Advertisement

ಜರ್ಮನಿಯ ಆಗಸದಲ್ಲಿ ಪೂರ್ಣಚಂದ್ರ ದರ್ಶನ

03:45 AM Apr 16, 2017 | Team Udayavani |

ಈ ಬಾರಿ ನಾನು ಜರ್ಮನಿಯ ವ್ಯೂತ್ಸ್ìಬುರ್ಗ್‌ ನಗರಕ್ಕೆ ಮಾರ್ಚ್‌ ಮೂರನೆಯ ವಾರದಲ್ಲಿ ಬಂದ ದಿನವೇ ಇಲ್ಲಿ ವಸಂತಕಾಲದ ಆಗಮನವಾಗಿತ್ತು. ಹಿಮದ ಮತ್ತು ಚಳಿಯ ಹೊಡೆತ ತಿಂದು ಮುದುರಿಕೊಂಡು ಮಲಗಿದ್ದ ಮರಗಿಡಗಳು ಚಿಗುರಲು ತೊಡಗಿದವು, ಮೊಗ್ಗುಗಳು ಅರಳಿ ಹೂಗಳು ಕಣ್ಣು ಬಿಡುವ ಸಂಭ್ರಮದಲ್ಲಿ ಇದ್ದುವು. “ಸ್ಪ್ರಿಂಗ್‌’ ಎಂದರೆ ಚಿಮ್ಮುವ, ಚಿಗುರುವ, ಅರಳುವ, ಕಿಲಕಿಲ ನಗುವ, ಉÇÉಾಸದ ಸಲ್ಲೀಲೆಯನ್ನು ಹರಡುವ ಕಾಲ. 

