Advertisement

Ghaziabad: ಪೊದೆಯಲ್ಲಿ ಸಿಕ್ಕ ನವಜಾತ ಹೆಣ್ಣು ಶಿಶುವನ್ನು ದತ್ತು ಪಡೆದ ಇನ್ಸ್‌ಪೆಕ್ಟರ್‌!

10:05 PM Oct 12, 2024 | Team Udayavani |

ಗಾಜಿಯಾಬಾದ್‌: ಉತ್ತರ ಪ್ರದೇಶದ ಗಾಜಿಯಾಬಾದ್‌ನ ಪೊದೆಯೊಂದರಲ್ಲಿ ಸಿಕ್ಕ ನವಜಾತ ಹೆಣ್ಣು ಶಿಶುವನ್ನು ಇನ್ಸ್‌ಪೆಕ್ಟರ್‌ವೊಬ್ಬರು ರಕ್ಷಿಸಿದ್ದು, ಬಳಿಕ ಅವರೇ ಈಗ ಅದನ್ನು ದತ್ತು ಪಡೆಯಲು ನಿರ್ಧರಿಸಿದ್ದಾರೆ.

Advertisement

ಪೊದೆಯಲ್ಲಿ ಶಿಶು ಅಳುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ದುಢಿಯಾ ಪೀಪಲ್‌ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಪುಷ್ಪೇಂದ್ರ ಸಿಂಗ್‌ ಸ್ಥಳಕ್ಕಾಗಮಿಸಿ ಮಗುವನ್ನು ರಕ್ಷಿಸಿದ್ದಾರೆ. ಮಗುವಿನ ಹೆತ್ತವರು ಪತ್ತೆಯಾಗದ ಕಾರಣ, ಸಿಂಗ್‌ ತಮ್ಮ ಪತ್ನಿ ಬಳಿ ಚರ್ಚಿಸಿ ಅಂತಿಮವಾಗಿ ತಾವೇ ದತ್ತು ಪಡೆಯಲು ಮುಂದಾಗಿದ್ದಾರೆ.

ಪುಷ್ಪೇಂದ್ರ ಸಿಂಗ್‌ 2018ರಲ್ಲಿ ವಿವಾಹವಾಗಿದ್ದು, ಇನ್ನೂ ಮಕ್ಕಳಾಗಿಲ್ಲ. ಅಲ್ಲದೆ, ನವರಾತ್ರಿ ವೇಳೆ ಈ ಮಗು ಸಿಕ್ಕಿದ್ದು, ದೇವಿಯ ಆಶೀರ್ವಾದ ಎಂದಿದ್ದಾರೆ. ದತ್ತು ಪಡೆವ ಕಾನೂನು ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next