ನವಿ ಮುಂಬಯಿ: ನಗರದ ಪ್ರಸಿದ್ಧ ಕಾರಣಿಕ ಕ್ಷೇತ್ರ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಅಂಗ ಸಂಸ್ಥೆ ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆಯ 16 ನೇ ವಾರ್ಷಿಕ ಮಹಾಪೂಜೆಯು ಡಿ. 15 ರಂದು ಪ್ರಾರಂಭಗೊಂಡಿದ್ದು, ಡಿ. 16 ರವರೆಗೆ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಧಾರ್ಮಿಕ ಕಾರ್ಯಕ್ರಮವಾಗಿ ಡಿ. 15 ರಂದು ಬೆಳಗ್ಗೆ 7 ರಿಂದ ಶ್ರೀ ಮಹಾಗಣಪತಿ ಹೋಮ, ಬೆಳಗ್ಗೆ 9 ರಿಂದ ಸಹಸ್ರ ನಾಮಾರ್ಚನೆ, ಪೂರ್ವಾಹ್ನ 11 ರಿಂದ ಭಜನೆ, ಮಧ್ಯಾಹ್ನ 12 ರಿಂದ ಮಹಾಪೂಜೆ, ಮಧ್ಯಾಹ್ನ 1 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ಮೂಕಾಂಬಿಕಾ ಭಜನಾ ಮಂಡಳಿಯವರಿಂದ ಭಜನೆ, ರಾತ್ರಿ 8 ರಿಂದ ದೀಪಾರಾಧಾನೆ, ಮಹಾಪೂಜೆ, ಅನ್ನಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು. ದೇವಾಲಯದ ಪ್ರಧಾನ ಅರ್ಚಕ ಗುರುಪ್ರಸಾದ್ ಭಟ್ ಅವರ ಪೌರೋಹಿತ್ಯದಲ್ಲಿ, ಶಿಬಿರದ ಗುರುಸ್ವಾಮಿಗಳಾದ ಪದ್ಮನಾಭ ಗುರುಸ್ವಾಮಿ, ದೆಪ್ಪುಣಿಗುತ್ತು ಚಂದ್ರಹಾಸ್ ಗುರುಸ್ವಾಮಿ ಹಾಗೂ ಇತರ ಸ್ವಾಮಿಗಳ ಸಹಕಾರದೊಂದಿಗೆ ದೇವತಾ ಕಾರ್ಯಗಳು ನಡೆಯಿತು.
ಚೆಂಡೆ ವಾದನದಲ್ಲಿ ಅಪ್ರಮೇಯ ಭಟ್ ಮತ್ತು ಬಳಗದವರು ಸಹಕರಿಸಿದರು. ಚಂದ್ರಶೇಖರ ಮತ್ತು ಬಳಗದವರಿಂದ ಸ್ಯಾಕೊÕಫೋನ್ ವಾದನ ನಡೆಯಿತು. ಅಯ್ಯಪ್ಪ ಸ್ವಾಮಿಯ ಮಂಟಪವನ್ನು ಅಡ್ವೆ ದಿವಾಕರ ಗುರುಸ್ವಾಮಿ ಮತ್ತು ಶ್ರೀನಿವಾಸ ಸ್ವಾಮಿ ಅವರು ಅಲಂಕರಿಸಿದ್ದರು. ಶಿಬಿರದ ಸ್ವಾಮಿಗಳಾದ ಸುರೇಶ್ ಸ್ವಾಮಿ, ಗಣೇಶ್ ಸ್ವಾಮಿ, ದಿನೇಶ್ ಸ್ವಾಮಿ, ರವಿ ಸ್ವಾಮಿ, ಲಕ್ಷ್ಮಣ್ ಸ್ವಾಮಿ, ರಂಜಿತ್ ಸ್ವಾಮಿ, ಜಯರಾಮ ಸ್ವಾಮಿ, ರಾಘು ಸ್ವಾಮಿ, ಸಂತೋಷ್ ಸ್ವಾಮಿ ಮೊದಲಾದವರು ಸಹಕರಿಸಿದರು.
ಸಂಸ್ಥೆಯ ಅಧ್ಯಕ್ಷ ನಂದಿಕೂರು ಜಗದೀಶ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಜರಗಿದ ಮಹಾಪೂಜೆಗೆ ದೇವಾಲಯದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಉಪಾಧ್ಯಕ್ಷರುಗಳಾದ ಪದ್ಮನಾಭ ಸಿ. ಶೆಟ್ಟಿ, ದೆಪ್ಪುಣಿಗುತ್ತು ಚಂದ್ರಹಾಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್. ಕೋಟ್ಯಾನ್, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ ಎಂ. ಶೆಟ್ಟಿ, ಕೋಶಾಧಿಕಾರಿ ಧರ್ಮೇಂದ್ರ ಡಿ. ನಾಯಕ್, ಜತೆ ಕೋಶಾಧಿಕಾರಿ ಸತೀಶ್ ಎಸ್. ಪೂಜಾರಿ, ಸಮಿತಿಯ ಸದಸ್ಯರುಗಳಾದ ಕೆ. ಎಂ. ಶೆಟ್ಟಿ, ಹರೀಶ್ ಶೆಟ್ಟಿ ಕುರ್ಕಾಲ್, ಶ್ರೀನಿವಾಸ ಜಿ. ಪೂಜಾರಿ, ಶೇಖರ ವಿ. ದೇವಾಡಿಗ, ಕುಟ್ಟಿ ಎ. ಕುಂದರ್, ಹರೀಶ್ ಶೆಟ್ಟಿ ನಲ್ಲೂರು, ಬಾಲಕೃಷ್ಣ ಶೆಟ್ಟಿ, ಗಣೇಶ್ ದೇವಾಡಿಗ, ನಾಗೇಶ್ ರೈ, ದಿನೇಶ್ ಪೂಜಾರಿ, ಲಕ್ಷ್ಮೀ ಎಸ್. ಪೂಜಾರಿ, ಶಿಬಿರದ ಮಾಲಾಧಾರಿ ಸ್ವಾಮಿಗಳು, ಶ್ರೀ ಸಂತೋಷಿ ಮಾತಾ ದೇವಾಲಯ ಟ್ರಸ್ಟ್, ಶ್ರೀ ಮೂಕಾಂಬಿಕಾ ಚಾರಿಟೆಬಲ್ ಮಂಡಳ, ಉಪಸಮಿತಿ ಹಾಗೂ ಮಹಿಳಾ ಮಂಡಳಿಯ ಸದಸ್ಯೆಯರು ಸಹಕರಿಸಿದರು. ಮುಂಬಯಿ, ನವಿಮುಂಬಯಿಯ ಸಹಸ್ರಾರು ಭಕ್ತಾದಿಗಳು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ : ಸುಭಾಷ್ ಶಿರಿಯಾ