Advertisement

UP: ನಾಯಿ ಕಚ್ಚಿದ ವಿಷಯ ಪೋಷಕರಿಗೆ ತಿಳಿಸದೇ ಮುಚ್ಚಿಟ್ಟ ಬಾಲಕ ರೇಬೀಸ್‌ ನಿಂದ ಕೊನೆಯುಸಿರು!

02:30 PM Sep 06, 2023 | Team Udayavani |

ಗಾಜಿಯಾಬಾದ್:‌ ನಾಯಿ ಕಚ್ಚಿದ ವಿಷಯವನ್ನು ಭಯದಿಂದ ಪೋಷಕರಿಗೆ ತಿಳಿಸದೇ ಮುಚ್ಚಿಟ್ಟ ಪರಿಣಾಮ 14 ವರ್ಷದ ಬಾಲಕನೊಬ್ಬ ರೇಬೀಸ್‌ ಸೋಂಕಿನಿಂದ ಸಾವನ್ನಪ್ಪಿರುವ ಘಟನೆ ಗಾಜಿಯಾಬಾದ್‌ ನಲ್ಲಿ ನಡೆದಿದೆ.

Advertisement

ಇದನ್ನೂ ಓದಿ:Mysore Dasara ಗಜಪಡೆಗಳ ತೂಕ ಪರೀಕ್ಷೆ: ಅಂಬಾರಿ ಹೊರುವ ಅಭಿಮನ್ಯುವಿನ ತೂಕವೆಷ್ಟು ಗೊತ್ತ?

8ನೇ ತರಗತಿ ವಿದ್ಯಾರ್ಥಿ ಶಹವಾಜ್ ಎಂಬಾತನಿಗೆ ತಿಂಗಳ ಹಿಂದೆ ನಾಯಿಯೊಂದು ಕಚ್ಚಿತ್ತು. ಆದರೆ  ಈ ವಿಷಯವನ್ನು ಪೋಷಕರಿಗೆ ತಿಳಿಸದೇ ಮುಚ್ಚಿಟ್ಟಿದ್ದು, ಬಾಲಕನ ಸ್ಥಿತಿ ಚಿಂತಾಜನಕವಾದ ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದ ವೇಳೆ ರೇಬೀಸ್‌ ಸೋಂಕು ಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.

ವಿಜಯನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಚರಣ್‌ ಸಿಂಗ್‌ ಕಾಲೋನಿ ನಿವಾಸಿ ಶಹವಾಜ್‌ ಗೆ ಸುಮಾರು ಒಂದು ತಿಂಗಳ ಹಿಂದೆ ನೆರೆಮನೆಯ ನಾಯಿ ಕಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಳಿಕ ಆತ ರೇಬೀಸ್‌ ಗೆ ಒಳಗಾಗಿದ್ದರಿಂದ ಅಸಹಜವಾಗಿ ವರ್ತಿಸಲು ಆರಂಭಿಸಿದ್ದು, ಊಟೋಪಚಾರವನ್ನು ನಿಲ್ಲಿಸಿದ್ದ.

ಶಹವಾಜ್‌ ನ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದ್ದಾಗ ಆತನ ಪೋಷಕರು ಆತನನ್ನು ದೆಹಲಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ್ದರು. ನಂತರ ಪೋಷಕರು ಮಗನನ್ನು ಬುಲಂದ್‌ ಶಹರ್‌ ನಲ್ಲಿರುವ ಆಯುರ್ವೇದ ವೈದ್ಯರ ಬಳಿ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Advertisement

ಈ ಸಂದರ್ಭದಲ್ಲಿ ಆಂಬುಲೆನ್ಸ್‌ ನಲ್ಲಿ ಗಾಜಿಯಾಬಾದ್‌ ಗೆ ವಾಪಸ್‌ ಕರೆದುಕೊಂಡು ಬರುವ ವೇಳೆ ಬಾಲಕ ಕೊನೆಯುಸಿರೆಳೆದಿರುವುದಾಗಿ ವರದಿ ತಿಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಶ್ವಾನದ ಮಾಲೀಕನ ವಿರುದ್ಧ ದೂರು ದಾಖಲಿಸಿರುವುದಾಗಿ ಅಸಿಸ್ಟೆಂಟ್‌ ಪೊಲೀಸ್‌ ಕಮಿಷನರ್‌ ನಿಮಿಶ್‌ ಪಾಟೀಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next