Advertisement

Georgia Voll: ಆಸ್ಟ್ರೇಲಿಯ ತಂಡದಲ್ಲಿ ಮುಂದುವರಿದ ವೋಲ್‌

10:56 PM Dec 10, 2024 | Team Udayavani |

ಮೆಲ್ಬರ್ನ್: ಪ್ರಸಕ್ತ ಭಾರತದೆದುರಿನ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಆಸ್ಟ್ರೇಲಿಯದ ಆರಂಭಿಕ ಆಟಗಾರ್ತಿ ಜಾರ್ಜಿಯಾ ವೋಲ್‌ ತಂಡದಲ್ಲಿ ಮುಂದುವರಿದಿದ್ದು, ಮುಂಬರುವ ನ್ಯೂಜಿಲ್ಯಾಂಡ್‌ ಸರಣಿಗೆ ಆಯ್ಕೆಯಾಗಿದ್ದಾರೆ.

Advertisement

21 ವರ್ಷದ ವೋಲ್‌ ಗಾಯಾಳು ಅಲಿಸ್ಸಾ ಹೀಲಿ ಬದಲು ಸ್ಥಾನ ಪಡೆದು, ಭಾರತದೆದುರಿನ ಮೊದಲ ಪಂದ್ಯದಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಿದ್ದರು. ಇದರಲ್ಲಿ ವೋಲ್‌ ಗಳಿಕೆ ಅಜೇಯ 46 ರನ್‌. ದ್ವಿತೀಯ ಪಂದ್ಯದಲ್ಲಿ ಅಮೋಘ ಸೆಂಚುರಿ ಬಾರಿಸಿ ಆಸ್ಟ್ರೇಲಿಯದ ದಾಖಲೆ ಮೊತ್ತಕ್ಕೆ ಕಾರಣರಾಗಿದ್ದರು. 2 ಪಂದ್ಯಗಳಲ್ಲಿ ಒಟ್ಟು 147 ರನ್‌ ಮಾಡಿ ಅಗ್ರಪಂಕ್ತಿಯಲ್ಲಿದ್ದಾರೆ.ಹೀಗೆ, ಲಭಿಸಿದ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡು ಖಾಯಂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವನಿತಾ ಬಿಗ್‌ ಬಾಶ್‌ನಲ್ಲಿ ಸಿಡ್ನಿ ಥಂಡರ್‌ ಪರ ಆಡುವ ಜಾರ್ಜಿಯಾ ವೋಲ್‌, 2024ರ ಸರಣಿಯ 12 ಪಂದ್ಯಗಳಿಂದ 330 ರನ್‌ ಬಾರಿಸಿದ್ದರು.
ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ನಡುವೆ 3 ಏಕದಿನ ಪಂದ್ಯಗಳನ್ನು ಆಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next