Advertisement

ಸನ್ನತಿ ಅಭಿವೃದ್ದಿಗೆ ಸಂಸದ ಜಾಧವಗೆ ಘೇರಾವ್‌

11:38 AM Dec 19, 2021 | Team Udayavani |

ವಾಡಿ: ಸಮೀಪದ ಸನ್ನತಿ ಬೌದ್ಧ ಸ್ತೂಪ ತಾಣಕ್ಕೆ ಭೇಟಿ ನೀಡಿದ ಸಂಸದ ಡಾ| ಉಮೇಶ ಜಾಧವಗೆ ಬೌದ್ಧ ಸಮಾಜ ಹಾಗೂ ದಲಿತ ಮುಖಂಡರು ಘೇರಾವ್‌ ಹಾಕಿ, ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಈ ಪ್ರದೇಶ 1994ರಲ್ಲೇ ಉಖ್ಖನನವಾಗಿದ್ದರೂ ಯಾವ ಮುಖಂಡರೂ ಇಲ್ಲಿಗೆ ಭೇಟಿ ನೀಡಿಲ್ಲ. ಕೇಂದ್ರ ಪಾಚ್ಯವಸ್ತು ಇಲಾಖೆ ಇಲ್ಲಿನ ಪ್ರವಾಸಿ ತಾಣಕ್ಕೆ ಯಾವುದೇ ಸೌಲಭ್ಯ ಒದಗಿಸಿಲ್ಲ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಸನ್ನತಿ ಬೌದ್ಧ ಸ್ತೂಪ ತಾಣಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಬೇಕು. ವಸ್ತು ಸಂಗ್ರಹಾಲಯ ಬಳಕೆಗೆ ಮುಕ್ತವಾಗಿಸಬೇಕು. ಮಳೆ, ಬಿಸಿಲು, ಗಾಳಿಗೆ ಹಾಳಾಗುತ್ತಿರುವ ಬುದ್ಧನ ಮೂರ್ತಿ, ಬುದ್ಧನ ಕಥೆಗಳಿರುವ ಶಿಲ್ಪಕಲೆಗಳನ್ನು ಸಂರಕ್ಷಿಸಬೇಕು. ಪ್ರವಾಸಿಗರನ್ನು ಸೆಳೆಯಲು ಅಗತ್ಯ ಸೌಕರ್ಯ ಒದಗಿಸಬೇಕು. ಸಂಸದರ ನಿಧಿಯಲ್ಲಿ ಸನ್ನತಿ ಅಭಿವೃದ್ಧಿಗೊಳಿಸಬೇಕು ಎಂದು ಆಗ್ರಹಿಸಿದರು.

ಬೌದ್ಧ ಸಮಾಜದ ಮುಖಂಡರಾದ ಸೂರ್ಯಕಾಂತ ರದ್ದೇವಾಡಿ, ಚಂದ್ರಸೇನ ಮೇನಗಾರ, ಶರಣಬಸು ಸಿರೂರಕರ, ರಮೇಶ ಬಡಿಗೇರ, ಶಿವುಕುಮಾರ ಯಲಸತ್ತಿ, ರಾಹುಲ್‌ ಮೇನಗಾರ, ಗುರುಪಾದ ದೊಡ್ಡಮನಿ, ರವಿ ಕೋಳಕೂರ ಮತ್ತಿತರರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next