ನವಿಮುಂಬಯಿ: ಶ್ರೀಕ್ಷೇತ್ರ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ 14ನೇ ವಾರ್ಷಿಕ ಮಹೋತ್ಸವವು ಫೆ. 17ರಂದು ಪ್ರಾರಂಭಗೊಂಡಿದ್ದು, ಫೆ. 21ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಲಿದೆ.
ಫೆ. 20ರಂದು ಸೂರ್ಯೋದಯಕ್ಕೆ ಕವಾಟ ಉದ್ಘಾಟನೆ, ಪಂಚಾಮೃತ ಅಭಿಷೇಕ, ದೇವಿಗೆ 49 ಕಲಶಾಭಿಷೇಕ, ಸಹಸ್ರ ನಾಮಾರ್ಚನೆ ಪೂರ್ವಕ ಮಹಾಪೂಜೆ, ಉತ್ಸವ ಬಲಿ, ಪಲ್ಲ ಪೂಜೆ, ಮಧ್ಯಾಹ್ನ 1 ರಿಂದ ಮಹಾ ಅನ್ನ ಸಂತರ್ಪಣೆ ನಡೆಯಿತು. ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಸಂಜೆ 5ರಿಂದ ಸಂಕೀರ್ತನೆ, ಮಹಾಪೂಜೆ, ಮಹಾರಂಗಪೂಜೆ, ಉತ್ಸವ ಬಲಿ, ಕಟ್ಟೆ ಪೂಜೆ, ಅವಭೃತ ಸ್ನಾನ, ಜಳಕದ ಬಲಿ ಹಾಗೂ ಅನ್ನಪ್ರಸಾದ ವಿತರಣೆ ನಡೆಯಿತು.
ಫೆ. 18ರಂದು ಬೆಳಗ್ಗೆ 7 ರಿಂದ ಸಾಮೂಹಿಕ ಶ್ರೀ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ತೋರಣ ಮುಹೂರ್ಹ, ಶ್ರೀ ದೇವಿಗೆ ನವಕ ಪ್ರಧಾನ ಕಲಶಾಭಿಷೇಕ, ನವಗ್ರಹ ಯಾಗ, ದ್ವಾದಶ ನಾಳಿಕೇರ ಅಷ್ಟದ್ರವ್ಯ ಮಹಾಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನದಾನ ಮತ್ತು ಸಂಜೆ 5ರಿಂದ ದುರ್ಗಾ ನಮಸ್ಕಾರ ಪೂಜೆ, ಮಹಾಪೂಜೆ, ಉತ್ಸವ ಬಲಿ, ಅನ್ನ ಪ್ರಸಾದ ವಿತರಣೆ ಜರಗಿತು. ಫೆ. 19ರಂದು ಬೆಳಗ್ಗೆ 7ರಿಂದ ಶ್ರೀ ದೇವಿಗೆ ನವಕ ಪ್ರಧಾನ ಕಲಶಾಭಿಷೇಕ,ಗಣಪತಿ ದೇವರಿಗೆ ನವಕ ಪ್ರಧಾನ, ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ಮಹಾಪೂಜೆ, ಅನ್ನದಾನ ಮತ್ತು ಸಂಜೆ 5ರಿಂದ ಗಣಪತಿ ದೇವರಿಗೆ ರಂಗಪೂಜೆ, ಮಹಾಪೂಜೆ, ಉತ್ಸವ ಬಲಿ, ಅನ್ನ ಪ್ರಸಾದ ವಿತರಣೆ, ಮಹಾಭೂತ ಬಲಿ, ಕವಾಟ ಬಂಧನ ನಡೆಯಿತು.
ವಾರ್ಷಿಕ ಮಹೋತ್ಸವದ ದೇವತಾ ವೈದಿಕ ಕಾರ್ಯಕ್ರಮಗಳು ಶ್ರೀ ಕ್ಷೇತ್ರದ ತಂತ್ರಿವರ್ಯರಾದ ವಿದ್ವಾನ್ ರಾಮಚಂದ್ರ ಬಾಯರಿ ಕಾರ್ಕಳ ಇವರ ನೇತೃತ್ವದಲ್ಲಿ ದೇವಾಲಯದ ಪ್ರಧಾನ ಅರ್ಚಕರಾದ ಗುರುಪ್ರಸಾದ್ ವಿ. ಭಟ್ ಅವರ ಸಹಕಾರದೊಂದಿಗೆ ನಡೆಯಿತು. ಗುರುರಾಜ ಭಟ್, ನಾಗರಾಜ್ ಭಟ್, ಮಂಜು ಭಟ್, ಅಶೋಕ್ ಭಟ್ ಮೊದಲಾದವರು ಸಹಕರಿಸಿದರು. ದೇವರ ಬಲಿ ಉತ್ಸವದಲ್ಲಿ ಕುಂಟಾಡಿ ಸುರೇಶ್ ಭಟ್, ಪದಾತಿಗಳಾಗಿ ವಿಟuಲ ದೇವಾಡಿಗ, ರತ್ನಾಕರ ಪೂಜಾರಿ, ಗಣೇಶ್ ಶೆಟ್ಟಿ, ವಾದ್ಯದಲ್ಲಿ ದಿನೇಶ್ ಕೋಟ್ಯಾನ್ ಮತ್ತು ಬಳಗದವರು ಸಹಕರಿಸಿದರು.
