Advertisement

ಕೆಸಿಎನ್‌ ಪರ “ತುಪ್ಪದ ಹುಡುಗಿ’ಪ್ರಚಾರ

08:55 AM Dec 01, 2019 | Sriram |

ಕೆ.ಆರ್‌.ಪೇಟೆ: ಕೆ.ಆರ್‌.ಪೇಟೆ ಉಪ ಚುನಾವಣಾ ಕಣ ರಂಗೇರುತ್ತಿದ್ದು, ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡರ ಪರ “ತುಪ್ಪದ ಹುಡುಗಿ’ ಎಂದೇ ಹೆಸರಾಗಿರುವ ರಾಗಿಣಿ ದ್ವಿವೇದಿ ಪ್ರಚಾರ ನಡೆಸಿದರು. ಇವರಿಗೆ ಕಿರುತೆರೆ ನಟಿಯರು ಸಾಥ್‌ ನೀಡಿದರು.

Advertisement

ತಾಲೂಕಿನ ಬಂಡಿಹೊಳೆ, ಕುಪ್ಪಳ್ಳಿ, ಮಾಕವಳ್ಳಿ, ಹಿರಿಕಳಲೆ, ಅಕ್ಕಿಹೆಬ್ಟಾಳು, ಸಂತೇಬಾಚಹಳ್ಳಿ, ಕಿಕ್ಕೇರಿ ಗ್ರಾಮಗಳಲ್ಲಿ ತೆರೆದ ವಾಹನದಲ್ಲಿ ನಟಿ ರಾಗಿಣಿ ದ್ವಿವೇದಿ ಪ್ರಚಾರ ನಡೆಸಿದರು. ರಾಗಿಣಿಗೆ “ಪಾರು’ ಧಾರಾವಾಹಿ ಖ್ಯಾತಿಯ ಮೋಕ್ಷಿತಾಶ, “ಕಮಲಿ’ ಧಾರಾವಾಹಿಯ ಆಶಿಕಾ ಸಾಥ್‌ ನೀಡಿದರು. ಹಾಸ್ಯ ನಟರಾದ ಡಿಂಗ್ರಿ ನಾಗರಾಜ್‌, ಟೆನ್ನಿಸ್‌ ಕೃಷ್ಣ, ಮೂಗೂರು ಸುರೇಶ್‌, ಬುಲೆಟ್‌ ಪ್ರಕಾಶ್‌ ಕೂಡ ಪ್ರಚಾರದಲ್ಲಿ ಪಾಲ್ಗೊಂಡರು.

ತಾರೆಯರನ್ನು ನೋಡಿದ ತಾಲೂಕಿನ ಯುವಜನ, ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು. ಈ ವೇಳೆ, ಜನಜಂಗುಳಿ ನಿಯಂತ್ರಿಸಲು ಪೋಲಿಸರು ಹರಸಾಹಸ ನಡೆಸಿದರು. ರಾಗಿಣಿ ಪುಟ್ಟ ಮಕ್ಕಳನ್ನು ಎತ್ತಿಕೊಂಡು ಮುದ್ದಾಡಿದರಲ್ಲದೆ, ಹೆಣ್ಣು ಮಕ್ಕಳು, ಯುವಕ, ಯುವತಿಯರೊಂದಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next