Advertisement

ಪ್ಲಾಸ್ಟಿಕ್‌ ಮುಕ್ತ ಭಾರತಕ್ಕೆ ಮುಂದಾಗಿ

11:19 AM Nov 08, 2019 | Suhan S |

ಹುಬ್ಬಳ್ಳಿ: ಭಾರತೀಯ ಕಿಸಾನ್‌ ಸಂಘದ ಕಟ್ಟಡ ನಿರ್ಮಾಣದ ಭೂಮಿಪೂಜೆ ಇಲ್ಲಿನ ಕುಮಾರವ್ಯಾಸ ನಗರದಲ್ಲಿ ನಡೆಯಿತು.

Advertisement

ಶಂಕುಸ್ಥಾಪನೆ ನೆರವೇರಿಸಿದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ಲಾಸ್ಟಿಕ್‌ ಬಳಕೆ ದೇಶಕ್ಕೆ ಮಾರಿಯಾಗಿದೆ. ಇದರಿಂದ ಪರಿಸರ ಮಾಲಿನ್ಯವಾಗುತ್ತಿದ್ದು, ಜೀವ ಸಂಕುಲದ ಮೇಲೆ ಪರಿಣಾಮ ಬೀರುತ್ತಿದೆ. ಇಂದಿನಿಂದಲೇ ಪ್ರತಿಯೊಬ್ಬರು ಪ್ಲಾಸ್ಟಿಕ್‌ ಬಳಕೆ ವಿರುದ್ಧ ಪಣ ತೊಡಬೇಕು ಎಂದರು. ನರಗುಂದ ಸಿದ್ಧೇಶ್ವರ ಪಂಚಗೃಹ ಗುಡ್ಡದ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರೈತರು ಆರ್ಥಿಕ ನಷ್ಟದಿಂದ ಹೊರಬರಲು ಹೊಸ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಶೇ.33 ತೋಟಗಾರಿಕೆ, ಶೇ. 33 ಅರಣ್ಯ, ಶೇ.33 ಧವಸ-ಧಾನ್ಯಗಳನ್ನು ಬೆಳೆಯಬೇಕು. ಉಳಿದ ಶೇ.1ರಲ್ಲಿ ದೇಶಿ ಗೋವುಗಳನ್ನು ಸಾಕಬೇಕು ಎಂದು ಹೇಳಿದರು. ಕಿಸಾನ್‌ ಸಂಘದ ವಿಜಯಪುರ ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಬಿ.ಎಂ. ಕೋಕರೆ ಅಧ್ಯಕ್ಷತೆ ವಹಿಸಿದ್ದರು.

ಸಂಘದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿಗೌಡ, ಗುರುನಾಥ ಎಸ್‌. ಬಗಲಿ, ಐ.ಎನ್‌. ಬಸವೇಗೌಡರು, ದಿನೇಶ ಕುಲಕರ್ಣಿ, ಅರವಿಂದರಾವ್‌ ದೇಶಪಾಂಡೆ, ಯಳಂದೂರ ರಂಗನಾಥ, ಡಾ| ವಿ.ಎಸ್‌.ವಿ. ಪ್ರಸಾದ, ವೆಂಕಟರಮಣ ಚಿಟ್ಟಾ, ರಮೇಶ ಕೊರವಿ, ಡಿ.ಸಿ. ರಂಗರಡ್ಡಿ, ವಿವೇಕ ಮೋರೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next