Advertisement
ಸರಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಎಐಡಿಎಸ್‌ಒ ಸಂಘಟನೆಯ 65ನೇ ಸಂಸ್ಥಾಪನಾ ದಿನದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತಮಾಡಿದರು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಧರ್ಮಾತೀತ ಪ್ರಜಾಸತ್ತಾತ್ಮಕ ವೈಜ್ಞಾನಿಕ ಶಿಕ್ಷಣ ಬೋಧನೆ ಇಂದಿನ ಅಗತ್ಯವಾಗಿದೆ. ಶಿಕ್ಷಣ ವ್ಯಾಪಾರದ ಸರಕಾಗಿದೆ. ಉಳ್ಳವರಿಗೆ ಮಾತ್ರ ಉನ್ನತ ಶಿಕ್ಷಣ ಲಭ್ಯವಾಗುತ್ತಿದೆ. ಬಡ ಮಕ್ಕಳು ಅಕ್ಷರ ಜ್ಞಾನದಿಂದ ವಂಚಿತರಾಗುತ್ತಿದ್ದಾರೆ ಎಂದು ವಿಷಾಧಿಸಿದರು. 1954ರ ಡಿಸೆಂಬರ್ ತಿಂಗಳಲ್ಲಿ ಮಹಾನ್ ಮಾರ್ಕ್ಸ್ವಾದಿ ಚಿಂತಕ ಕಾಮ್ರೇಡ್ ಶಿವದಾಸ ಘೋಷ್ ಅವರಿಂದ ಎಐಡಿಎಸ್‌ಒ ಸ್ಥಾಪನೆಗೊಂಡಿದೆ. ದೇಶಾದ್ಯಂತ ಶಿಕ್ಷಣ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿಗಳನ್ನು ಸಂಘಟಿಸುವ ಜತೆಗೆ ನೈತಿಕ ಮೌಲ್ಯಗಳನ್ನು ಬಿತ್ತಲಾಗುತ್ತಿದೆ.
ಕೃಷ್ಣಾ ಸೈದಾಪುರ, ವಿದ್ಯಾಲತಾ ದೇವಾಪುರ, ಗಾಯತ್ರಿದೇವಿ ಜಿ.ಸಿಂಗ್, ಪ್ರತಾಪಸಿಂಗ್ ಠಾಕೂರ, ಸಂಗೀತಾ ಡಿ. ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.