ನಾರಾಯಣಪುರ: ಕೊರಮ ಕೊರಚಿ ಜನಾಂಗದವರು ಶಿಕ್ಷಣದಿಂದ ವಂಚಿತರಾಗಿದ್ದ ಕಾರಣ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿಯಲು ಕಾರಣವಾಗಿದೆ. ಆದ್ದರಿಂದ ಸಮುದಾಯದವರು ಶಿಕ್ಷಣ ಪಡೆಯುವುದು ಅತ್ಯಂತ ಅವಶ್ಯವಿದೆ ಎಂದು ಡಾ| ರಾದಮ್ಮ ಕಮಾಲಪುರ ಹೇಳಿದರು.
ಸಮೀಪದ ಜೋಗುಂಡಭಾವಿ ಗ್ರಾಮದಲ್ಲಿ ಅಖೀಲ ಕರ್ನಾಟಕ ಕೊರಮ ಕೊರಚಿ ರಕ್ಷಣ ಸೇನಾ ಜಿಲ್ಲಾ ಸಮಿತಿ ಆಶ್ರಯದಲ್ಲಿ ಚಿಂತನ ಮಂತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಸಮುದಾಯದವರು ಸರಿಯಾದ ಶಿಕ್ಷಣ ಸಿಗದೆ ಇರುವುದರಿಂದ ಅತಂತ್ರ ಸ್ಥಿತಿಯಲ್ಲಿ ಕಾಲ ಕಳಿಯುವಂತಾಗಿದೆ.
ರಾಜಕೀಯ ನಾಯಕರು ನಮ್ಮ ಮತವನ್ನು ಪಡೆಯುತ್ತಾರೆ. ಆದರೆ ಮೂಲ ಸೌಕರ್ಯ ಒದಗಿಸಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಸಮುದಾಯದ ಜನ ಇನ್ನೂ ಕೂಡ ಜೋಪಡಿಯಲ್ಲಿ ವಾಸಿಸುವಂತಾಗಿದೆ ಎಂದು ತಿಳಿಸಿದರು.
ಕೊರಮ ಕೊರಚಿ ರಕ್ಷಣ ಸೇನಾ ಜಿಲ್ಲಾಧ್ಯಕ್ಷ ಯಲ್ಲಪ್ಪ ಭಜಂತ್ರಿ ಮಾತನಾಡಿ, ಕೊರಮ ಕೊರಚಿ ಸಮುದಾಯದವರು ಕುಲ ಕಸುಬನ್ನೆ ನೆಚ್ಚಿಕೊಂಡಿದ್ದಾರೆ. ಶಿಕ್ಷಿತರಾಗುವ ಮೂಲಕ ರಾಜಕೀಯವಾಗಿ, ಆರ್ಥಿಕವಾಗಿ ಮುಂದೆ ಬರಬೇಕು
ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಚಿಂತನಾ ಮಂತನ ವಿಜೇತ ದೇವಣ್ಣ ಭಜಂತ್ರಿ ದಂಪತಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಭಾಗ್ಯವಂತಿ ಮಠದ ಸಂಗಯ್ಯ ಶರಣರು ವಹಿಸಿದ್ದರು. ಭೀಮರಾವ್ ಭಜಂತ್ರಿ, ಯಮನಪ್ಪ ಭಜಂತ್ರಿ, ಯಲ್ಲಪ್ಪ ಬಂಜಂತ್ರಿ, ಗ್ರಾಪಂ ಸದಸ್ಯ ಧರ್ಮಣ್ಣ ಭಜಂತ್ರಿ, ರಾಮಣ್ಣ ಭಜಂತ್ರಿ, ಆಶಪ್ಪ ಚಟ್ನಳ್ಳಿ, ಸಾಯಬಣ್ಣ, ನಗಾರೆಪ್ಪ, ಅಯ್ಯಪ್ಪ ಭಜಂತ್ರಿ, ಸಂತೋಷ, ಆಂಜನೇಯ ಭಜಂತ್ರಿ, ದ್ಯಾಮಣ್ಣ, ಚಂದಪ್ಪ, ಮಾನಪ್ಪ ಭಜಂತ್ರಿ ಸೇರಿದಂತೆ ಕೊರಮ ಕೊರಚಿ ಸಮುದಾಯದ ಪ್ರಮುಖರು ಇದ್ದರು