ಮಹಾನಗರ: ಸದ್ಗಮಯ- ನನ್ನ ಜೀವನ, ನನ್ನ ವೃತ್ತಿ ಜೀವನ ಎಂಬ ವಿಷಯದ ಕುರಿತು 2 ದಿನಗಳ ಕಾರ್ಯಾಗಾರವನ್ನು ಬೋಳೂರಿನಲ್ಲಿರುವ ಅಮೃತ ವಿದ್ಯಾಲಯಂನಲ್ಲಿ ಇತ್ತೀಚೆಗೆ ಆಯೋಜಿಸಲಾಯಿತು.
ಸಂಚಾಲಕಿ ಬ್ರಹ್ಮಚಾರಿಣಿ ಮಂಗಳಾ ಮೃತ ಚೈತನ್ಯಜಿ ಮಾತನಾಡಿ, ನಾವು ಪವಿತ್ರವಾದ ಭೂಮಿಯಲ್ಲಿ ಜನ್ಮ ಪಡೆದಿದ್ದೇವೆ, ನಾವೇ ಧನ್ಯರು. ಒಳ್ಳೆಯ ಸಂಸ್ಕಾರಗಳು ಮೂಡಬೇಕು. ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂದರು.
ಅಯುಧ್ ಮತ್ತು ಐ.ಎ.ಎಂ.ನ ರಾಷ್ಟ್ರೀಯ ಸಂಯೋಜಕ ವಿಭಾಗದ ಸದಸ್ಯ ವಿವೇಕ್ ವಿಜಯನ್, ಆಯುಧ್ ವಿಭಾಗದ ಯುವ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಅಮೃತೇಶ್ ಎ.ಆರ್., ಕೇರಳದ ಅಮೃತ ಪುರಿ ಯಲ್ಲಿರುವ ಯಾಂತ್ರಿಕ ಅಭಿಯಂತರ ವಿಭಾಗದ ಸಹ ಉಪನ್ಯಾಸಕ ರೂಪೇಶ್ ಕಲಿಸನ್, ವೈಮಾನಿಕ ಮತ್ತು ಅಭಿಯಂತರ ಕೈಗಾರಿಕಾ ಸಂಸ್ಥೆಗಳಾದ ಇಸ್ರೋ, ಗೋದ್ರೆಜ್ ವಿಭಾಗಗಳಲ್ಲಿ 15ಕ್ಕೂ ಹೆಚ್ಚು ವರ್ಷಗಳು ಪರಿಣತರಾದ ಸುರೇಶ್ ಕೆ.ಪಿ., ಶಾಲಾ ಪ್ರಾಂಶುಪಾಲ ರಾಮಚಂದ್ರ ಭಟ್ ಉಪಸ್ಥಿತರಿದ್ದರು.
ಮೌಲ್ಯಾಧಾರಿತ ಶಿಕ್ಷಣ ಮತ್ತು ಜೀವನದ ಕುರಿತು ವಿದ್ಯಾರ್ಥಿಗಳಿಗೆ ಹಲವು ಚಟುವಟಿಕೆಗಳೊಂದಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು.
ಶ್ರುತಿ ಸಂಯೋಜಿಸಿದರು. ಶಾಲಾ ಉಪಪ್ರಾಂಶುಪಾಲೆ ಅನುಪಮಾ ರಾವ್ ಸ್ವಾಗತಿಸಿ, ಶ್ವೇತಾ ವಂದಿಸಿದರು.