್ಣು ಡಿ.ಗೌಡ, ದೀಪಕ್‌   ಬೆಂಕಿ ನಂದಿಸುವಲ್ಲಿ  ಪರಿಶ್ರಮಪಟ್ಟರು.
 

Advertisement

Udayavani is now on Telegram. Click here to join our channel and stay updated with the latest news.

Next