Advertisement

ಘಾಟ್‌ಕೋಪರ್‌ ದುರ್ಗಾಪರಮೇಶ್ವರಿ ಮಂದಿರ: ನವರಾತ್ರಿ ಉತ್ಸವ

06:20 PM Oct 20, 2019 | Suhan S |

ಮುಂಬಯಿ, ಅ. 19: ಘಾಟ್‌ ಕೋಪರ್‌ ಪೂರ್ವದ ಪಂತ್‌ ನಗರದ ಬಿಲ್ಡಿಂಗ್‌ ನಂಬರ್‌ 7ರಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಮಂದಿರದಲ್ಲಿ ವಾರ್ಷಿಕ ನವರಾತ್ರಿ ಉತ್ಸವವು ಸೆ. 29ರಂದು ಪ್ರಾರಂಭಗೊಂಡು, ಅ. 8ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

Advertisement

ದಿನಂಪ್ರತಿ ಬೆಳಗ್ಗೆ 6ರಿಂದ ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ಶ್ರೀ ಗಣಪತಿ ಹವನ, ಅಲಂಕಾರ ಪೂಜೆ, ಶ್ರೀ ದುರ್ಗಾ ಪೂಜೆ, ನೈವೇದ್ಯ ಮಂಗಳ ಆರತಿ, ಸಂಜೆ 6ರಿಂದ ಭಜನೆ, ವಿಶೇಷ ಘಟಪೂಜೆ, ರಾತ್ರಿ 8ರಿಂದ ಮಹಾಮಂಗಳಾರತಿ, ಪ್ರಸಾದ ವಿತರಣೆ, ರಾತ್ರಿ 8.30 ರಿಂದ ದಾಂಡಿಯಾ ರಾಸ್‌, ಗರ್ಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅ. 3ರಂದು ಸಂಜೆ 6.30 ರಿಂದ ಸಾಮೂಹಿಕ ಲಲಿತಾ ಸಹಸ್ರ ನಾಮಾರ್ಚನೆ, ಅ. 3ರಂದು ಸಂಜೆ 6.30ರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಅ. 5ರಂದು ಸಂಜೆ 4.30ರಿಂದ ಮಹಿಳಾ ವಿಭಾಗದಿಂದ ಧಾರ್ಮಿಕ ಕಾರ್ಯಕ್ರಮ, ಅ. 6 ರಂದು ಅಪರಾಹ್ನ 3ರಿಂದ ಅಷ್ಟಮಿ ಹವನ, ಅ. 7ರಂದು ಬೆಳಗ್ಗೆ 10 ರಿಂದ ಶ್ರೀ ದುರ್ಗಾ ಹವನ, ಸಂಜೆ 5ರಿಂದ ಭಕ್ತಿಸುಧಾ ಭಜನೆ, ಭಂಡಾರ ಮಹಾಪ್ರಸಾದ, ಅ. 8ರಂದು ಬೆಳಗ್ಗೆ 11ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ಸಂಜೆ 5ರಿಂದ ಅರಸಿನ ಕುಂಕುಮ, ಪಲ್ಲಕ್ಕಿ ಉತ್ಸವ ನಡೆಯಿತು.

ಘಟ ವಿಸರ್ಜನೆಯು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿದ್ದು, ಹುಲಿವೇಷ ನೃತ್ಯ, ಯಕ್ಷಗಾನ ಕುಣಿತ, ಗೊಂಬೆ ಕುಣಿತ, ಇನ್ನಿತರ ನಾಡಿನ ಸಂಸ್ಕೃತಿ-ಸಂಸ್ಕಾರಗಳನ್ನು ಬಿಂಬಿಸುವ ಪ್ರಾತ್ಯಕ್ಷಿಕೆಗಳು, ಜಾನಪದ ನೃತ್ಯ ಗಳು, ವಾದ್ಯ-ಸಂಗೀತಗಳ ನಿನಾದ ದೊಂದಿಗೆ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರುಗು ನೀಡಿದರು. ಒಂಭತ್ತು ದಿನಗಳ ಕಾಲ ನಡೆದ ನವರಾತ್ರಿ ಉತ್ಸವದಲ್ಲಿ ಸ್ಥಳೀಯ ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ತುಳು-ಕನ್ನಡ ಹಾಗೂ ವಿವಿಧ ಸಮುದಾಯ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ತುಳು-ಕನ್ನಡಿಗ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾದರು.

ಮಂದಿರದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

 

 ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next