Advertisement

ಗ್ರಾಮೀಣ ಮಕ್ಕಳಿಗೆ ಒಳ್ಳೆ ಶಿಕ್ಷಣ ಸಿಗಲಿ

12:00 PM Sep 08, 2017 | Team Udayavani |

ಕಲಬುರಗಿ: ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕಾಗಿರುವುದು ಸರಕಾರ ಹಾಗೂ ಸಮಾಜದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳು ನಡೆಯಬೇಕು ಎಂದು ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ ಹೇಳಿದರು.

Advertisement

ಅಫಜಲಪುರ ತಾಲೂಕಿನ ಗೊಬ್ಬೂರ ಸಿದ್ಧಾರ್ಥ ಕಲಾ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರ ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ವಿದ್ಯಾ ಸಂಸ್ಥೆಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕು. ಅದನ್ನು ಬಿಟ್ಟು
ಸೌಕರ್ಯ ಹಾಗೂ ಅನುದಾನ ನೀಡುವಲ್ಲಿ ತಾರತಮ್ಯಗಳನ್ನು ಮಾಡುವುದರಿಂದ ಗ್ರಾಮೀಣ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ನೀಡಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಮನಗಾಣಬೇಕು ಎಂದರು.

ಅತಿಥಿಯಾಗಿದ್ದ ಗುವಿವಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜಕ ಡಾ| ರಮೇಶ ಲಂಡನಕರ್‌ ಮಾತನಾಡಿ, ಯುವಕರು ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಕೆ ಮಾಡುವಲ್ಲಿ ಎಡವುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಸಮುದಾಯದಿಂದ, ಶಿಕ್ಷಕರ ವರ್ಗದಿಂದ ಸರಿಯಾದ ಮಾರ್ಗದರ್ಶನ ನೀಡುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸಾಲಿಮನಿ, ಗುವಿವಿ ಸಿಂಡಿಕೇಟ್‌ ಸದಸ್ಯ ನಾಗೇಶ ಕೊಳ್ಳಿ ಮಾತನಾಡಿ, ಯುವಕರು ದೇಶದಲ್ಲಿ ಎದುರಾಗಿರುವ ಪರಿಸ್ಥಿತಿ ಅರ್ಥ ಮಾಡಿಕೊಂಡು ನಡೆಯುವುದನ್ನು ಹಾಗೂ ದೇಶಾಭಿಮಾನ ರೂಢಿಸಿಕೊಳ್ಳುವುದನ್ನು ಕಲಿಯಬೇಕಿದೆ. ಈ ನಿಟ್ಟಿನಲ್ಲಿ ಅವರಿಗೆ ಸರಿಯಾದ ಮಾರ್ಗದರ್ಶನವನ್ನು ನೀಡಬೇಕಾದ ಅಗತ್ಯವಿದೆ ಎಂದರು.

Advertisement

ಉಪನ್ಯಾಸಕರಾದ ಅಶೋಕ ಮಂಗಲಗಿ, ಸಾವಿತ್ರಿ ಬಿಲ್ವಾಡ್‌, ರಮಾ ಕಡಗಂಚಿ, ಯಂಕಪ್ಪ ಇಟಗಿ, ದಯಾನಂದ
ದೊಡ್ಡಮನಿ, ವಿಶ್ವನಾಥ ಕಾರ್ನಾಡ, ನಾಗರಾಜ ದೇವತ್ಕಲ್‌, ಶರಣಬಸವಪ್ಪ, ಬಾಬು ನವಲೇಕರ್‌, ಬಾಬು ಪೂಜಾರಿ
ಉಪಸ್ಥಿತರಿದ್ದರು. 

ಪ್ರಾಂಶುಪಾಲ ಉದಯಕುಮಾರ ವಾಡೇಕರ್‌ ಸ್ವಾಗತಿಸಿದರು. ಚಂದ್ರಕಾಂತ ಸಿಂಘೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next