Advertisement

ಬಸ್‌ ಮೆಟ್ಟಿಲೇರುವುದೇ ಪ್ರಯಾಸ!

10:50 PM Dec 14, 2019 | mahesh |

ಸಿಟಿ, ಸರ್ವಿಸ್‌ ಸೇರಿದಂತೆ ಖಾಸಗಿ ಬಸ್‌ಗಳ ಮೆಟ್ಟಿಲುಗಳು ಎತ್ತರದಲ್ಲಿರುವುದರಿಂದ ಅದನ್ನು ಹತ್ತುವುದೇ ಒಂದು ಸವಾಲು. ಪ್ರಯಾಣಿಕರು ಪ್ರಯಾಸಪಟ್ಟು ಬಸ್‌ ಹತ್ತಬೇಕಾದ ಸ್ಥಿತಿ ಇದೆ. ಹಲವು ವರ್ಷಗಳಿಂದ ಹಿರಿಯ ನಾಗರಿಕರು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಅನೇಕ ಬಾರಿ ಈ ಸಮಸ್ಯೆ ಬಗೆಹರಿಸಲು ಒತ್ತಾಯಿಸುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ.

Advertisement

ಬಸ್‌ಗಳು ಸದಾ ಸಮಯದ ಹಿಂದೆ ಓಡುತ್ತಿರುತ್ತವೆ. ಆ ಬಸ್‌ಗಳನ್ನು ಹತ್ತುವಾಗ ಅನೇಕ ರೀತಿಯ ಅಪಾಯ ಎದುರಾಗುತ್ತದೆ. ಎತ್ತರದ ಮೆಟ್ಟಿಲುಗಳನ್ನು ಏರಲಾಗದೆ ಆಯತಪ್ಪಿ ಕೆಳಕ್ಕೆ ಬಿದ್ದ ಘಟನೆಗಳು ಹಲವೆಡೆ ನಡೆದಿವೆ. ಇತ್ತೀಚಿಗಿನ ವರ್ಷಗಳಲ್ಲಿ ಮಂಗಳೂರು ನಗರದಲ್ಲಿ ಓಡಾಡುತ್ತಿರುವ ಕೆಲವು ವೋಲ್ವೋ ಬಸ್‌ಗಳು, ಕೆಎಸ್‌ಆರ್‌ಟಿಸಿ ನರ್ಮ್ ಬಸ್‌ಗಳು ಹಾಗೂ ಕೆಲವೇ ಸಿಟಿ ಬಸ್‌ಗಳು ಮಾತ್ರ ತಗ್ಗು ಮೆಟ್ಟಿಲನ್ನು(ಲೋ ಫ್ಲೋರ್‌) ಹೊಂದಿವೆ. ಹಿರಿಯ ನಾಗಕರಿಕರು, ಮಕ್ಕಳು, ಮಹಿಳೆಯರ ಹಿತದೃಷ್ಟಿಯಿಂದ ಲೋ ಫ್ಲೋರ್‌ ಬಸ್‌ಗಳಿಗೆ ಮಾತ್ರ ಅವಕಾಶ ನೀಡಬೇಕು. ಆರ್‌ಟಿಒ ಲೋ ಫ್ಲೋರ್‌ ಕಡ್ಡಾಯ ಎಂದು ಹೇಳಿದರೂ ಹಲವಾರು ಕಾರಣಗಳನ್ನು ನೀಡಿ ಕೆಲವು ಬಸ್‌ನವರು ಎತ್ತರದ ಮೆಟ್ಟಿಲುಗಳ ಬಸ್‌ಗಳನ್ನೇ ಓಡಿಸುತ್ತಿದ್ದಾರೆ. ಮೆಟ್ಟಿಲು ಹತ್ತಲು ಸಾಧ್ಯವಾಗದವರು ಲೋ ಫ್ಲೋರ್‌ ಬಸ್‌ಗಳು ಬರುವವರೆಗೇ ಕಾದು ಅನಂತರ ಅದರಲ್ಲಿಯೇ ಪ್ರಯಾಣಿಸುವ ಅನಿವಾರ್ಯತೆ ಹಲವು ಸಂದರ್ಭಗಳಲ್ಲಿ ಉಂಟಾಗುತ್ತದೆ. ಇನ್ನು ಮಹಿಳೆಯರು ಎದುರಿನ ಬಾಗಿಲಿನಲ್ಲಿ ಮತ್ತು ಪುರುಷರು ಹಿಂದಿನ ಬಾಗಿಲಿನಲ್ಲಿಯೇ ಬಸ್‌ ಹತ್ತಿ ಇಳಿಯಬೇಕು ಎಂಬ ನಿಯಮವೂ ಸರಿಯಾಗಿ ಪಾಲನೆಯಾಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next