Advertisement

“ಕಲಿಕೆಯ ಸಮಯದಲ್ಲಿ ಹೆಚ್ಚು ಜಾಗೃತರಾಗಿ’

10:27 PM Apr 14, 2019 | sudhir |

ಕೋಟೇಶ್ವರ: ವಿದ್ಯಾರ್ಥಿಗಳು ತಮ್ಮ ಕಲಿಕೆಯ ಸಮಯದಲ್ಲಿ ಹೆಚ್ಚು ಜಾಗೃತರಾದಾಗ ಸಮಾಜದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಮಂಗಳೂರು ರಥಬೀದಿ ದಯಾನಂದ ಪೈ ಮತ್ತು ಸತೀಶ್‌ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಜಶೇಖರ್‌ ಹೆಬ್ಟಾರ್‌ ಹೇಳಿದರು.

Advertisement

ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕೋಟೇಶ್ವರ ಇಲ್ಲಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ವಿದ್ಯಾರ್ಥಿಗಳ ಜೀವನದಲ್ಲಿ ಅಭ್ಯಾಸದ ಜತೆಗೆ ಬದುಕುವ ಕಲೆಯನ್ನು ಕಲಿಸುವ ಶಕ್ತಿ ಇರುವುದು ಕೇವಲ ವಿದ್ಯೆಗೆ ಮಾತ್ರ. ಆದ್ದರಿಂದ ಪಠ್ಯೇತರ ಚಟುವಟಿಕೆಗಳಲ್ಲಿ ತನ್ನನ್ನು ತಾನು ಹೆಚ್ಚು ತೊಡಗಿಸಿಕೊಂಡು ಸಮಾಜದಲ್ಲಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಪ್ರಾಂಶುಪಾಲ ಡಾ| ರಾಜೇಂದ್ರ ಎಸ್‌. ನಾಯಕ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿ ಆನಂದ್‌ ಸಿ. ಕುಂದರ್‌, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮೋಹನ ಕಾರಂತ, ಉಪಾಧ್ಯಕ್ಷ ನಾಗರಾಜ, ಕಾರ್ಯಧರ್ಶಿ ಶಂಕರ ಮೇಸ್ತ, ಕಾಲೇಜಿನ ಸಾಂಸ್ಕೃತಿಕ ಸಂಘದ ಸಂಚಾಲಕಿ ಶ್ರೀಮತಿ ಅಡಿಗ, ಐಕ್ಯೂಎಸಿ ಸಂಚಾಲಕ ಗಣೇಶ್‌ ಪೈ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ| ಉಷಾದೇವಿ ಜೆ.ಎಸ್‌., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಿನಕರ ಕಾಂಚನ್‌, ವಿದ್ಯಾರ್ಥಿ ವೇದಿಕೆಯ ಪದಾಧಿಕಾರಿಗಳಾದ ಅರ್ಪಣಾ ಶೆಟ್ಟಿ, ರಾಘವೇಂದ್ರ, ಅಕ್ಷತಾ ಶೆಟ್ಟಿ, ವಿನಯಾ ಜಿ., ಲಿಖೀತಾ ಎಸ್‌. ಉಪಸ್ಥಿತರಿದರು.

ಡಾ| ಉಷಾದೇವಿ ಜೆ. ಎಸ್‌. ಸ್ವಾಗತಿಸಿ, ದೀಕ್ಷಿತ್‌ ನಿರೂಪಿಸಿದರು. ರಾಘವೇಂದ್ರ ವಂದಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next