Advertisement

Germany: ಭಾರತದ ಸ್ವಾತಂತ್ರ್ಯ ಸಂಭ್ರಮ

06:39 PM Sep 09, 2023 | Team Udayavani |

ಜರ್ಮನಿಯ ಬರ್ಲಿನ್‌ ನಗರದಲ್ಲಿ ಭಾರತೀಯರು ಹಾಗೂ ಸ್ಥಳೀಯರ ಒಗ್ಗೂಡುವಿಕೆಯಲ್ಲಿ ಭಾರತದ 77ನೇ ಸ್ವಾತಂಂತ್ರ್ಯ ದಿನವನ್ನುಸಂಭ್ರಮದಿಂದ ಆಚರಿಸಲಾಯಿತು.

Advertisement

ಬರ್ಲಿನ್‌ನಲ್ಲಿರುವ ಮಸಾಲ ಕ್ರೌಟ್‌ ಹಾಗೂ ಭಾರತದವರಾದ ರಾಕೇಶ್‌ ಸ್ವಾಮಿಯವರ ಸ್ವದೇಶ್‌ ರೆಸ್ಟೋರೆಂಟ್‌ನಲ್ಲಿ ಭಾರತದ ಸಿರಿತನವನ್ನು ಬಿಂಬಿಸುವ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಈ ಉತ್ಸವದಲ್ಲಿ ಕನ್ನಡಿಗರು, ಭಾರತೀಯರು ಹಾಗೂ ಸ್ಥಳೀಯರನ್ನು ಒಳಗೊಂಡಂತೆ ಸುಮಾರು 5,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು. ಉತ್ಸವದಲ್ಲಿ ವಿವಿಧ ತಿಂಡಿ-ತಿನಿಸುಗಳ ಆಹಾರ ಮೇಳ, ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮೆಹಂದಿ ಮಳಿಗೆಗಳಿದ್ದವು. ಜತೆಗೆ ಸಂಗೀತ, ನೃತ್ಯ ಹಾಗೂ ಇತರ ಕಾರ್ಯಾಗಾರಗಳು ನಡೆಯಿತು.

ಇದರಲ್ಲಿ ವಿಶೇಷವಾಗಿ ಕರ್ನಾಟಕದ ಎರಡು ಮಳಿಗೆಗಳನ್ನು ಹಾಕಲಾಗಿತ್ತು. ಕರ್ನಾಟಕ ಎಕ್ಸ್‌ಪ್ರೆಸ್‌ ಮಳಿಗೆಯನ್ನು ಬೋಪಣ್ಣ ಮೊಣ್ಣಂಡ ಹಾಗೂ ಬೆಂಗಳೂರು ಮನೆ ಎಂಬ ಮಳಿಗೆಯನ್ನು ಸಿದ್ದು ಕಟ್ಟಿಮನಿ ಹಾಗೂ ಅವರ ತಂಡದವರು ವಿನ್ಯಾಸ ಗೊಳಿಸಿದ್ದರು. ಈ ಮಳಿಗೆಗಳು ಉತ್ತರ ಕರ್ನಾಟಕ ಹಾಗೂ ದಕ್ಷಿಣದ ಪಾಕ ಪದ್ಧತಿಗಳನ್ನು ಬಿಂಬಿಸಿದ್ದವು.

ಬರ್ಲಿನ್‌ನಲ್ಲಿ ನೆಲೆಸಿದ್ದವರೂ ಗಿರ್ಮಿಡ್‌, ನಿಪ್ಪಟ್ಟು ಸೇರಿದಂತೆ ಕರ್ನಾಟಕದ ಇತರ ತಿಂಡಿಗಳನ್ನು ಆನಂದದಿಂದ ಸವಿದರು. ಬರ್ಲಿನ್‌ ಕನ್ನಡಿಗರ ಬೆಳಕು ಚಿತ್ರ ನಾಟಕ ತಂಡದವರಿಂದ ಟಿ.ಪಿ. ಕೈಲಾಸಂ, ದ.ರಾ.ಬೇಂದ್ರೆ ಮತ್ತು ಬಿ.ವಿ.ಕಾರಂತರ ಅವರ ಪ್ರಖ್ಯಾತ ಭಾವಗೀತೆಗಳ ಪ್ರಸ್ತುತಿ ನಡೆಯಿತು. ಅನಂತರ ಕನ್ನಡದ ಪ್ರಸಿದ್ಧ ಗಾಯಕರಾದ ರಘು ದೀಕ್ಷಿತ್‌ ಹಾಗೂ ಅನನ್ಯ ಭಟ್‌ ಅವರು ಸಂಗೀತ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ವರದಿ: ಲಕ್ಷ್ಮೀ ಸುಂದರ್‌, ಬರ್ಲಿನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next