ಮುಂಬಯಿ, ಫೆ. 1: ಘಾಟ್ ಕೋಪರ್ ಪಶ್ಚಿಮದ ಗಾಂವ್ದೇವಿ ರೋಡ್‌ನ, ಮೌಲಾನಾ ಕಂಪೌಂಡ್ ನಲ್ಲಿರುವ ಶ್ರೀ ಶನೀಶ್ವರ ದೇವ ಸ್ಥಾನದ 57ನೇ ವಾರ್ಷಿಕ ಮಹೋತ್ಸವದ ಅಂಗವಾಗಿ ಶ್ರೀ ಸತ್ಯನಾರಾಯಣ ಮಹಾಪೂಜೆ ಮತ್ತು ಶ್ರೀ ಶನಿಮಹಾಪೂಜೆಯು ಫೆ. 1ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಶನೀಶ್ವರ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 7ರಿಂದ ಗಣಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ಪೂರ್ವಾಹ್ನ 10ರಿಂದ ತೀರ್ಥ ಪ್ರಸಾದ ವಿತರಣೆ, ತುಲಾಭಾರ ಸೇವೆ, ಮಧ್ಯಾಹ್ನ 12ರಿಂದ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಂದಿರದ ಪ್ರಧಾನ ಅರ್ಚಕ ಅರಮನೆ ರಾಘವೇಂದ್ರ ಭಟ್ ಮತ್ತು ಬಳಗದವರಿಂದ ನೆರವೇರಿತು.
ಸಂಜೆ 4ರಿಂದ ಭಜನೆ, ರಾತ್ರಿ 8 ರಿಂದ ಅನ್ನಸಂತರ್ಪಣೆ, ರಾತ್ರಿ 8 ರಿಂದ ಮರುದಿನ ಫೆ. 2ರ ಬೆಳಗ್ಗೆ 8 ರವರೆಗೆ ಶ್ರೀ ಶನಿಗ್ರಂಥ ಪಾರಾಯಣ, ಮಹಾಮಂಗಳಾರತಿ, ಪ್ರಸಾದವಿತರಣೆಯನ್ನು ಆಯೋಜಿಸಲಾಗಿತ್ತು. ಮಂದಿರದ ಅಧ್ಯಕ್ಷ ಗಣೇಶ್ ಎನ್. ರೈ ಅವರ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವು ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಎನ್. ಶೆಟ್ಟಿ, ಗೌರವ ಕೋಶಾಧಿಕಾರಿ ಗೋಪಾಲ ಕುಂದರ್, ಉಪಾಧ್ಯಕ್ಷ ಶ್ರೀರಾಮ್ ಎಸ್. ರಾಣೆ, ಜತೆಕಾರ್ಯದರ್ಶಿ ಶರಣ್ ಜಿ. ಹೆಗ್ಡೆ, ಜತೆ ಕೋಶಾಧಿಕಾರಿ ಅಮಿತಾ ಎಸ್. ಶೆಟ್ಟಿ , ಪ್ರಸನ್ನ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಮ ಸಿ. ಕೋಟ್ಯಾನ್, ಸತೀಶ್ ಕೆ. ಹೆಗಡೆ, ಶ್ರೀನಿವಾಸ್ ಎಸ್. ಕೋಟ್ಯಾನ್, ಕಿಟ್ಟ ಎ. ಕುಂದರ್, ಶಿವರಾಮ ಎ. ಕೋಟ್ಯಾನ್, ಪದ್ಮನಾಭ ಜಿ. ರೈ, ರವೀಂದ್ರ ಎ. ಅಮೀನ್, ಚಂದ್ರಶೇಖರ ಎಸ್. ಪೂಜಾರಿ, ನವೀನ್ ಎಸ್. ಸುವರ್ಣ, ಮುಕುಂದ್ ಎಸ್. ಬಂಗೇರ, ಪ್ರದೀಪ್ ಎಸ್. ಸುವರ್ಣ, ಜಯಕರ ಎಸ್. ಶೆಟ್ಟಿ, ಸುರೇಂದ್ರ ಎಂ. ಬೆಳ್ಚಡ, ರವಿರಾಜ್ ಎಂ. ಶೆಟ್ಟಿ, ಸುರೇಶ್ ಡಿ. ಬಂಗೇರ, ಸುಪ್ರೀತಾ ಎಸ್. ಶೆಟ್ಟಿ, ಶಶಿಪ್ರಭಾ ಸಿ. ಶೆಟ್ಟಿ, ಸುಧಾಕರ ಬಿ. ಅಮೀನ್ ಹಾಗೂ ವಿಶ್ವಸ್ತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಸ್ಥಳೀಯ ತುಳು-ಕನ್ನಡಿಗ ಭಕ್ತಾದಿಗಳು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು,ಸ್ಥಳೀಯ ಉದ್ಯಮಿಗಳು, ರಾಜಕೀಯಧುರೀಣರು, ವಿವಿಧ ಕ್ಷೇತ್ರಗಳ ಗಣ್ಯರು, ದಾನಿಗಳು, ಸಮಾಜ ಸೇವಕರು, ಸೇವಾರ್ಥಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಶ್ರೀಶನಿ ದೇವರ ಕೃಪೆಗೆ ಪಾತ್ರರಾದರು.
ಚಿತ್ರ-ವರದಿ: ಸುಭಾಷ್ ಶಿರಿಯಾ