ಕಲಬುರಗಿ: ಜಿಲ್ಲಾ ಆಸ್ಪತ್ರೆಯಲ್ಲಿ ಮನೊರೋಗಿಗಳಿಗೆ ಪ್ರತಿ ಮಂಗಳವಾರ ಉಚಿತ ಚಿಕಿತ್ಸೆ ಮತ್ತು ಸಲಹೆ ನೀಡಲು ಮನೋಚೈತನ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮನೋರೋಗಿಗಳು ಯೋಜನೆ ಪ್ರಯೋಜನ ಪಡೆಯಬೇಕೆಂದು ಜಿ.ಪಂ. ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಹೇಳಿದರು.
ಶುಕ್ರವಾರ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಿೆ ಮತ್ತು ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರದ ಆಶ್ರಯದಲ್ಲಿ ಹೈಕೋರ್ಟ್ ಎದುರುಗಡೆಯ ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅರಿವಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿಗೆ ಶೇ.05 ರಷ್ಟು ಜನ ಖಿನ್ನತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಅಂಥವರು ಎಲ್ಲರೊಂದಿಗೆ ಬೆರೆತು ಖಿನ್ನತೆ ಬಗ್ಗೆ ಮಾತನಾಡುವುದು ಒಳ್ಳೆಯದು. ನಿಶ್ಯಕ್ತಿ, ಹಸಿವಿನಲ್ಲಿ ಬದಲಾವಣೆ, ಅತಿ ಹೆಚ್ಚು ಅಥವಾ ಅತಿ ಕಡಿಮೆ ನಿದ್ರೆ ಮಾಡುವುದು, ಆತಂಕ, ಏಕಾಗ್ರತೆ ಕೊರತೆ, ಚಡಪಡಿಕೆ ಹಾಗೂ ಆತ್ಮಹತ್ಯೆಗೆ ಪ್ರಯತ್ನಿಸುವಂಥಹ ಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಪಡೆದು ಆರೋಗ್ಯವಂತ ಜೀವನ ನಡೆಸಿ ಎಂದು ಹೇಳಿದರು.
ಜಿ.ಪಂ.ಮುಖಿಯ ಕಾರ್ಯನಿರ್ವಾಹಕ ಅಧಿಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ಖಿನ್ನತೆಗೆ ಯಾವುದೇ ವಯಸ್ಸು ಅಥವಾ ಕಾಲದ ಪರಿಮಿತಿ ಇಲ್ಲ. ನಿರಾಶ್ರಿತರಿಗೆ ಈ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದನ್ನು ಎದುರಿಸಿ ನಿವಾರಿಸುವುದು ಮುಖಿಯವಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಶಿವರಾಜ ಸಜ್ಜನಶೆಟ್ಟಿ ಮಾತನಾಡಿ, ಖಿನ್ನತೆ ಗುರುತಿಸಿದರೂ ಇದೊಂದು ಸಾಮಾನ್ಯ ರೋಗ ಎಂದು ನಿರ್ಲಕ್ಷಿಸುತ್ತಿದ್ದಾರೆ. ಇದಕ್ಕೆ ಸೂಕ್ತ ಸಮಯದಲ್ಲಿ ಇದಕ್ಕೆ ಸೂಕ್ತ ಚಿಕಿತ್ಸೆ ಮತ್ತು ಸಲಹೆ ಪಡೆಯುವುದು ಬಹು ಮುಖಿ್ಯ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಧಿಕಾರಿ ಡಾ| ಶರಣಬಸಪ್ಪ ಕ್ಯಾತ್ನಾಳ, ಸಮಾಜ ಕಲ್ಯಾಣ ಇಲಾಖಿ ಜಂಟಿ ನಿರ್ದೇಶಕ ಎನ್. ರಾಜಪ್ಪ, ಜಿಲ್ಲಾ ಆಸ್ಪತ್ರೆ ಮನೋವೈದ್ಯ ಡಾ| ವಿಜಯೇಂದ್ರ, ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರದ ಮೀನಾ ಪವಾರ, ವಿಶ್ವ ಸೇವಾ ಮಿಷನ್ ಅಧ್ಯಕ್ಷ ವಿಶ್ವನಾಥ ಸ್ವಾಮೀಜಿ ಪಾಲ್ಗೊಂಡಿದ್ದರು.