ಮುಂಬೈ: ಸ್ಥಳೀಯ ಆಡಳಿತಗಳು ಜನರಲ್ಲಿ ಲಸಿಕೆ ಬಗ್ಗೆ ಆಸಕ್ತಿ ಮೂಡಲು ಮತ್ತು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಉತ್ತೇಜನ ನೀಡಲು ವಿವಿಧ ಅಭಿಯಾನಗಳನ್ನು ಮಾಡುತ್ತಿವೆ. ಇದಕ್ಕೆ ಸಾಕ್ಷಿಯಾಗಿದೆ ಮಹಾರಾಷ್ಟ್ರದ ಚಂದ್ರಾಪುರ ನಗರಸಭೆ.
ಭಾರತದ ಕೆಲವು ಹಳ್ಳಿ ಗಳಲ್ಲಿ ಕೋವಿಡ್ ಲಸಿಕೆ ಕಂಡರೆ ಓಡಿ ಹೋಗುವ ಮಂದಿ ಇದ್ದಾರೆ. ಈ ರೀತಿಯ ಜನರಲ್ಲಿ ಕೋವಿಡ್ ಲಸಿಕೆ ಬಗ್ಗೆ ಆಸಕ್ತಿ ಮೂಡಿ ಲಸಿಕೆಯನ್ನು ಪಡೆಯಲು ಚಂದ್ರಾಪುರ ನಗರಸಭೆ ಲಕ್ಕಿಡ್ರಾ ಬಹುಮಾನವನ್ನು ಘೋಷಿಸಿದೆ.
ಹೌದು ನೀವು ಲಸಿಕೆ ಪಡೆದರೆ ಎಲ್‍ಇಡಿ ಟಿವಿ, ರೆಫ್ರಿಜರೇಟರ್, ವಾಷಿಂಗ್ ಮಶೀನ್ ಉಡುಗೊರೆಯಾಗಿ ನೀಡಲಾಗುವುದು ಎಂದು ಘೋಷಿಸಿದೆ. ನವೆಂಬರ್ 12 ರಿಂದ 24ರವರೆಗೆ ಲಸಿಕಾ ಕೇಂದ್ರಗಳಿಗೆ ಬಂದು ಲಸಿಕೆ ಪಡೆಯುವವರು ಈ ಉಡುಗೊರೆ ಪಡೆಯಬಹುದಾದಿದೆ.
ಈ ಅವಧಿಯಲ್ಲಿ ಲಸಿಕೆ ಪಡೆಯುವವರು ಲಕ್ಕಿ ಡ್ರಾನಲ್ಲಿ ಭಾಗವಹಿಸಬಹುದು. ಮೊದಲ ಬಹುಮಾನವಾಗಿ ರೆಫ್ರಿಜರೇಟರ್, 2ನೇ ಬಹುಮಾನವಾಗಿ ವಾಷಿಂಗ್ ಮಶೀನ್ ಮತ್ತು ಮೂರನೇ ಬಹುಮಾನವಾಗಿ ಎಲ್‍ಇಡಿ ಟಿವಿಗಳನ್ನು ಗೆಲ್ಲಬಹುದು ಎಂದು ಘೋಷಣೆ ಮಾಡಿದೆ.
ಮತ್ತೊಂದು ವಿಶೇಷ ಅಂದ್ರೆ ಸಮಾಧಾನಕರ ಬಹುಮಾನವಾಗಿ 10 ಜನರಿಗೆ ಮಿಕ್ಸರ್-ಗ್ರೈಂಡರ್ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ..