Advertisement
ಇದನ್ನೂ ಓದಿ:ಇತಿಹಾಸದ ಪುಟ ಸೇರಲಿದೆ ಭದ್ರಾವತಿಯ ವಿಐಎಸ್‌ಎಲ್; 4200 ಮನೆಗಳ ಕಥೆ ಏನು?
ಎಂದು ಕಿಡಿಕಾರಿದೆ.
Related Articles
Advertisement
ಸ್ಮತಿ ಇರಾನಿ ಆಕ್ರೋಶ: ಈ ಹಿನ್ನೆಲೆ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವೆ ಸ್ಮತಿ ಇರಾನಿ, “ಆರ್ಥಿಕ ಯುದ್ಧಾಪರಾಧಿ’ ಆಗಿರುವ ಸೊರೊಸ್ ಈಗ ಭಾರತದ ವಿರುದ್ಧ ತನ್ನ ದುರುದ್ದೇಶವನ್ನು ಸಾಧಿಸಲು ಹೊರಟಿದ್ದಾರೆ. ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಪತನಕ್ಕೆ ಕಾರಣವಾದ ವ್ಯಕ್ತಿಯು, ಭಾರತದ ಪ್ರಜಾಸತ್ತೆಯನ್ನು ನಾಶ ಮಾಡಲು ಮುಂದಾಗಿದ್ದಾರೆ.
ತಮ್ಮಿಷ್ಟದ ವ್ಯಕ್ತಿಗಳು ಅಧಿಕಾರದಲ್ಲಿ ಇರಬೇಕು ಎಂಬ ಉದ್ದೇಶದಿಂದ ಬೇರೆ ಬೇರೆ ದೇಶಗಳ ಸರಕಾರಗಳನ್ನು ಪತನಗೊಳಿಸಲು ಇಂಥ ಶಕ್ತಿಗಳು ಪ್ರಯತ್ನ ಪಡುತ್ತಲೇ ಇರುತ್ತವೆ ಎಂದಿದ್ದಾರೆ. ಸೊರೊಸ್ ಪರ ಯಾವುದೇ ರಾಜಕೀಯ ಪಕ್ಷಗಳು ಮಾತನಾಡಿ ದರೂ ಅವರ ಬಣ್ಣವನ್ನು ದೇಶದ ಮತದಾರರು ಬಯಲು ಮಾಡಲಿದ್ದಾರೆ ಎಂದೂ ಇರಾನಿ ಎಚ್ಚರಿಸಿದ್ದಾರೆ.
ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಪ್ರತಿಕ್ರಿಯಿಸಿ, “ಸೊರೊಸ್ ಹೇಳಿಕೆ ಖಂಡಿಸಲೆಂದೇ ಇಡೀ ಬಿಜೆಪಿಯ ಟ್ರೋಲ್ ಸಚಿವಾಲಯಗಳು ಪತ್ರಿಕಾಗೋಷ್ಠಿ ನಡೆಸುತ್ತವೆ. ಇಸ್ರೇಲ್‌ನ ಪೆಗಾಸಸ್ ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದ್ದರ ಬಗ್ಗೆ ಸಚಿವರು ಏನೂ ಮಾತನಾಡಿಲ್ಲವೇಕೆ? ಅದು ನಿಜಕ್ಕೂ ದೇಶದ ಪ್ರಜಾಸತ್ತೆಗೆ ಅತೀ ದೊಡ್ಡ ಅಪಾಯ ಉಂಟುಮಾಡಿತ್ತಲ್ಲವೇ’ ಎಂದು ಪ್ರಶ್ನಿಸಿದ್ದಾರೆ.
ಅದಾನಿ ಪ್ರಕರಣವು ಭಾರತದಲ್ಲಿ ಪ್ರಜಾಸತ್ತಾತ್ಮಕ ಪುನರುತ್ಥಾನಕ್ಕೆ ಕಾರಣವಾಗುತ್ತದೋ, ಇಲ್ಲವೋ ಎನ್ನುವುದು ಕಾಂಗ್ರೆಸ್, ಇತರ ವಿಪಕ್ಷಗಳು ಹಾಗೂ ನಮ್ಮ ಚುನಾವಣಾ ಪ್ರಕ್ರಿಯೆಯನ್ನು ಅವಲಂಬಿಸಿದೆ. ಅದಕ್ಕೂ ಸೊರೊಸ್‌ಗೂ ಸಂಬಂಧವಿಲ್ಲ. ಅವರ ಹಸ್ತಕ್ಷೇಪ ಮಾಡಬೇಕಾಗಿಲ್ಲ.● ಜೈರಾಂ ರಮೇಶ್ ಕಾಂಗ್ರೆಸ್ ನಾಯಕ