ಬರ್ಲಿನ್: ಕೋವಿಡ್ ತವರು ಚೀನಾದಲ್ಲಿ ಮತ್ತೆ ಸೋಂಕು ಹೆಚ್ಚಳವಾದ ಪರಿಣಾಮ ಮಾಲ್ ಗಳು, ನಿವಾಸಗಳ ಬಡಾವಣೆಗಳನ್ನು ಲಾಕ್ ಡೌನ್ ಮಾಡಿಸುತ್ತಿದೆ. ಏತನ್ಮಧ್ಯೆ ಜರ್ಮನಿಯಲ್ಲಿ 24ಗಂಟೆಯಲ್ಲಿ ಬರೋಬ್ಬರಿ 50,000 ದಾಖಲೆಯ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಸೋಂಕು ಆರಂಭವಾದ ನಂತರ ಇದೇ ಮೊದಲ ಬಾರಿಗೆ ಜರ್ಮನಿಯಲ್ಲಿ 50,000ಕ್ಕಿಂತ ಅಧಿಕ ಪ್ರಕರಣಗಳು ವರದಿಯಾಗಿದೆ. ಅಕ್ಟೋಬರ್ ಮಧ್ಯಂತರದಲ್ಲಿ ಸೋಂಕಿತರ ಮತ್ತು ಸಾವಿನ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ವರದಿ ಹೇಳಿದೆ.
ಕೋವಿಡ್ ಸೋಂಕು ದಿಢೀರ್ ಹೆಚ್ಚಳ ನಾಟಕೀಯ ಬೆಳವಣಿಗೆ ಎಂದು ನಿರ್ಗಮಿತ ಚಾನ್ಸೆಲರ್ ಏಂಜೆಲಾ ಮರ್ಕೆಲಾ ತಿಳಿಸಿದ್ದಾರೆ. ಸಾಂಕ್ರಾಮಿಕ ರೋಗವು ಹೊಸ ಅದ್ಭುತ ಶೈಲಿಯಲ್ಲಿ ಮರಳುತ್ತಿದೆ ಎಂದು ಏಂಜೆಲಾ ವಕ್ತಾರ ಟೀಕಿಸಿದ್ದಾರೆ.
ಕೋವಿಡ್ ಪ್ರಕರಣ ಹೆಚ್ಚಳವಾಗದಂತೆ ತಡೆಯಲು ಸ್ಥಳೀಯ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಏಂಜೆಲಾ ತಿಳಿಸಿದ್ದಾರೆ. ಜರ್ಮನಿಯಲ್ಲಿ ಲಸಿಕೆ ನೀಡಿದೆ ಪ್ರಮಾಣ ಕೇವಲ ಶೇ.67ರಷ್ಟಿದ್ದು, ಇದರಿಂದಾಗಿ ಆಸ್ಪತ್ರೆಗಳ ಮೇಲೆ ಹೆಚ್ಚಿನ ಒತ್ತಡ ಬೀಳತೊಡಗಿದೆ ಎಂದು ವರದಿ ತಿಳಿಸಿದೆ.
ಲಸಿಕೆ ತೆಗೆದುಕೊಳ್ಳದ ಜನರು ರೆಸ್ಟೋರೆಂಟ್ ಗಳಲ್ಲಿ, ಬಾರ್, ಕ್ರೀಡಾ ಹಾಲ್ ಹಾಗೂ ಹೇರ್ ಡ್ರೆಸ್ಸರ್ಸ್ಸ್ ಗಳಿಗೆ ಪ್ರವೇಶಿಸದಂತೆ ಜರ್ಮನಿ ನಿರ್ಬಂಧ ವಿಧಿಸಿದೆ. ಕೋವಿಡ್ 19 ಸೋಂಕು ಆರಂಭವಾದ ನಂತರ ಜರ್ಮನಿಯಲ್ಲಿ 4.9 ಲಕ್ಷ ಮಂದಿ ಕೋವಿಡ್ ಸೋಂಕಿಗೆ ಒಳಗಾಗಿರುವುದಾಗಿ ವರರಿ ವಿವರಿಸಿದೆ.