Advertisement

ಚೀನದಲ್ಲಿ ಅತಿ ವೇಗದ ಬುಲೆಟ್‌ ರೈಲು

08:55 AM Aug 22, 2017 | Team Udayavani |

ಬೀಜಿಂಗ್‌: ರೈಲ್ವೇ ಇಂಜಿನಿಯರಿಂಗ್‌ನಲ್ಲಿ ಒಂದಾದ ಮೇಲೊಂದರಂತೆ ದಾಖಲೆ ಮಾಡುತ್ತಲೇ ಇರುವ ಚೀನ ಇದೀಗ ಜಗತ್ತಿನಲ್ಲೇ ಅತಿ ವೇಗದ, ಗಂಟೆಗೆ 350 ಕಿ.ಮೀ. ವೇಗದ ವಾಣಿಜ್ಯಿಕ ಬಳಕೆಯ ಬುಲೆಟ್‌ ರೈಲನ್ನು ಪರಿಚಯಿಸಲು ಸಿದ್ಧವಾಗಿದೆ. ಈ ರೈಲು ಹೇಗಿದೆ? ಅದರ ಸ್ಪೆಷಾಲಿಟಿ ಏನು? ವಿವರ ಇಲ್ಲಿದೆ.

Advertisement

ಎಲ್ಲಿಂದ ಎಲ್ಲಿಗೆ..?
ಚೀನದ ರಾಜಧಾನಿ ಬೀಜಿಂಗ್‌ನಿಂದ, ಹಣಕಾಸು ರಾಜಧಾನಿ ಶಾಂಘೈಗೆ ಈ ರೈಲು ಸಂಪರ್ಕ ಕಲ್ಪಿಸಲಿದೆ. ಈ ನಗರಗಳ ಮಧ್ಯೆ 1250 ಕಿ.ಮೀ. ಅರ್ಥಾತ್‌ ನಮ್ಮ ಭೋಪಾಲ್‌ನಿಂದ ಜಮ್ಮುಗೆ ಹೋದಷ್ಟು ದೂರವಿದೆ. 

2008ರಲ್ಲೇ ಹೈಸ್ಪೀಡ್‌ ರೈಲು
ಅಂದೇ ಚೀನ ಬೀಜಿಂಗ್‌ – ಟಿಯಾಂಜಿನ್‌ ಮಧ್ಯೆ ಹೈಸ್ಪೀಡ್‌ ರೈಲನ್ನು ಪರಿಚಯಿಸಿತ್ತು. ಇದೂ ಗಂಟೆಗೆ 350 ಕಿ.ಮೀ.ವೇಗದಲ್ಲಿ ಕ್ರಮಿಸುತ್ತಿತ್ತು. 2011ರಲ್ಲಿ ಅಪಘಾತವಾಗಿದ್ದು, ಬಳಿಕ ವೇಗವನ್ನು ಗರಿಷ್ಠ 250ರಿಂದ 300ಕಿ.ಮೀ.ಗೆ ಇಳಿಸಲಾಗಿತ್ತು.

4.5 ಗಂಟೆ ಪ್ರಯಾಣ
1,250 ಕಿ.ಮೀ.ದೂರವನ್ನು ಕ್ರಮಿಸಲು ಚೀನ ರೈಲ್ವೇ ಕಾರ್ಪೋರೇಷನ್‌ ನೂತನ ಫ‌ುಕ್ಸಿಂಗ್‌ ಮಾದರಿಯ ರೈಲು ಪರಿಚಯಿಸಲಿದೆ. ಇದು ಕೇವಲ 4.5 ಗಂಟೆಗಳಲ್ಲಿ ಪ್ರಯಾಣಿಸಲಿದೆ. 

400 ಕಿ.ಮೀ. ವೇಗ!
ಫ‌ುಕ್ಸಿಂಗ್‌ ಮಾದರಿ ರೈಲು ಗಂಟೆಗೆ 400 ಕಿ.ಮೀ. ವೇಗದಲ್ಲಿ ತಲುಪಬಲ್ಲದು. ಆದರೆ ಇದರ ವೇಗವನ್ನು ಸುರಕ್ಷತೆ ದೃಷ್ಟಿಯಿಂದ 350 ಕಿ.ಮೀ. ಎಂದು ನಿಗದಿಪಡಿಸಲಾಗಿದೆ. ಈ ರೈಲು ದಿನಕ್ಕೆ 7 ಟ್ರಿಪ್‌ ಮಾಡಲಿದೆ.

Advertisement

22 ಸಾವಿರ ಹೈಸ್ಪೀಡ್‌ ರೈಲು ಮಾರ್ಗ
ಚೀನ ಜಗತ್ತಿನ ಶೇ.60ರಷ್ಟು ಅಂದರೆ 22 ಸಾವಿರ ಕಿ.ಮೀ. ಹೈ ಸ್ಪೀಡ್‌ ರೈಲು ಮಾರ್ಗವನ್ನು ತನ್ನಲ್ಲಿ ಹೊಂದಿದೆ. ಇವುಗಳಲ್ಲಿ ಮೂರನೇ ಒಂದರಷ್ಟು ಮಾರ್ಗಗಳು ಗಂಟೆಗೆ 350 ಕಿ.ಮೀ. ಓಡುವ ರೈಲುಗಳನ್ನು ಹೊಂದುವ ಸಾಮರ್ಥ್ಯದ್ದಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next