ಗದಗ: ಜಿಲ್ಲೆಯಲ್ಲಿ ತಮ್ಮ ಅನುಕೂಲತೆಗೆ ತಕ್ಕಂತೆ ರಾಜಕಾರಣ ಮಾಡುತ್ತಿರುವವರನ್ನು ಸೋಲಿಸಬೇಕು. ಸುಭದ್ರ ಹಾಗೂ ಸದೃಢ ದೇಶಕ್ಕಾಗಿ ಮತ್ತೂಮ್ಮೆ ಬಿಜೆಪಿಯನ್ನು ಗೆಲ್ಲಿಸಬೇಕು. ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರ ಹ್ಯಾಟ್ರಿಕ್ ಗೆಲುವಿಗೆ ಕಾರಣರಾಗಬೇಕು ಎಂದು ಬೀಳಗಿ ಶಾಸಕ ಹಾಗೂ ಪಂಚಮಸಾಲಿ ಸಮಾಜದ ಮುಖಂಡ ಮುರುಗೇಶ ನಿರಾಣಿ ಕರೆ ನೀಡಿದರು.
ಬಹುತೇಕ ಪಂಚಮಸಾಲಿ ಜನರಿಗೆ ಕೃಷಿಯೇ ಪ್ರಧಾನ. ನಾನು ಕೈಗಾರಿಕಾ ಸಚಿವನಿದ್ದಾಗ ಜಿಲ್ಲೆಯಲ್ಲಿ ಪೋಸ್ಕೊ ಕಂಪನಿ ಕೈಗಾರಿಕೆ ಸ್ಥಾಪನೆಗೆ ಮುಂದಾಗಿತ್ತು. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆ ಉದ್ಯೋಗ ಅವಕಾಶಗಳು ದೊರೆಯುತ್ತಿದ್ದವು. ಈ ಕಂಪನಿಗೆ ಪಂಚಮಸಾಲಿಗಳ ಜಮೀನೇ ಹೆಚ್ಚಿನ ಪ್ರಮಾಣದಲ್ಲಿ ಹೋಗುತ್ತಿತ್ತು. ಅದನ್ನು ತಪ್ಪಿಸುವ ಉದ್ದೇಶದಿಂದ ವಿರೋಧ ಮಾಡಿದರು ಎಂದರು.
ಸ್ವಾತಂತ್ರ್ಯ ಸಿಕ್ಕ 70 ವರ್ಷಗಳಲ್ಲಿ 60 ವರ್ಷಗಳ ಕಾಲ ಗದಗ ಒಂದೇ ಕುಟುಂಬದ ಅಧಿಕಾರದಲ್ಲಿದೆ. ಅದನ್ನು ತಪ್ಪಿಸಲು ಈ ಬಾರಿ ಶಿವಕುಮಾರ ಉದಾಸಿ ಅವರನ್ನು ಮತ್ತೆ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಹಾವೇರಿ ಕ್ಷೇತ್ರದ ಮಾಜಿ ಸಂಸದ ಮಂಜುನಾಥ ಕುನ್ನೂರ ಅವರು ಮಾತನಾಡಿ, ಈ ದೇಶದ ಸಂಪತ್ತು ರಕ್ಷಿಸುವ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸಲು ಶಿವಕುಮಾರ ಉದಾಸಿ ಅವರನ್ನು ಗೆಲ್ಲಿಸಬೇಕು. ಇದೀಗ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಿ.ಆರ್. ಪಾಟೀಲ ಅವರನ್ನು ಸೋಲಿಸಲು ಪಂಚಮಸಾಲಿ ಜನರು ಒಟ್ಟಾಗಿ ಶಕ್ತಿ ಪ್ರದರ್ಶನ ಮಾಡಿ, ಮತ ಚಲಾಯಿಸಬೇಕು ಎಂದ ಅವರು, ಲಿಂಗಾಯತ ಒಡೆಯುವ ಎಂ.ಬಿ. ಪಾಟೀಲರ ಪತ್ರದ ಬಗ್ಗೆ ತನಿಖೆಗೆ ಸಮಾಜ ಹೋರಾಟ ಮಾಡಬೇಕು ಎಂದು ಮನವಿ ಮಾಡಿದರು.
Advertisement
ನಗರದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಹಾವೇರಿ, ಕೊಪ್ಪಳ, ಧಾರವಾಡ ಹಾಗೂ ಬಾಗಲಕೋಟ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳಾದ ಶಿವಕುಮಾರ ಉದಾಸಿ, ಸಂಗಣ್ಣ ಕರಡಿ, ಪ್ರಹ್ಲಾದ ಜೋಶಿ ಮತ್ತು ಪಿ.ಸಿ. ಗದ್ದಿಗೌಡ್ರ ಅವರ ಬೆಂಬಲಾರ್ಥವಾಗಿ ನಡೆದ ಪಂಚಮಸಾಲಿ ಸಮಾಜದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
Related Articles
Advertisement
ಮುಖಂಡ ವಿಜಯಕುಮಾರ ಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜ ಕೊರ್ಲಹಳ್ಳಿ, ಮೋಹನ ಮಾಳಶೆಟ್ಟಿ, ಬಸವಣ್ಣೆಪ್ಪ ಚಿಂಚಲಿ, ಅನಿಲ ಮೆಣಸಿನಕಾಯಿ, ಸಿದ್ದು ಪಲ್ಲೇದ, ಎಂ.ಎಸ್. ಕರಿಗೌಡ್ರ, ಅಶೋಕ ಸಂಕಣ್ಣವರ, ಎಸ್.ವಿ. ಪಾಟೀಲ, ಚಂಬಣ್ಣ ಬಾಳಿಕಾಯಿ, ಎಫ್.ಬಿ. ಮರಿಗೌಡ್ರ, ಸಿದ್ದು ಜೀವನಗೌಡ್ರ, ರಾಜು ಗುಡಿಮನಿ, ಮಹಾಂತೇಶ ನಲವಡಿ, ಈರಣ್ಣ ಕರಿಬಿಷ್ಠಿ, ಶಿವರಾಜಗೌಡ ಹಿರೇಮನಿ ಪಾಟೀಲ, ಭದ್ರೇಶ ಕುಸ್ಲಾಪುರ, ಅಮರೇಶ ಬೆಟಗೇರಿ, ವಿಜಯಲಕ್ಷಿ ್ಮೕ ಅಂಗಡಿ, ಜಯಶ್ರೀ ಉಗಲಾಟ, ಸಾವಿತ್ರಿ ಸುಂಕದ, ಪಾರ್ವತೆಮ್ಮ ಮರಿಗೌಡ್ರ ಸೇರಿ ಅನೇಕರು ವೇದಿಕೆಯಲ್ಲಿದ್ದರು.