Advertisement

ಪ್ರತಿಭಾ ಸಂಪನ್ನರಿಗೆ ಪ್ರೋತ್ಸಾಹ ಅಗತ್ಯ: ಪೂಜಾರಿ

06:35 PM Sep 05, 2022 | Team Udayavani |

ಯಾದಗಿರಿ: ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ಹಲವು ಶಾಲಾ ಮಕ್ಕಳಲ್ಲಿ ಪ್ರತಿಭಾ ಸಂಪನ್ನರಿದ್ದಾರೆ. ಅವರಿಗೆ ಪ್ರೋತ್ಸಾಹದ ಅಗತ್ಯವಿದ್ದು, ಪ್ರತಿಯೊಬ್ಬ ಸಾಮಾಜಿಕ ಕಾಳಜಿಯುಳ್ಳವರು ಪ್ರತಿಭಾ ಪೋಷಣೆ ಮಾಡಬೇಕು ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಪೂಜಾರಿ ಹೇಳಿದರು.

Advertisement

ಇಲ್ಲಿನ ದಿ| ತಿಮ್ಮಣ್ಣ ಹೆಡಗಿಮದ್ರಾ ಶಾಲೆ ಆವರಣದಲ್ಲಿ ಯಾದಗಿರಿ ಗ್ರಾಮೀಣ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಕ್ಕಳಿಗೆ ಇಂತಹ ವೇದಿಕೆಗಳು ಒದಗಿಸಿ ಕೊಟ್ಟಾಗ ಅವರಲ್ಲಿರುವ ಸೂಪ್ತ ಪ್ರತಿಭೆ ಬಹಿರಂಗಗೊಂಡು ಅವರ ಸಮಗ್ರ ವಿಕಾಸಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತರೆಡ್ಡಿ ಮಾತನಾಡಿ, ಶಾಲಾ ಹಂತದಲ್ಲಿಯೇ ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯುಪಟ್ಟರು. ಶಾಲೆಗೆ ಬರುವ ಮಕ್ಕಳಲ್ಲಿ ಯಾವ ಪ್ರತಿಭೆ ಇರುತ್ತದೆ ಎಂಬುದು ಗೊತ್ತಿರುವುದಿಲ್ಲ. ಇಂತಹ ವೇದಿಕೆಗಳು ಸಿಕ್ಕಾಗ ಅದನ್ನು ಬಹಿರಂಗ ಪಡಿಸಲು ಸಾಧ್ಯವಾಗುತ್ತದೆ. ಶಿಕ್ಷಕರಿಗೂ ಈ ಕಾರ್ಯಕ್ರಮದಿಂದಾಗಿ ತಮ್ಮ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಚಿಂತನೆಗೆ ಹಚ್ಚುತ್ತದೆ ಎಂದರು.

ಶಿಕ್ಷಣ ಸಂಯೋಜಕ ಶರಣಗೌಡ ಬಿರಾದಾರ, ಬಿಆರ್‌ಪಿ ಬಂದಪ್ಪ ಐರೆಡ್ಡಿ, ನೌಕರರ ಸಂಘದ ಮಹೇಶ ಪಾಟೀಲ್‌, ಶಿಕ್ಷಕರ ಸಂಘದ ವೆಂಕಟರೆಡ್ಡಿ, ರಮೇಶಕುಮಾರ ಇಟೆ, ಜಯಶ್ರೀ, ಶಾಲೆಯ  ಮುಖ್ಯಗುರು ಜೈನ್‌, ಶಿಕ್ಷಕರಾದ ಶರಣಪ್ಪ ಹೆಡಗಿಮುದ್ರಿ, ಕೊಲಿವಾಡ ಶಾಲೆ ಶಿಕ್ಷಕಿ ಶ್ರೀದೇವಿ, ಸಿಆರ್‌ಪಿ ಗುಂಡೂರಾವ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next