ಬೋಸ್ಟನ್: ಕೊರೊನಾ ಸೋಂಕು ಜಗತ್ತಿಗೆ ಬಾಧಿತವಾಗಿದ್ದ ಅವಧಿಯಲ್ಲಿ ಜನಪ್ರಿಯಗೊಂಡದ್ದು ಆನ್‌ಲೈನ್ ವ್ಯವಸ್ಥೆ, ಝೂಮ್. ಆರಂಭದಲ್ಲಿ ಕಷ್ಟ ಎನಿಸಿದರೂ ನಂತರದಲ್ಲಿ ಎಲ್ಲರೂ ಅದಕ್ಕೆ ಒಗ್ಗಿಕೊಂಡರು. ಈಗ ಹೊಸ ವಿಚಾರ ಏನೆಂದರೆ, ಮಾನವರು ಮಾತ್ರವಲ್ಲ ಪಕ್ಷಿಗಳು ಕೂಡ ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್‌ಗಳಲ್ಲಿ ಝೂಮ್ ಕಾಲ್ ಮಾಡಲು ಸಾಧ್ಯವಿದೆ!
ನಾರ್ತ್ ಈಸ್ಟರ್ನ್ ವಿವಿಯ ಸಂಶೋಧಕರು ಗ್ಲಾಸೊYà ವಿವಿ ಮತ್ತು ಮೆಸಾಚ್ಯುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರ ಜತೆಗೂಡಿ ಕೆಲವೊಂದು ಪಾರಿವಾಳಗಳನ್ನು ಸಾಕಿ, ಅವುಗಳಿಗೆ ಝೂಮ್ ಮೂಲಕ ವಿಡಿಯೋ ಕಾಲ್ ಮಾಡುವುದು ಹೇಗೆ ಎಂಬ ಬಗ್ಗೆ ತರಬೇತಿ ನೀಡಿದ್ದಾರೆ.
ಇಂಥ ತಂತ್ರಜ್ಞಾನಗಳನ್ನು ಬಳಕೆ ಮಾಡುವಂಥ ತರಬೇತಿ ನೀಡಿ, ಅವುಗಳನ್ನು ಪಳಗಿಸಲು ಸಾಧ್ಯವೇ ಎಂಬ ಬಗ್ಗೆ ಪ್ರಯೋಗ ಮಾಡಿದ್ದರು. ಕುತೂಹಲಕಾರಿ ಸಂಗತಿ ಎಂದರೆ ಸಂಶೋಧಕರ ತಂಡ ಅದರಲ್ಲಿ ಯಶಸ್ವಿಯಾಗಿದೆ.
ಈ ಅಧ್ಯಯನದ ಅಂಶಗಳನ್ನು ನಿಯತಕಾಲಿಕವೊಂದರಲ್ಲಿ ಪ್ರಕಟಿಸಲಾಗಿದೆ. 18 ಪಾರಿವಾಳಗಳಿಗೆ 3 ತಿಂಗಳ ಕಾಲ ತರಬೇತಿ ನೀಡಿದ ಬಳಿಕ, ಅವುಗಳು ಮನುಷ್ಯರಂತೆಯೇ ಕರೆ ಮಾಡಲು ಯಶಸ್ವಿಯಾಗಿವೆ ಎಂದು ನಾರ್ತ್ ಈಸ್ಟರ್ನ್ ವಿವಿಯ ಹೇಳಿದೆ.