Advertisement
ಈ ಮಹೂರ್ತದಿಂದಲೇ ಯಡಿಯೂರಪ್ಪ ನವರು ಮತ್ತೂಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಅಶಯದಂತೆ ಕಾಂಗ್ರೆಸ್ ಮುಕ್ತ ಕರ್ನಾಟಕದ ದಿನ ದೂರವಿಲ್ಲ ಎಂದರು.
Related Articles
Advertisement
ಬಿಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಸಾಮಾನ್ಯ ರೈತನ ಮಗನಾದ ನನ್ನನ್ನು ಹಂತಹಂತವಾಗಿ ಮುಖ್ಯಮಂತ್ರಿ ಮಾಡಿದ ಋಣ ನನ್ನ ತಲೆಯ ಮೇಲಿದೆ. ಅದನ್ನು ತೀರಿಸುವ ಪರ್ವ ಕಾಲ ಈಗ ಬಂದಿದೆ. ಪ್ರತಿ ಬೂತ್ ನಲ್ಲಿ ಶೇಕಡ 77 ಮತಗಳನ್ನು ಬಿಜೆಪಿಗೆ ಹಾಕಿಸುವ ಮೂಲಕ ವಿರೊಧಿಗಳಿಗೆ ಠೇವಣಿ ಸಿಗದಂತೆ ಮಾಡಿ ಹೊಸ ದಾಖಲೆ ನಿರ್ಮಿಸಬೇಕು ಎಂದರು.
ನಾನು ಮುಖ್ಯ ಮಂತ್ರಿಯಾದ 24 ಗಂಟೆಯೊಳಗೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ, ಮೂಲ ಸೌಕರ್ಯಗಳಿಗೆ, ಶಾಶ್ವತ ನೀರಾವರಿ ಯೋಜನೆ ಗಳಿಗೆ ಪೂರಕವಾದ ಯೋಜನೆ ರೂಪಿಸುತ್ತೇನೆ. ನೀರಾವರಿ ಯೋಜನೆಗಳಿಗೆ 1 ಲಕ್ಷ ಕೋಟಿ ರೂ ಗಳನ್ನು ಮೀಸಲಿಡುತ್ತೇನೆ ಎಂದು ನನ್ನ ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ಭಾವುಕರಾಗಿ ನುಡಿದರು. ಐದಾರು ತಿಂಗಳಲ್ಲಿ ಶಿವಮೊಗ್ಗ ಶಿಕಾರಿಪುರ ಮಾರ್ಗವಾಗಿ ರಾಣೆಬೆನ್ನೂರಿಗೆ ತೆರಳುವ ರೈಲ್ವೆ ಯೋಜನೆ ಜಾರಿಗೆ ಬರಲಿದೆ ಎಂದರು ತಾಲೂಕಿನ ನಿರೂದ್ಯೋಗಿಗಳಿಗೆ ಮತ್ತುಹೆಣ್ಣುಮಕ್ಕಳಿಗಾಗಿ ಕೈಗಾರಿಕೆಗಳನ್ನು ಹಾಗೂ ಗಾರ್ಮೆಂಟ್ಸ್‌ಗಳನ್ನು ತಾಲೂಕಿಗೆ ತಂದು ಹತ್ತಾರು ಸಾವಿರ ಉದ್ಯೋಗ ಸೃಷ್ಟಿ ಮಾಡಲಾಗುವುದು. ರೈತರಿಗೆ ಪೂರಕವಾಗಿ ನಿರಂತರ ವಿದ್ಯುತ್ ನೀಡುವುದಲ್ಲದೆ ಮೆಕ್ಕೆ ಜೋಳಕ್ಕೆ ಕ್ವಿಂಟಾಲ್‌ಗೆ 1500 ರೂ. ಬೆಲೆ ನೀಡುತ್ತೇನೆ ಹಾಗೂ ವೃದ್ಧಾಪ್ಯ ವೇತನ ಮತ್ತು ವಿಧವಾ ವೇತನವನ್ನು 1000 ರೂ ಗಳಿಗೆ ಏರಿಸುವುದಲ್ಲದೆ ರೈತರ ವಿಚಾರ ಬಂದಾಗ ಯಾವುದೆ ಧರ್ಮ, ಜಾತಿ,ಸಮುದಾಯದ ಭೇದವಿಲ್ಲದೆ ನ್ಯಾಯ ಒದಗಿಸುತ್ತೇನೆ ಎಂದರು. ಕೇಂದ್ರದ ಮೋದಿ ನೇತೃತ್ವದ ಸರ್ಕಾರದ ಜನಪರ ಯೋಜನೆಗಳು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಯೋಜನೆಗಳು ನಮಗೆ ಶ್ರೀರಕ್ಷೆಯಾಗಲಿವೆ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ತಾಲೂಕಿನ ಮತದಾರರಿಗೆ ಋಣಿಯಾಗಿದ್ದೇನೆ ಎಂದರು. ಸಂಸದ, ಮಾಜಿ ಕೇಂದ್ರ ಸಚಿವ ಸಿದ್ದೇಶ್ವರ್, ಶಾಸಕರಾದ ಬಿ.ವೈ. ರಾಘವೇಂದ್ರ, ಚನ್ನಪಟ್ಟಣದ, ಶಾಸಕ ಸಿ.ಪಿ. ಯೋಗೀಶ್ವರ್, ಕುಡಚಿ ಶಾಸಕ ರಾಜೀವ್, ಮುಖಂಡರಾದ ಆಯನೂರು ಮಂಜುನಾಥ , ಕುಮಾರ ಬಂಗಾರಪ್ಪ , ಕೆ.ಪಿ. ನಂಜುಂಡಿ, ಡಿ.ಎಸ್. ವೀರಯ್ಯ, ಅಲ್ಪಾಸಂಖ್ಯಾತರ ಘಟಕದ ಅಬ್ದುಲ್ ಅಜೀಮ್, ಪದ್ಮನಾಭ ಭಟ್, ರಾಮಾನಾಯ್ಕ, ತಾಲೂಕು ಬಿಜೆಪಿ ಅಧ್ಯಕ್ಷ ರೇವಣಪ್ಪ ಕೊಳಗಿ ಮತ್ತಿತರರು ಇದ್ದರು.