ಕೊಲಂಬಿಯಾ : ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿ ಇರಾಕಿನ ವ್ಯಕ್ತಿಯೊಬ್ಬ ತೀಕಾರವಾಗಿ ಬಂಧನಕ್ಕೊಳಗಾಗಿದ್ದಾನೆ ಎಂದು ಸರಕಾರ ಘೋಷಿಸಿದೆ.
ಬಂಧಿತ ಆರೋಪಿ 52 ವರ್ಷದ ಶಿಹಾಬ್ ಅಹ್ಮದ್ ಎನ್ನುವವನಾಗಿದ್ದು, ಎರಡು ವರ್ಷಗಳ ಹಿಂದೆ ಅಮೆರಿಕಕ್ಕೆ ಬಂದು ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿ, ಇರಾಕ್ ಯುದ್ಧದ ಸಮಯದಲ್ಲಿ ದೇಶವಾಸಿಗಳ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಸಂಚು ರೂಪಿಸಿದ್ದ. ಈತ ಇರಾಕಿಗಳನ್ನು ಮೆಕ್ಸಿಕೋದಿಂದ ಅಮೆರಿಕಕ್ಕೆ ಕಳ್ಳಸಾಗಣೆ ಮಾಡಲು ಯೋಜಿಸಿದ್ದನು ಎಂದು ಕೊಲಂಬಸ್‌ನ ಫೆಡರಲ್ ನ್ಯಾಯಾಲಯದಲ್ಲಿ ಸಲ್ಲಿಸಿದ ಕ್ರಿಮಿನಲ್ ದೂರಿನ ಪ್ರಕಾರ ತಿಳಿದು ಬಂದಿದೆ.
ಶಿಹಾಬ್ ಇಸ್ಲಾಮಿಕ್ ಸ್ಟೇಟ್ ಉಗ್ರ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದ ಎಂದು ಹೇಳಲಾಗಿದ್ದು, ಗೌಪ್ಯ ಮಾಹಿತಿದಾರರು ಏಪ್ರಿಲ್ 2021 ರಿಂದ ಈ ತಿಂಗಳವರೆಗೆ ಎಫ್‌ಬಿಐಗೆ ಮಾಹಿತಿ ನೀಡಿದ್ದರಿಂದ ಆತನ ಸಂಚು ಕಾರ್ಯರೂಪಕ್ಕೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಬೋಕೋ ಹರಾಂ ಉಗ್ರರಿಂದ ನರಮೇಧ; ನೈಜೀರಿಯಾದಲ್ಲಿ 50 ರೈತರ ಹತ್ಯೆ, ಹಲವರು ಚಿಂತಾಜನಕ
ತಪ್ಪಿತಸ್ಥ ಎಂದು ಸಾಬೀತಾದರೆ, ಶಿಹಾಬ್ ಗೆ 30 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು500,000 ಡಾಲರ್ ದಂಡವನ್ನು ತೆರಬೇಕಾಗುತ್ತದೆ.