Advertisement

ಹೊಸಪೇಟೆಯಲ್ಲಿ 2 ರೂ.ಗೆ ಸಿಗುತ್ತೆ ಊಟ!

08:05 PM Sep 14, 2021 | Team Udayavani |

ಹೊಸಪೇಟೆ: 2 ರೂಪಾಯಿಗೆ ಟಿ-ಕಾಫಿ ಸಿಗದ ಕಾಲದಲ್ಲಿ ಇಲ್ಲಿನ ಜೈನ ‌ ಸಂಘ ‌ಪದಾಧಿಕಾರಿಗಳು ಬಡವರು ಹಾಗೂ ನಿರ್ಗತಿಕರಿಗೆ ಕೇವಲ ಎರಡು ರೂ.ಗೆ ಮಧ್ಯಾಹ್ನದ ಊಟ ನೀಡುವ ಮೂಲಕ ಹಸಿವು ನೀಗಿಸುವ ಕಾಯಕ ತೊಡಗಿದ್ದಾರೆ.

Advertisement

ಜೈನ ‌ ಸಂಘದಿಂದ ಶ್ರೀ ಮಹಾವೀರ್‌ ಜೈನ ಆಹಾರ್‌ ಸೇವಾ ಹೆಸರಿನಲ್ಲಿ ಕೇವಲ ಎರಡು ರೂ. ಗೆ ಮಧ್ಯಾಹ್ನ ಊಟ ನೀಡುತ್ತಿದ್ದಾರೆ. ಊಟದಲ್ಲಿ
ರುಚಿ ಹಾಗೂ ಗುಣಮಟ್ಟದ ಆಹಾರ ವಿತರಿಸಲು ಮೂರು ದಿನ ಚಿತ್ರಾನ್ನ,ಪೊಳಿಯೋಗರೆ,ಪಲಾವ್‌,ಮಸಾಲರೈಸ್‌,ಇನ್ನುಳಿದ ದಿನ ಚಪಾತಿ ಪಲ್ಲೆ ಅಥವಾ ರೊಟ್ಟಿ-ಪಲ್ಲೆ ವಿತರಿಸಲು ಪಟ್ಟಿ ತಯಾರಿಸಿದ್ದಾರೆ.

ಪ್ರಸ್ತುತ ‌ 100 ಜನರಿಗೆ ಸಾಕಾಗುವಷ್ಟು ಆಹಾರವನ್ನು ವಿತರಿಸುತ್ತಿರುವ ಸಂಘ, ಮುಂದಿನ ದಿನಗಳಲ್ಲಿ ಬೇಡಿಕೆಯಷ್ಟು ಆಹಾರ ‌ ತಯಾರಿಸಿ
ವಿತರಣೆ ಮಾಡಲು ಚಿಂತನೆ ನಡೆಸಿದೆ. ಹೋಟೆಲ್‌ ಮಾದರಿಯಲ್ಲಿ ಊಟ ಸರಬರಾಜು ಮಾಡುವ ಯೋಚನೆ ಕೂಡ ಇದೆ ಎಂದು ಜೈನ ‌ ‌ಸಮುದಾಯದ ಮುಖಂಡರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಜೈಲಲ್ಲಿದ್ದಾರೆ ಮಾಫಿಯಾ, ಗ್ಯಾಂಗ್‌ಸ್ಟರ್‌ಗಳು : ಎಸ್‌ಪಿಗೆ ಪ್ರಧಾನಿ ಮೋದಿ ಲೇವಡಿ

ಪಾಳಿಯಲ್ಲಿ ಸೇವೆ: ಜೈನ ಸಮುದಾಯದಲ್ಲಿ ಬಹುತೇಕ ಉದ್ಯಮಿಗಳೇ ಇದ್ದಾರೆ.ಮಧ್ಯಾಹ್ನ ಒಂದು ಗಂಟೆ ಕಾಲ ಊಟ ವಿತರಣೆ ಸೇವೆ ಮಾಡಲು 30 ಜನರ ತಂಡವೊಂದನ್ನು ರಚನೆ ಮಾಡಿದ್ದಾರೆ.ಪ್ರತಿದಿನ ತಯಾರಿಸುವ ಆಹಾರಕ್ಕೆ 3500 ರೂ. ವೆಚ್ಚ ತಗಲುತ್ತದೆ.ಇದಕ್ಕೆ ಸದ್ಯ ಜೈನ ಸಮುದಾಯ 4-5 ಮುಖಂಡರು 6 ತಿಂಗಳವರೆಗೆ ಪೂರ್ಣ ಪ್ರಮಾಣದ ಖರ್ಚು ಭರಿಸಲು ಮುಂದೆ ಬಂದಿದ್ದಾರೆ. ನಂತರ ಇತರೆ
ಮುಖಂಡರು ನಿರ್ವಹಣೆ ವೆಚ್ಚ ಭರಿಸಲು ಸಿದ್ಧರಿದ್ದಾರೆ. ಜನ್ಮದಿನ ಹಾಗೂ ವಿಶೇಷ ದಿನಗಳಲ್ಲಿ ದಾನಿಗಳು ಊಟದ ಸೇವೆ ಮಾಡಲು ಅವಕಾಶವಿದೆ ಎಂದು ಸಂಘ ತಿಳಿಸಿದೆ.

Advertisement

ಜೈನ ಸಂಘದಹೆಸರಿನಲ್ಲಿಕೇವಲ 2 ರೂ.ಗೆ ಬಡ ಜನರಿಗೆಊಟ ನೀಡಲಾಗುತ್ತಿದೆ. ಈ ಸೇವೆಯಲ್ಲಿ ನಾವು ಯಾವುದೇ ಪ್ರಚಾರ ಪಡೆಯಲು ಇಚ್ಛಿಸುವುದಿಲ್ಲ. ಮುಂದಿನ ದಿನಗಳಲ್ಲಿ ಇನ್ನೂಹೆಚ್ಚಿನ ಮಟ್ಟದಲ್ಲಿ ಜನಸಾಮಾನ್ಯರಿಗೆ ಸೇವೆ ಮಾಡುವ ಗುರಿ ಹೊಂದಲಾಗಿದೆ.
-zಜೈನ ಸಂಘದಮುಖಂಡ, ಹೊಸಪೇಟೆ

Advertisement

Udayavani is now on Telegram. Click here to join our channel and stay updated with the latest news.

Next