Advertisement

ಚಂದಿರನಿಗಿಂದು ತೋಳ ಗ್ರಹಣ

10:19 AM Jan 11, 2020 | mahesh |

2019ರ ವರ್ಷಾಂತ್ಯದಲ್ಲಷ್ಟೇ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿದ್ದ ಭಾರತ, ಈಗ ಚಂದ್ರಗ್ರಹಣದ ಕೌತುಕಕ್ಕೂ ಸಿದ್ಧವಾಗಿದೆ. ಶುಕ್ರವಾರ ಮಧ್ಯರಾತ್ರಿ ಚಂದಿರನಿಗೆ ಅಡ್ಡವಾಗಿ ನಿಲ್ಲಲಿರುವ ಭೂಮಿ, ಚಂದ್ರನ ಮೇಲೆ ಬೀಳುವ ತನ್ನ ನೆರಳನ್ನೇ ವೀಕ್ಷಿಸಲಿದೆ. ಇಂದಿನ ಕೌತುಕಕ್ಕೆ ತೋಳಗ್ರಹಣ ಎಂದು ಕರೆಯಲಾಗುತ್ತಿದೆ.

Advertisement

ತೋಳನ ಹೆಸರೇಕೆ?
ಜನವರಿ ತಿಂಗಳು ತೋಳಗಳ ಸಂತಾನಾಭಿವೃದ್ಧಿಯ ಸಮಯ. ಆ ಸಂದರ್ಭದಲ್ಲಿ ಅವು ಬಲು ಜೋರಾಗಿ ಊಳಿಡುತ್ತವೆ. ಹಾಗಾಗಿ ಪಾಶ್ಚಾತ್ಯ ಸಂಸ್ಕೃತಿಗಳಲ್ಲಿ ಜನವರಿ ತಿಂಗಳನ್ನು ತೋಳ ಗಳ ತಿಂಗಳು ಎಂದೇ ಕರೆಯುತ್ತಾರೆ. ಆದ್ದರಿಂದ ಜನವರಿ ತಿಂಗಳಿನಲ್ಲಿ ಘಟಿಸುವ ಚಂದ್ರಗ್ರಹಣವನ್ನು ತೋಳಗಳಿಗೆ ಸಮರ್ಪಿಸಿ, ಅದನ್ನು “ತೋಳಗ್ರಹಣ’ ಎಂದು ಕರೆಯುವ ವಾಡಿಕೆಯಿದೆ.

ಎಲ್ಲೆಲ್ಲಿ ಗೋಚರ?
ಕರ್ನಾಟಕವೂ ಸೇರಿದಂತೆ ಭಾರತದ ಎಲ್ಲ ಭಾಗಗಳಲ್ಲೂ ಈ ತೋಳಗ್ರಹಣ ಗೋಚರವಾಗಲಿದೆ. ಜತೆಗೆ ಏಷ್ಯಾದ ಇತರ ಭಾಗಗಳು, ಆಫ್ರಿಕಾ, ಆಸ್ಟ್ರೇಲಿಯ, ಯೂರೋಪ್‌ಗ್ಳಲ್ಲಿ ಈ ಚಂದ್ರಗ್ರಹಣವನ್ನು ವೀಕ್ಷಿಸಬಹುದು.

ಈ ವರ್ಷ 6 ಗ್ರಹಣ!
ಇದೂ ಸೇರಿದಂತೆ ಈ ವರ್ಷ ಆರು ಗ್ರಹಣಗಳು ಸಂಭವಿಸಲಿವೆ. ಇವುಗಳಲ್ಲಿ ನಾಲ್ಕು ಚಂದ್ರಗ್ರಹಣ ಗಳಾಗಿದ್ದರೆ, ಉಳಿದ ಎರಡು ಸೂರ್ಯಗ್ರಹಣ. ಚಂದ್ರಗ್ರಹಣಗಳು ಜ. 10, ಜೂ. 5, ಜು. 5 ಹಾಗೂ ನ. 30ರಂದು ಸಂಭವಿಸಲಿದ್ದರೆ, ಸೂರ್ಯ ಗ್ರಹಣಗಳು ಜೂ. 21, ಡಿ. 14ರಂದು ಘಟಿಸಲಿವೆ.

ಗ್ರಹಣದ ಸಮಯ
ಶುರು : 10.37 ಪಿಎಂ
ಪೂರ್ಣ : 12.40ಎಎಂ
ಮೋಕ್ಷ : 2.42
ಅವಧಿ : 4 ಗಂಟೆ 5 ನಿಮಿಷ

Advertisement
Advertisement

Udayavani is now on Telegram. Click here to join our channel and stay updated with the latest news.

Next