ಈ ಹಿನ್ನೆಲೆಯಲ್ಲಿ ಲಾಕ್‌ಡೌನ್ ಸಂಬಂಧಿಸಿದಂತೆ ಹಲವು ವಿನಾಯಿತಿ ನೀಡಿದರೂ ಸಾರ್ವಜನಿಕ ಸಾರಿಗೆ ವ್ಯಾಪಾರ ಸ್ಥಳ, ಅಂಗಡಿ ಮುಂಗಟ್ಟು ಸೇರಿದಂತೆ ಇತರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ನಿಯಮ ಜಾರಿಗೊಳಿಸಲಾಗಿದೆ.
Advertisement
ಪ್ರತಿ ರಾಜ್ಯದ ಸರಕಾರ ಜತೆ ಚರ್ಚೆಪಶ್ಚಿಮ ರಾಜ್ಯವಾದ ನಾರ್ತ್ ರೈನ್-ವೆಸ್‌ಟಾ#ಲಿಯಾದಲ್ಲಿ, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ಬ್ಯಾಂಕುಗಳು, ಅಂಚೆ ಕಚೇರಿಗಳು ಮತ್ತು ಪೆಟ್ರೋಲ್ ಬಂಕ್‌ಗಳಲ್ಲಿ ಮಾಸ್ಕ್ ಧರಿಸಿಯೇ ವ್ಯವಹಾರ. ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಬರಬೇಕು. ಆದರೆ ಅದೇ ಬರ್ಲಿನ್‌ನ ಅಂಗಡಿಗಳಲ್ಲಿ ಮಾಸ್ಕ್ ಧಾರಣೆ ನಿಯಮಕ್ಕೆ ವಿನಾಯಿತಿ ನೀಡಿದೆ.
ಕಳೆದ ವಾರ, ಚಾನ್ಸೆಲರ್‌ಏಂಜೆಲಾ ಮರ್ಕೆಲ್ ನಿಯಮಗಳನ್ನು ಸಡಿಲಗೊಳಿಸಿದ್ದರ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಈ ನಿರ್ಧಾರ ನಮ್ಮ “ಮೂರ್ಖತನ”ವನ್ನು ಸೂಚಿಸಬಹುದು ಎಂದು ಹೇಳುವ ಮೂಲಕ ಸಡಿಲಿಕೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.
Related Articles
ದೇಶದಲ್ಲಿ ನೀಡಲಾಗುತ್ತಿರುವ ನಿಯಮಗಳನ್ನು ಕುರಿತಾಗಿ ಮಾತನಾಡಿರುವ ಅವರು, ಸದ್ಯ ಸೋಂಕು ಪ್ರಸರಣ ಕಡಿತವಾಗಿದ್ದರೂ, ಕೆಲವು ದಿನಗಳ ಅನಂತರ ಹೊಸ ಸೋಂಕು ಪ್ರಕರಣಗಳು ಸಾಮಾನ್ಯವಾಗಿ ಪತ್ತೆಯಾಗಬಹುದು. ಆಗ ಇಷ್ಟು ದಿನ ನಾವು ಪಟ್ಟ ಶ್ರಮವೆಲ್ಲಾ ಹಾಳಾಗುತ್ತದೆ. ಹಾಗಾಗಿ ಸಡಿಲಿಕೆಯಲ್ಲಿ ವಿನಾಯಿತಿ ನೀಡುವಾಗ ನೂರು ಬಾರಿ ಯೋಚಿಸಿ ಎಂದು ಪ್ರತಿಯೊಂದು ರಾಜ್ಯದ ಆಡಳಿತಗಾರರಿಗೆ ಕಿವಿಮಾತು ಹೇಳಿದ್ದಾರೆ.
Advertisement