ದೇವಾಲಯದ ಅಧ್ಯಕ್ಷರಾದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ಮುಂದಾಳತ್ವದಲ್ಲಿ ಜರಗಿದ ಉತ್ಸವದಲ್ಲಿ ಉಪಾಧ್ಯಕ್ಷ ನಂದಿಕೂರು ಜಗದೀಶ್ ಶೆಟ್ಟಿ, ಕೆ. ಎಂ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್. ಕೋಟ್ಯಾನ್, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ ಎಂ. ಶೆಟ್ಟಿ, ಕೋಶಾಧಿಕಾರಿ ಶೇಖರ್ ವಿ. ದೇವಾಡಿಗ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ ಪಿ. ಶೆಟ್ಟಿ, ಸದಸ್ಯರಾದ ರಾಘು ಆರ್. ಕೋಟ್ಯಾನ್, ಕುಟ್ಟಿ ಎ. ಕುಂದರ್, ಶಂಕರ್ ಮೊಲಿ, ಸುಧಾಕರ ಸಿ. ಪೂಜಾರಿ, ವಿಶ್ವನಾಥ ಎಸ್. ಶೆಟ್ಟಿ, ಅಣ್ಣು ಎಂ. ಶೆಟ್ಟಿ, ಶ್ರೀಧರ ಬಿ. ಪೂಜಾರಿ, ಮಹಾಬಲ ಟಿ. ಶೆಟ್ಟಿ, ಹರೀಶ್ ಕುರ್ಕಾಲ್, ಹರೀಶ್ ಪಡುಬಿದ್ರೆ, ಹರೀಶ್ ನಲ್ಲೂರು, ಶಕುಂತಳಾ ಎಸ್. ಶೆಟ್ಟಿ ಮತ್ತು ಶ್ರೀ ಮೂಕಾಂಬಿಕ ಧರ್ಮಶಾಸ್ತ ಸೇವಾ ಸಂಸ್ಥೆ, ಉಪಸಮಿತಿಯ ಸದಸ್ಯರು ಹಾಗೂ ಮಹಿಳಾ ಮಂಡಳಿಯ ಸದಸ್ಯೆಯರು ಸಹಕರಿಸಿದರು.
ಫೆ. 21ರಂದು ಬೆಳಗ್ಗೆ 6ರಿಂದ ಮಹಾ ಸಂಪ್ರೋಕ್ಷಣೆ, ಚಂಡಿಕಾ ಯಾಗ, ಮಧ್ಯಾಹ್ನ ಮಹಾಪೂಜೆ, ಮಹಾಮಂತ್ರಾಕ್ಷತೆ, ಅನ್ನ ಪ್ರಸಾದ ವಿತರಣೆ ಜರಗಲಿದೆ. ಸಂಜೆ 5ರಿಂದ ನೃತ್ಯ ವೈಭವ, ರಾತ್ರಿ 8.30ಕ್ಕೆ ಅನ್ನ ಪ್ರಸಾದ ವಿತರಣೆ, ರಾತ್ರಿ 9ರಿಂದ ಧಾರ್ಮಿಕ ಸಭೆ, ರಾತ್ರಿ 10ರಿಂದ ಶ್ರೀಧರ ಬಿ. ಪೂಜಾರಿ ಮತ್ತು ಕುಟುಂಬಸ್ಥರ ಸೇವೆಯ ರೂಪದಲ್ಲಿ ಶ್ರೀ ಸದ್ಗುರು ನಿತ್ಯಾನಂದ ಕೃಪಾ ಪೋಷಿತ ಯಕ್ಷಗಾನ ಮಂಡಳಿ ದಹಿಸರ್ ಮುಂಬಯಿ ಇವರಿಂದ ಶ್ರೀ ದೇವಿ ಮಹಾತೆ¾ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಚಿತ್ರ-ವರದಿ: ಸುಭಾಷ್ ಶಿರಿಯಾ