Advertisement

ಜು. 16ರಿಂದ ಜರ್ಮನ್‌ ಭಾಷಾ ತರಗತಿ

02:35 AM Jul 13, 2017 | Team Udayavani |

ಲೇಡಿಹಿಲ್‌: ಸಂದೇಶ ಪ್ರತಿಷ್ಠಾನ ಮತ್ತು ಎಡ್ವಿಯೊ ಲಾಂಗ್ವೇಜ್‌ ಇನ್ಸ್‌ಟಿಟ್ಯೂಟ್‌ನ ಆಶ್ರಯದಲ್ಲಿ ಜರ್ಮನ್‌ ಭಾಷಾ ತರಗತಿ ಜು. 16ರಿಂದ ಆರಂಭವಾಗಲಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಎಡ್ವಿಯೊ ಲಾಂಗ್ವೇಜ್‌ ಇನ್ಸ್‌ಟಿಟ್ಯೂಟ್‌ನ ಮುಖ್ಯ ಭಾಷಾ ತರಬೇತುದಾರ ಗೋವಿಂದ್‌ ಬೆಳಗಾಂವ್ಕರ್‌, ಜರ್ಮನಿಯ ಸರಕಾರಿ ಸಂಸ್ಥೆ ಮ್ಯಾಕ್ಸ್‌ ಮುಲ್ಲರ್‌ ಭವನ್‌/ಗ್ಯೋಠ ಇನ್ಸ್‌ಟಿಟ್ಯೂಟ್‌ ನಡೆಸುವ ಅಂತಾರಾಷ್ಟ್ರೀಯ ಮಟ್ಟದ ಭಾಷಾ ಪರೀಕ್ಷೆಗೆ ತರಬೇತುಗೊಳಿಸಲಾಗುತ್ತದೆ. ಜರ್ಮನಿಯಲ್ಲಿ ಹೆಚ್ಚಿನ ವ್ಯಾಸಂಗ ಮಾಡಬಯಸುವ ಅಥವಾ ಅಲ್ಲಿ ಉದ್ಯೋಗ ಪಡೆಯಲು ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ ಎಂದರು.

Advertisement

ಪ್ರತಿ ತರಗತಿಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಐದು ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ಇದೆ. ಇಂತಹ ವಿದ್ಯಾರ್ಥಿಗಳು ಪ್ರಾಂಶುಪಾಲರಿಂದ ದೃಢೀಕರಣ ಪತ್ರ ತರಬೇಕು ಮತ್ತು ಉತ್ತಮ ಹಾಜರಾತಿ ಹೊಂದಿರಬೇಕು. ಅಂತಹ ವಿದ್ಯಾರ್ಥಿಗಳು ಭರಿಸಿದ ತರಬೇತಿ ಶುಲ್ಕದ ಶೇ. 30ರಷ್ಟು ಹಣವನ್ನು ಅವರಿಗೆ ಮರಳಿಸಲಾಗುವುದು ಎಂದು ಅವರು ತಿಳಿಸಿದರು. ಸಂಜೆ 6ರಿಂದ 8.30ರವರೆಗೆ ತರಗತಿಗಳು ನಡೆಯುತ್ತವೆ. ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಮಾರ್ಪಾಡುಗೊಳಿಸಲೂ ಅವಕಾಶವಿದೆ. ಆರು ಮಟ್ಟಗಳಲ್ಲಿ ತರಗತಿಗಳು ನಡೆಯಲಿದ್ದು, ಪ್ರಸ್ತುತ ಎ.1 ಮಟ್ಟದ ತರಗತಿಗಳು ನಡೆಯಲಿವೆ. ಮೂರು ತಿಂಗಳ ಅವಧಿಯಲ್ಲಿ ವಿದ್ಯಾರ್ಥಿಗಳು ಒಟ್ಟು 120 ಗಂಟೆಯ ತರಬೇತಿ ಪಡೆಯಲಿದ್ದಾರೆ ಎಂದು ವಿವರಿಸಿದರು. ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ| ವಿಕ್ಟರ್‌ ವಿಜಯ ಲೋಬೊ, ಸಹ ನಿರ್ದೇಶಕ ವಿಕ್ಟರ್‌ ಕ್ರಾಸ್ತಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next