ದೊಡ್ಡಬಳ್ಳಾಪುರ : ತಾಲೂಕಿನ ಘಾಟಿ ಸುಬ್ರಮಣ್ಯ ಕ್ಷೇತ್ರ ದಲ್ಲಿ ನಡೆಯಲರುವ ಪ್ರಸಿದ್ದ ದನ ಗಳ ಜಾತ್ರೆಗೆ ದಿನ ಣನೆ ಆ ರಂಭವಾಗಿದ್ದು, ರಾ ಸು ಗಳ ಪ್ರ ದರ್ಶನಕ್ಕಾಗಿರ್ಷಕ ಪೆಂಡಾ ಲ್ ಗಳ ನಿ ರ್ಮಾಣ ಕಾರ್ಯ ನಡೆಯುತ್ತಿವೆ.
ಸೋಮವಾರದಿಂದ ರಾಸುಗಳ ಆಗಮನವಾಗಲಿದ್ದು ಬುಧವಾರದ ನಂತರ ತುಂಬು ಜಾತ್ರೆ ಸೇರಬಹುದು ಎಂದು ನಿರೀಕ್ಷಿಸಲಾಗಿದೆ.
ಸಿದ್ಧತೆಗಳ ಆರಂಭ: ಜಾತ್ರೆಗೆ ಬರುತ್ತಿರುವ ಎತ್ತುಗಳಿಗೆ ಹಾಗೂ ರೈತರಿಗೆ ಕುಡಿಯುವ ನೀರುಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಆಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ವಿದ್ಯುತ್ ದೀಪ, ನೀರಿನ ಸೌಲಭ್ಯವನ್ನು ಕಲ್ಪಿಸುವ ಕೆಲಸ ಭರದಿಂದ ನಡೆದಿದೆ. ಘಾಟಿ ಜಾತ್ರೆಗೆ ಬಳ್ಳಾರಿ,ದಾವಣಗೆರೆ, ಧಾರವಾಡ,ಗುಲ್ಬರ್ಗ ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲಾ ಗಳಿಂದ ಬೇಸಾಯಕ್ಕಾಗಿ ಎತ್ತುಗಳನ್ನು ಖರೀದಿಸಲು ನೂರಾರು ಸಂಖ್ಯೆಯಲ್ಲಿ ರೈತರು ಬರುತ್ತಾರೆ. ಕಳೆದ ವರ್ಷದ ಜಾತ್ರೆಯಲ್ಲಿ ಒಂದು ಜೊತೆ ಎತ್ತುಗಳು 5ಲಕ್ಷದವರೆಗೂ ಮಾರಾಟವಾಗಿದ್ದವು.
ಕಟ್ಟು ನಿಟ್ಟಿನ ಸೂಚನೆ: ಘಾಟಿ ಜಾತ್ರೆ ನಡೆಯುವ ಸಂದರ್ಭದಲ್ಲಿ ರಾಸುಗಳ ಆರೋಗ್ಯ ತಪಾಸಣೆ, ಸ್ವತ್ಛತೆ, ಮೂಲಭೂತ ಸೌಲಭ್ಯಗಳು ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಕೈಗೊಳ್ಳಲು ಬೆಂಗಳೂರು ಗ್ರಾಮಾಂತರ ಜಿಲ್ಲಾಕಾರಿ ಪಿ.ಎನ….ರವೀಂದ್ರ ಈಗಾಗಲೇ ಸೂಚನೆ ನೀಡಿರೆ.
ಜಾತ್ರೆಯಲ್ಲಿ ಕೈಗೊಳ್ಳಬೇಕಿರುವ ಅಗತ್ಯ
ಕ್ರಮಗಳ ಕುರಿತಂತೆ ಜಿಲ್ಲಾ —ಕಾರಿಗಳು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ನಡೆಸಿ, ಜಾತ್ರೆಯಲ್ಲಿ ಪ್ಲಾಸ್ಟಿಕ್ ಬಳಕೆ, ಬ್ಯಾರ್ನ, ಫ್ಲೆಕ್ಸ್ ಹಾಕುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ನಿಗಾವಹಿಸುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಸೂಚಿಸಿ ದ್ದಾರೆ. ಜನವರಿ 1 ರಂದು ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ ನಡೆಯಲಿದೆ.