Advertisement

ಗಾಜಿಯಾಬಾದ್‌: ಸಹೋದ್ಯೋಗಿಯನ್ನು ಕೊಂದ ಬಿಎಸ್‌ಎಫ್ ಜವಾನ

04:40 PM Oct 01, 2018 | Team Udayavani |

ಗಾಜಿಯಾಬಾದ್‌ : ಉತ್ತರ ಪ್ರದೇಶದ ಗಾಜಿಯಾಬಾದ್‌ ನಲ್ಲಿ ಇಂದು ಸೋಮವಾರ ಬಿಎಸ್‌ಎಫ್ ಜವಾನನೋರ್ವ ತನ್ನ ಸಹೋದ್ಯೋಗಿಯನ್ನು ಗುಂಡಿಕ್ಕಿ ಕೊಂದ ಘಟನೆ ವರದಿಯಾಗಿದೆ. 

Advertisement

ಗಾಜಿಯಾಬಾದ್‌ನ ಲಿಂಕ್‌ ರೋಡ್‌ ಪ್ರದೇಶದಲ್ಲಿರುವ ಬಾಲ ಭಾರತಿ ಶಾಲೆಯಲ್ಲಿ ಪ್ರಕೃತ ನಿಯೋಜಿಸಲ್ಪಟ್ಟಿರುವ ಬಿಎಸ್‌ಎಫ್ ತುಕಡಿಯ ಜವಾನ ತನ್ನ ಸಹೋದ್ಯೋಗಿಯೊಬ್ಬರನ್ನು ಇಂದು ಸೋಮವಾರ ಬೆಳಗ್ಗೆ 8 ಗಂಟೆಯ ಹೊತ್ತಿಗೆ ಗುಂಡಿಕ್ಕಿ ಸಾಯಿಸಿದ ಎಂದು ಮೂಲಗಳು ತಿಳಿಸಿವೆ. 

ಇಬ್ಬರೂ ಜವಾನರು 95ನೇ ಬೆಟಾಲಿಯನ್‌ಗೆ ಸೇರಿದವರಾಗಿದ್ದು ಇವರನ್ನು ಗುರ್ಗಾಂವ್‌ ನಲ್ಲಿ ಕಾವಲು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅಲ್ಲದೆ ಗಾಜಿಯಾಬಾದ್‌ ಪೊಲೀಸರಿಗೆ ಕಾನೂನು ಮತ್ತು ಸುವ್ಯವಸ್ಥೆ ಪಾಲನೆಯಲ್ಲಿ ನೆರವಾಗುವುದು ಕೂಡ ಇವರ ಕೆಲಸವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next