Advertisement

ಆಕಸ್ಮಿಕವಾಗಿ ಕರ್ನಾಟಕದ ವಸಂತಕಾಲದ ವರ್ಣನೆಯನ್ನು ವ್ಯೂತ್ಸ್ìಬುರ್ಗ್‌ನಲ್ಲಿ ವಿವರಿಸುವ ಸಂದರ್ಭ ಒದಗಿಬಂತು. ಈ ಬಾರಿಯ ಕನ್ನಡ ಬೇಸಗೆ ಶಿಬಿರದ ವಿಷಯ, “ಹಳಗನ್ನಡ ಸಾಹಿತ್ಯ’ ಇದರಲ್ಲಿ ಪಂಪಭಾರತ, ಗದಾಯುದ್ಧ, ಕರ್ನಾಟಕ ಕಾದಂಬರಿಗಳ ಜೊತೆಗೆ ಜನ್ನನ ಯಶೋಧರ ಚರಿತ ವನ್ನು ಪಾಠಕ್ಕೆ ಬಳಸಿಕೊಂಡೆ. ಅದರಲ್ಲಿ ನಾನು ಆಯ್ದುಕೊಂಡದ್ದು ವಸಂತಕಾಲದ ಆಗಮನದ ವರ್ಣನೆ ಮತ್ತು ಚಂಡಮಾರಿ ಗುಡಿಯ ಚಿತ್ರಣ. ಅಲ್ಲಿ ಸಿರದ ಗಾಳ, ಉರಿಯ ಉಯ್ನಾಲೆಗಳ ಬಗ್ಗೆ ಹೇಳಿ, ಸಿಸಿರಮನೆ ಪಿಡಿದು ಬಸಂತನ್‌ ಅಡಗಿನಂತೆ ಕುಸುರಿದರಿಯುವ ಚಿತ್ರಣ ಕೊಟ್ಟಾಗ ಯುರೋಪಿಯನ್‌ ಶಿಬಿರಾರ್ಥಿಗಳು ಬೆಕ್ಕಸಬೆರಗಾದರು. ಫ್ರಾನ್ಸ್‌ ನ ಲಿಯೋನ್‌ ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಪ್ರೊ. ಕ್ರಿಸ್ಟಿನ್‌ ಚೊಯ್‌ ನಕಿ ಅವರಂತೂ “ವಸಂತ ಇಷ್ಟೂ ಕ್ರೂರಿಯೆ?’ ಎಂದು ಉದ್ಗಾರ ತೆಗೆದರು. ನಾನು ಹೇಳಿದೆ, “ಜನ್ನ ಚಂಡಮಾರಿಯನ್ನೇ ಅಹಿಂಸಾ ದೇವತೆಯನ್ನಾಗಿ ಮಾಡುತ್ತಾನೆ; ಹಿಂಸೆಯ ಬರ್ಬರತೆಯ ದರ್ಶನಕ್ಕಾಗಿ ಮತ್ತು ಅದರಿಂದ ನಿರಶನಕ್ಕಾಗಿ ವಸಂತನನ್ನು ಹಾಗೆ ರೂಪಕವಾಗಿ ಬಳಸಿದ’ ವ್ಯೂತ್ಸ್ìಬುರ್ಗ್‌ನಲ್ಲಿ ಎಪ್ರಿಲ್‌ ಆರಂಭದಿಂದಲೇ ಮೋಡ ಕವಿದ ವಾತಾವರಣ. ಸೂರ್ಯನ ಸುಳಿವಿಲ್ಲ, ಚಂದ್ರನ ಪತ್ತೆ ಇಲ್ಲ. ಶಿಶಿರ ಬಿಟ್ಟುಹೋದ ಅವಶೇಷಗಳ ಹಂಗು ಮತ್ತು ಗುಂಗಿನಲ್ಲಿ ಸೂರ್ಯ-ಚಂದ್ರರಿಗೆ ಒಡ್ಡೋಲಗ ಇಲ್ಲ. ಹೀಗೆ ಹೊತ್ತು ಕಳೆಯುತ್ತ ಇರುವಾಗ ಎಪ್ರಿಲ್‌ 11ರಂದು ಬಂತು ವ್ಯೂತ್ಸ್ìಬುರ್ಗ್‌ನಲ್ಲಿ ಹುಣ್ಣಿಮೆಯ ದಿನ. ಅದೃಷ್ಟವೆಂದರೆ ಈ ದಿನ ಸೂರ್ಯ ರಂಗಸ್ಥಳಕ್ಕೆ ಬಂದಿ¨ªಾನೆ. ಜನರು ಮನೆಮಾರು ಸಹಿತ ತೇರಿಗೆ ನೆರೆವಂತೆ ಬೀದಿಗೆ ಬಂದಿ¨ªಾರೆ. ಇಲ್ಲಿನ ಮುಸ್ಸಂಜೆಯ ಹೊತ್ತು ಸೂರ್ಯ ತನ್ನ ಕೆಲಸ ಮುಗಿಸಿ, ಮನೆಗೆ ಹೋದೊಡನೆಯೇ ಆಶ್ಚರ್ಯವೆಂಬಂತೆ ಹುಣ್ಣಿಮೆಯ ಪೂರ್ಣಚಂದ್ರ ವಿರಾಜಮಾನವಾಗಿ ಮೆರವಣಿಗೆ ಹೊರಟಿ¨ªಾನೆ. ರಾತ್ರಿಯ ಹುಣ್ಣಿಮೆಯ ಪೂರ್ಣಚಂದ್ರನ ದರ್ಶನ ಭಾಗ್ಯ ದೊರೆತ ಸಂಭ್ರಮದಲ್ಲಿ ನಾನು ತೆಗೆದ ಚಿತ್ರಗಳು ಇಲ್ಲಿವೆ. ಇಲ್ಲಿನ ಹಳೆಯ ಸೇತುವೆ ಅಲೆ¤ ಮಾಯಿನ್‌ ಬ್ರೂಕ್‌ ನಿಂದ ತೆಗೆದವು ಕೆಲವು. ಚರ್ಚ್‌ನ ಎರಡು ಜೋಡು ಗೋಪುರಗಳ ನಡುವಿನ ನಂದಾದೀಪದಂತೆ ಕಾಣುವ ಚಂದ್ರನ ಸೊಗಸು ಚಿತ್ರದಲ್ಲಿದೆ. ಇಲ್ಲಿನ ಮಾಯಿನ್‌ ನದಿಯ ನೀರಿನಲ್ಲಿ ಚಂದ್ರನ ಮತ್ತು ದೀಪಗಳ ಬೆಳಕಿನ ಪ್ರತಿಫ‌ಲನ ಸುಂದರವಾಗಿದೆ. 

ಜರ್ಮನ್‌ ಕವಿ, ಕಾದಂಬರಿಕಾರ ಗಯತೆಯ ಒಂದು ಕವನವು ಹುಣ್ಣಿಮೆಯ ರಾತ್ರಿ ಯನ್ನು ಪ್ರೇಮವಾಗಿ ಪರಿಕಲ್ಪಿಸುವಂಥಾದ್ದು. ಅದರ ಕನ್ನಡ ರೂಪಾಂತರವನ್ನು ಮಾಡಿ ಇಲ್ಲಿ ಕೊಟ್ಟಿದ್ದೇನೆ.

– ಬಿ. ಎ. ವಿವೇಕ ರೈ

Advertisement

Udayavani is now on Telegram. Click here to join our channel and stay updated with the latest news.

Next